ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಮಜ್ದೂರ್ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತರವರ ಆದೇಶದ ಮೇರೆಗೆ ಪಟ್ಟಣದ ಕೇಶವ್ ಮೇಸ್ತ ಇವರನ್ನು ಜಿಲ್ಲಾ ಮಜ್ದೂರ್ ಕಾಂಗ್ರೇಸ್ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷರಾಗಿ, ಕೂಲಿ ಕಾರ್ಮಿಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಶನಿವಾರ ಕಾಂಗ್ರೇಸ್ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತ,ಮಾಜಿ ಶಾಸಕಿ ಶಾರದಾ ಶೆಟ್ಟಿ ಸಮ್ಮುಖದಲ್ಲಿ ಅಧಿಕಾರದ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗಣಪತಿ ಮೇಸ್ತ, ರಾಘವೇಂದ್ರ ಮೇಸ್ತ, ಶ್ರೀರಾಮ್ ಜದುಗಾರ ಉಪಸ್ಥಿತರಿದ್ದರು.

Leave a Comment