• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಾಳಿ-ಮಳೆ; ಕಾರ್ಮಿಕನ ಸಂಪೂರ್ಣ ಮನೆ ಕುಸಿತ

September 27, 2020 by Vishwanath Shetty Leave a Comment

ಹೊನ್ನಾವರ: ಭಾರಿ ಮಳೆ-ಗಾಳಿಗೆ ಬಡ ಕೂಲಿ ಕಾರ್ಮಿಕರೊಬ್ಬರ ಮಣ್ಣಿನ ಮನೆ ಕುಸಿದುಬಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರು ಹಳ್ಳುಮೂಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

watermarked IMG 0252

Table of Contents

Toggle
  • ಶಿರೂರು ಹಳ್ಳಿಮೂಲೆ ನಿವಾಸಿ ಮಂಜುನಾಥ ಗಣಪತಿ ನಾಯ್ಕ ಎಂಬುವರಿಗೆ ಸೇರಿದ ಮನೆಯಾಗಿದ್ದು, ಶುಕ್ರವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿದ ಕೆಲ ಹೊತ್ತಲ್ಲಿ ಒಂದು ಭಾಗದ ಗೋಡೆ ಕುಸಿದು ಬಿದ್ದ ಶಬ್ಧ ಮನೆಯವರಿಗೆ ಕೇಳಿಸಿದೆ. ಗಾಬರಿಗೊಂಡ ಮಂಜುನಾಥ ಹಾಗೂ ಅವರ ಪತ್ನಿ ಮೂವರು ಮಕ್ಕಳನ್ನು ಮನೆಯ ಹೊರಕ್ಕೆ ಕರೆದೊಯ್ದಿದ್ದಾರೆ. ನೋಡನೋಡುತ್ತಲೆ ಪೂರ್ಣ ಪ್ರಮಾಣದಲ್ಲಿ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸಮಯಪ್ರಜ್ಞೆ ಮೆರೆದಿದ್ದರಿಂದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಹಾಗೂ ಮನೆಯವರು ರಾತ್ರಿ ಊಟ ಮುಗಿಸಿ 11 ಗಂಟೆ ಸುಮಾರಿಗೆ ಅಲ್ಲಿಯೇ ಮಲಗಿ ನಿದ್ರಿಸುತ್ತಿದ್ದರು. ಆದರೆ ಊಟ ಮುಗಿದ ಕ್ಷಣಾರ್ಧದಲ್ಲಿ ಈ ಘಟನೆ ಸಂಭವಿಸಿರುವುದು ಬಡ ಕೂಲಿ ಕಾರ್ಮಿಕನ ಕುಟುಂಬ ಬದುಕುಳಿದಿದೆ. ಮನೆ ಕುಸಿತದಿಂದ ಅಕ್ಕಿ, ಬೇಳೆ-ಕಾಳು, ವಿದ್ಯುತ್ ಉಪಕರಣಗಳು, ಮನೆಗೆ ಹಾಕಲಾದ ಹೆಂಚು, ಕಟ್ಟಿಗೆ ಸಾಮಗ್ರಿಗಳು ನುಜ್ಜುಗುಜ್ಜಾಗಿದ್ದು, 3 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ವಿವೇಕ ಶೇಣ್ವಿ, ಗ್ರಾಪಂ ಸಿಬ್ಬಂಧಿಗಳಾದ ರವಿ ನಾಯ್ಕ, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    • Share this:
    • Related News:

ಶಿರೂರು ಹಳ್ಳಿಮೂಲೆ ನಿವಾಸಿ ಮಂಜುನಾಥ ಗಣಪತಿ ನಾಯ್ಕ ಎಂಬುವರಿಗೆ ಸೇರಿದ ಮನೆಯಾಗಿದ್ದು, ಶುಕ್ರವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿದ ಕೆಲ ಹೊತ್ತಲ್ಲಿ ಒಂದು ಭಾಗದ ಗೋಡೆ ಕುಸಿದು ಬಿದ್ದ ಶಬ್ಧ ಮನೆಯವರಿಗೆ ಕೇಳಿಸಿದೆ. ಗಾಬರಿಗೊಂಡ ಮಂಜುನಾಥ ಹಾಗೂ ಅವರ ಪತ್ನಿ ಮೂವರು ಮಕ್ಕಳನ್ನು ಮನೆಯ ಹೊರಕ್ಕೆ ಕರೆದೊಯ್ದಿದ್ದಾರೆ. ನೋಡನೋಡುತ್ತಲೆ ಪೂರ್ಣ ಪ್ರಮಾಣದಲ್ಲಿ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸಮಯಪ್ರಜ್ಞೆ ಮೆರೆದಿದ್ದರಿಂದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಹಾಗೂ ಮನೆಯವರು ರಾತ್ರಿ ಊಟ ಮುಗಿಸಿ 11 ಗಂಟೆ ಸುಮಾರಿಗೆ ಅಲ್ಲಿಯೇ ಮಲಗಿ ನಿದ್ರಿಸುತ್ತಿದ್ದರು. ಆದರೆ ಊಟ ಮುಗಿದ ಕ್ಷಣಾರ್ಧದಲ್ಲಿ ಈ ಘಟನೆ ಸಂಭವಿಸಿರುವುದು ಬಡ ಕೂಲಿ ಕಾರ್ಮಿಕನ ಕುಟುಂಬ ಬದುಕುಳಿದಿದೆ. ಮನೆ ಕುಸಿತದಿಂದ ಅಕ್ಕಿ, ಬೇಳೆ-ಕಾಳು, ವಿದ್ಯುತ್ ಉಪಕರಣಗಳು, ಮನೆಗೆ ಹಾಕಲಾದ ಹೆಂಚು, ಕಟ್ಟಿಗೆ ಸಾಮಗ್ರಿಗಳು ನುಜ್ಜುಗುಜ್ಜಾಗಿದ್ದು, 3 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ವಿವೇಕ ಶೇಣ್ವಿ, ಗ್ರಾಪಂ ಸಿಬ್ಬಂಧಿಗಳಾದ ರವಿ ನಾಯ್ಕ, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

watermarked 26 HNR 01
ಸೂರು ಕಲ್ಪಿಸಿಕೊಡಿ: ಕೂಲಿ-ನಾಲಿ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ಸಂಸಾರವನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ ನಾಯ್ಕ ಅವರಿಗೆ ಈಗ ಮನೆ ಕಳೆದುಕೊಂಡಿರುವುದು ಆಘಾತ ತಂದಿದೆ. ಯಾವುದೇ ಮೂಲ ಆದಾಯ ಇಲ್ಲದಿರುವುದರಿಂದ ಜೀವನ ಸಾಗಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ನಡುವೆ ಮಳೆಯ ಆರ್ಭಟಕ್ಕೆ ಮನೆಯನ್ನೂ ಕಳೆದುಕೊಂಡಿರುವ ಮಂಜುನಾಥ ಅವರು ಜನಪ್ರತಿನಿಧಿಗಳ, ಅಧಿಕಾರಿಗಳ ಸಹಾಯ-ಸಹಕಾರ ಬಯಸಿದ್ದಾರೆ. `ಹೇಗಾದರೂ ಜೀವನ ಸಾಗಿಸುತ್ತೇನೆ, ಆದರೆ ಉಳಿಯಲು ಮನೆಯನ್ನು ಕಲ್ಪಿಸಿಕೊಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಊರಿನ ಗ್ರಾಮಸ್ಥರು ಈಗಾಗಲೆ ಕುಸಿದ ಮನೆಯನ್ನು ತೆರವುಗೊಳಿಸಿ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಂಜುನಾಥ ಅವರ ನೆರವಿಗೆ ಧಾವಿಸಬೇಕು ಎಂದು ಊರಿನ ಪ್ರಮುಖರಾದ ಕಮಲಾಕರ ನಾಯ್ಕ, ಮಂಜುನಾಥ ನಾಯ್ಕ, ಗಜಾನನ ಗೌಡ, ಪರಮೇಶ್ವರ ನಾಯ್ಕ, ಮಂಜುನಾಥ ಗೌಡ, ರತ್ನಾಕರ ನಾಯ್ಕ, ಗಣಪತಿ ನಾಯ್ಕ, ಲೋಕೇಶ ನಾಯ್ಕ ಇತರರು ಆಗ್ರಹಿಸಿದ್ದಾರೆ. 

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: the Chandavaram grapevine, the families escape the clay, the family home, the mercenaries, the mud house collapses, the perpetual rain., the school, the Shirur village, the three children, The wall and the roof collapses, ಎಡೆಬಿಡದೆ ಸುರಿದ ಮಳೆಗೆ ಈ ಅವಘಡ, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಕೂಲಿ-ನಾಲಿ ಮಾಡಿ, ಗೋಡೆ ಮತ್ತು ಮೇಲ್ಛಾವಣಿ ಕುಸಿದು, ಚಂದಾವರ ಗ್ರಾಪಂ ವ್ಯಾಪ್ತಿಯ, ಮಣ್ಣಿನ ಮನೆ ಕುಸಿದುಬಿದ್ದು, ಮನೆ ಸಂಸಾರ, ಮೂವರು ಮಕ್ಕಳ, ವಿದ್ಯಾಭ್ಯಾಸ, ಶಿರೂರು ಹಳ್ಳುಮೂಲೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...