ಆರೋಗ್ಯಕರವಾದ ಬಾಳೆ ದಿಂಡಿನ ಕೋಸಂಬರಿ | ಮೂತ್ರಪಿಂಡದ ಕಲ್ಲಿಗೆ ಮನೆಮದ್ದು – ಆರೋಗ್ಯಕರ, ಪೌಷ್ಠಿಕಾಂಶಯುಕ್ತ, ತಾಜಾ ಸಲಾಡ್ ಅನ್ನು ಬಾಳೆ ದಿಂಡಿನಿಂದ ತಯಾರಿಸಲಾಗಿದೆ. ಬಾಳೆ ಗಿಡದ ಪ್ರಯೋಜನಗಳು ಕೇವಲ ಹಣ್ಣಿಗೆ ಸೀಮಿತವಾಗಿಲ್ಲ. ಬಾಳೆ ದಿಂಡು ಮತ್ತು ಬಾಳೆ ಹೂವು ಸಹ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ, ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ.

ಬಾಳೆ ದಿಂಡಿನ ಕೋಸಂಬರಿ – ಇದು ಕತ್ತರಿಸಿದ ಬಾಳೆ ದಿಂಡು, ನೆನೆಸಿದ ಹೆಸರುಬೇಳೆ ಮತ್ತು ತಾಜಾ ಕತ್ತರಿಸಿದ ತರಕಾರಿಗಳಿಂದ ತಯಾರಿಸಿದ ಪೌಷ್ಠಿಕಾಂಶಯುಕ್ತ ಸಲಾಡ್ ಆಗಿದೆ. ನಾನು ಇಲ್ಲಿ ಯಾವುದೇ ಮಸಾಲೆ ಬಳಸಿಲ್ಲ, ನೀವು ಕಾಳು ಮೆಣಸಿನ ಪುಡಿ ಅಥವಾ ಹಸಿರು ಮೆಣಸಿನಕಾಯಿಗಳನ್ನು ಸೇರಿಸಬಹುದು.
ಇದಲ್ಲದೆ, ಬಾಳೆ ದಿಂಡನ್ನು ಪಲ್ಯ, ಪಚಡಿ, ಸೂಪ್, ಜ್ಯೂಸ್, ಕಟ್ಲೆಟ್ ಮತ್ತು ಇನ್ನೂ ಅನೇಕ ರೀತಿ ಅಡುಗೆಗಳಲ್ಲಿ ಬಳಸಲಾಗುತ್ತದೆ.
ಬಾಳೆ ದಿಂಡಿನ ಆರೋಗ್ಯ ಪ್ರಯೋಜನಗಳು :
ಬಾಳೆ ದಿಂಡು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ, ಅದಕ್ಕಾಗಿ ‘ಸೂಪರ್ಫುಡ್’ ಅಂತಲು ಕರೆಯುತ್ತಾರೆ.
ಮೊದಲಿಗೆ, ನಮ್ಮ ಆಹಾರದಲ್ಲಿ ಬಾಳೆ ದಿಂಡನ್ನು ಬಳಸುವುದು ಮೂತ್ರಪಿಂಡದ ಕಲ್ಲುಗಳಿಗೆ ಉತ್ತಮ ಮನೆಮದ್ದು. ಎರಡನೆಯದಾಗಿ, ಬಾಳೆ ದಿಂಡನ ರಸವನ್ನು ತೂಕ ಇಳಿಸಲು ಸಹ ಬಳಸುತ್ತಾರೆ.
Leave a Comment