• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು

September 30, 2020 by Lakshmikant Gowda Leave a Comment

ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.

watermarked 01 29 4

ಆದರೆ ಸ್ಮಶಾನವನ್ನೂ ಉದ್ಯಾನವನದಂತೆ ಒಪ್ಪ ಓರಣವಾಗಿಟ್ಟುಕೊಂಡು ಮುಕ್ತಿದಾಮ ಎನ್ನುವ ಹೆಸರಿಗೆ ಅನ್ವರ್ಥಕವಾಗಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಹೊನ್ನಾವರ ಪಟ್ಟಣ ವ್ಯಾಪ್ತಿಯ ಶರಾವತಿ ದಡದಲ್ಲಿರುವ ಹಿಂದೂ ರುದ್ರಭೂಮಿ.
ಹಸಿರು ಬಳ್ಳಿ, ಅರಳಿ ನಗುಬೀರಿದ ಹೂವುಗಳಿಂದಾವೃತ್ತವಾದ ಪ್ರವೇಶ ದ್ವಾರ, ಇಂಟರ್‍ಲಾಕ್ ನೆಲಹಾಸು, ಹತ್ತಿರದವರ ಸಾವಿನ ದುಗುಡ ಹೊತ್ತುಬರುವವರನ್ನು ಸ್ವಾಗತಿಸಲು ಬಣ್ಣ ಬಣ್ಣದ ಹೂವುಗಳನ್ನು ಹೆತ್ತು ಸಾಲಾಗಿ ನಿಂತಿರುವ ಗಿಡ ಮರ ಬಳ್ಳಿಗಳು ಉಸಿರು ಹಾರಿದ ದೇಹವ ದಹಿಸುವ ಬೆಂಕಿಯ ಕೆನ್ನಾಲಿಗೆಯ ಬಿಸಿ, ಚಿತೆಯಿಂದ ಹೊರಡುವ ಕಮಟು ವಾಸನೆಯ ಘಾಟು, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಕಂಬನಿಗಳೆಲ್ಲಾ ಸಂದಿಸುವ ತಾಣದ ಭಯಾನಕತೆಯನ್ನು ಕಳೆದಿದೆ ಇಲ್ಲಿ.

watermarked 01 29 3 scaled
watermarked 01 29 2 1 scaled


ಹೆಣ ಸುಡುವ ಕೆಲಸ ಎಂದರೆ ಶಿವನ ಬಿಟ್ಟಿ ಎನ್ನುವ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅದೇ ಕಾರಣಕ್ಕೆ ಲಯ ಕಾರಕನಾದ ಪರಶಿವನ ಮೂರ್ತಿಯೂ ಇಲ್ಲಿ ಪ್ರತಿಷ್ಠಾಪನೆಗೊಂಡಿದೆ. ಸತ್ಯ ಪರಿಪಾಲನೆಗಾಗಿ ಸುಡುಗಾಡು ಕಾಯ್ದ, ಮಗನ ಹೆಣ ಸುಡಲೂ ಬಿಡದೇ ಮಡದಿಯ ಶಿರ ಕಡಿದ ಹರಿಶ್ಚಂದ್ರನ ವಿಗ್ರಹಕ್ಕೂ ಇಲ್ಲಿ ಸ್ಥಾನ ನೀಡಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿರುವ ಅರ್ಬನ್ ಬ್ಯಾಂಕ್ ಹೊನ್ನಾವರ ಇವರು ಲಕ್ಷಾಂತರ ರುಪಾಯಿ ಖರ್ಚುಮಾಡಿ ಚಿತಾಗಾರವನ್ನು ನಿರ್ಮಿಸಿಟ್ಟಿದ್ದಾರೆ. ಅನಂತ ಸಾಂತಯ್ಯ ಕೊನೇರಿ, ಅನಂತ ಸುಬ್ರಾಯ ಭಟ್ಟ ಹಾಗೂ ಗ್ಲೇನ್ ಗ್ಯಾಬ್ರಿಯಲ್ ಗೋನ್ಸಾಲ್ವೀಸ್ ಅವರು ದಾನವಾಗಿ ಕೊಟ್ಟ ಜಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಜಿ ಸಚಿವ ಶಿವಾನಂದ ನಾಯ್ಕ, ಸಿಂಡಿಕೇಟ್ ಬ್ಯಾಂಕ್, ಪಟ್ಟಣಪಂಚಾಯತ ಹೊನ್ನಾವರ ಹಾಗೂ ಶರಾವತಿ ಮುಕ್ತಿಧಾಮ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ಸುಡುಗಾಡು ಸಹ ಸುಂದರವಾಗಿ ರೂಪುಗೊಂಡಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending, ಅಂಕಣಗಳು Tagged With: sarāvati muktidāma, the bad smell, the barking dogs, the blossom, the bony heap, the disgusting atmosphere, the frightening atmosphere, the gateway, The green vine, the half-baked bodies, the Hindu Rudrakshi. The green vine, the interlock floor, the nearest death grove, the Sharavati shore, the so-called graveyard, ಅರಳಿ ನಗುಬೀರಿದ ಹೂವು, ಅರಳಿ ನಗುಬೀರಿದ ಹೂವುಗಳಿಂದಾವೃತ್ತವಾದ ಪ್ರವೇಶ ದ್ವಾರ, ಅರ್ಧಂಬರ್ಧ ಬೆಂದ ದೇಹಗಳು, ಅಸಹ್ಯಕರ ಎನಿಸುವ, ಇಂಟರ್‍ಲಾಕ್ ನೆಲಹಾಸು, ಎಲುಬಿನ ರಾಶಿ, ಕೆಟ್ಟ ವಾಸನೆ, ಭಯ ಹುಟ್ಟಿಸುವ ವಾತಾವರಣ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಶರಾವತಿ ದಡ, ಶರಾವತಿ ಮುಕ್ತಿದಾಮ., ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ, ಹತ್ತಿರದವರ ಸಾವಿನ ದುಗುಡ, ಹಸಿರು ಬಳ್ಳಿ, ಹಿಂದೂ ರುದ್ರಭೂಮಿ. ಹಸಿರು ಬಳ್ಳಿ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...