ಲಯನ್ಸ್ ಕ್ಲಬ್ ಹೊನ್ನಾವರ ಇವರ ವತಿಯಿಂದ ತಾಲೂಕಿನ ನೆರೆ ಸಂತ್ರಸ್ತ 75 ಬಡಕುಟುಂಬಗಳಿಗೆ ಪರಿಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಲಯನ್ಸ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಂ.ಜೆ.ಎಫ್. ಗಿರೀಶ್ ಕುಚಿನಾಡ್ ಮಾತನಾಡಿ, ಲಯನ್ಸ್ ಇಂಟನ್ರ್ಯಾಷನಲ್ ಸಂಸ್ಥೆ ನೂರಾರು ವರ್ಷಗಳಿಂದ ತನ್ನ ಕೈಲಾದ ಸೇವೆಯನ್ನು ಸಮಾಜಕ್ಕೆ ಮಾಡುತ್ತ ಬಂದಿದೆ. ನನ್ನ ವ್ಯಾಪ್ತಿಗೆ ಗೋವಾ ಹಾಗೂ ಕರ್ನಾಟಕದ 10 ಕಂದಾಯ ಜಿಲ್ಲೆಗಳು ಬರುತ್ತಿದ್ದು, ಲಯನ್ಸ್ ಸಂಸ್ಥೆ ನಮ್ಮ ಡಿಸ್ಟಿಕ್ ವ್ಯಾಪ್ತಿಯಲ್ಲಿಯ ಶಾಲೆಗಳು ,ಆಸ್ಪತ್ರೆಗಳು, ವೃದ್ಧಾಶ್ರಮಗಳು, ಅಂಗವಿಕಲ ಸಂಸ್ಥೆಗಳು, ಅನೇಕ ಸಂಸ್ಥೆಗಳನ್ನು ಕಟ್ಟಿ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಈ ಎಲ್ಲಾ ಕಾರ್ಯಕ್ಕೆ ಲಯನ್ಸ ಸದಸ್ಯರ ಸಹಕಾರವೇ ಕಾರಣ ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಿಸ್ಟ್ರಿಕ್ ಕೋ ಆರ್ಡಿನೇಟರ್ ಎಂ,ಜಿ,ಎಫ್ ಲಯನ್ ಎಸ್.ಜೆ.ಕೈರನ್ ಮಾತನಾಡಿ ಹೊನ್ನಾವರದಲ್ಲಿ ನೆರೆ ಬಂದ ಸಂದರ್ಭದಲ್ಲಿ ಅನೇಕ ಕುಟುಂಬಗಳು ಕಷ್ಟಕ್ಕೆ ಸಿಲುಕಿತ್ತು. ಈ ವಿಚಾರವನ್ನು ನಮ್ಮ ಗವರ್ನರ್ ಮೂಲಕ ಇಂಟನ್ರ್ಯಾಷನಲ್ ಸಂಸ್ಥೆಗೆ ವಿನಂತಿಸಿದಾಗ ನಮ್ಮ ಹೊನ್ನಾವರಕ್ಕೆ 75 ಬಡಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ ಉಪಾಧ್ಯಕ್ಷರಾದ ಲಕ್ಷ್ಮಣ ತೇಲಂಗ, ಎನ್.ಜಿ.ಭಟ್, ವಿನೋದ ನಾಯ್ಕ, ಶೇಖರ್ ನಾಯ್ಕ, ಶಾಂತಾರಾಮ ನಾಯ್ಕ, ಉದಯ ನಾಯ್ಕ ಹಾಗೂ ಲಯನ್ಸ್ ಸದಸ್ಯರು ಹಾಜರಿದ್ದರು. ಸುಮಾರು 75 ಬಡ ಕುಟುಂಬಗಳಿಗೆ, ದಿನಸಿ ವಸ್ತು, ಬಟ್ಟೆ, ಮಾಸ್ಕ್, ಸ್ಯಾನಿಟೈಸರ್, ವಿತರಿಸಲಾಯಿತು.
ಲಯನ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಎಂ.ಜಿ.ನಾಯ್ಕ ವಂದಿಸಿದರು.
Leave a Comment