ರಾಜು ಬಿಜೆಪಿ ಉಪಾಧ್ಯಕ್ಷರಾದಂತಹ ವಿಜೆಯೇಂದ್ರ ಯಡಿಯೂರಪ್ಪನವರಿಗೆ ಕೊರೋನಾ ಸೋಂಕು ದೃಡವಾದ ಹಿನ್ನಲೆಯಲ್ಲಿ ಅಖಿಲ ಕರ್ನಾಟಕ ವಿಜೆಯೇಂದ್ರ ಯಡಿಯೂರಪ್ಪ ಸೇನೆ ವತಿಯಿಂದ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಇಡಗುಂಜಿಯ ಮಹಾಗಣಪತಿ ಸನ್ನಿದಿಗೆ ತೆರಳಿ ಬೇಗ ಗುಣಮುಖರಾಗಿ ಸಮಾಜಸೇವೆಗೆ ಬರಲಿ ಎನ್ನುವ ದೃಷ್ಟಿಯಿಂದ ವಿಶೇಷ ಪೂಜೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಸಂಕೊಳ್ಳಿ, ಕರಾವಳಿ ವಿಭಾಗದ ರಾಜ್ಯ ಕಾರ್ಯಕಾರಣಿ ಸದಸ್ಯ ನಾಗರಾಜ ಶೆಟ್ಟಿ ಬಾಳೆಗದ್ದೆ, ಮಹೇಶ ನಾಯ್ಕನಗರೆ, ಮಂಜುನಾಥ ಶೆಟ್ಟಿ, ಗಿರೀಶ ಮೇಸ್ತ, ರಾಘವೇಂದ್ರ ಗೌಡ ಮಾವಿನಕುರ್ವಾ ಮತ್ತಿತರರು ಹಾಜರಿದ್ದರು.
Leave a Comment