ಎಳೆಯ ಮಕ್ಕಳು ಆಡಿ ನಲಿಯುವುದಕ್ಕೆ, ಹಿರಿಯ ಜೀವಗಳ ವಿಹಾರ ಹಾಗೂ ಮನೋಲ್ಲಾಸಕ್ಕೆ ನೆರವಾಗಬೇಕಿದ್ದ ಪ್ರಭಾತನಗರದ ಉದ್ಯಾನವನ ನಿರ್ವಹಣೆಯಿಲ್ಲದ ಕಾರಣ ಇಂದು ಕೇವಲ ಕಳೆ ಬೆಳೆಯುವ ಸ್ಥಳವಾಗಿ ಬದಲಾಗಿದೆ.

ಜನವಸತಿ ಪ್ರದೇಶದಲ್ಲಿರುವ ಈ ಉದ್ಯಾನವನದಲ್ಲಿರುವ ಜೋಕಾಲಿಗಳ ಸರಪಳಿಗಳು ಜಂಗು ಹಿಡಿದು ತುಂಡಾಗಿ ಬೀಳುವುದೊಂದ ಬಾಕಿ ಇದೆ. ಜಾರು ಬಂಡಿ. ಕಲ್ಲಿನ ಮಂಚ ದೈಹಿಕ ಕಸರತ್ತುಗಳನ್ನು ಮಾಡಲೆಂದೇ ಕಬ್ಬಿಣದಿಂದ ತಯಾರಿಸಿದ ಅನೇಕ ಸಲಕರಣೆಗಳು ತೊಡಗಿಸಿದ ಬಂಡವಾಳಕ್ಕೆ ಸಾಕ್ಷಿ ಹೇಳುವುದಕ್ಕಷ್ಟೇ ಸೀಮಿತವಾದಂತಿದೆ.
ನೆಲಕ್ಕೆ ಹಾಸಿದ ಇಂಟರ್‍ಲಾಕ್, ನೆಟ್ಟಿದ್ದ ಹೂವಿನ ಗಿಡಗಳೂ ಕಾಣಿಸದಷ್ಟು ಪೊದೆ ಬೆಳೆದು ಹಾವು ಹೆಗ್ಗಣಗಳು ಸೇರಿಕೊಳ್ಳುವುದಕ್ಕೆ ಅನುಕೂಲವಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಉದ್ಯಾನವನ ನಿರ್ಮಿಸಿ ಅದನ್ನು ನಿರ್ವಹಿಸದೇ ಬಿಟ್ಟರೆ ಯಾರಿಗೂ ಪ್ರಯೋಜನವಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲುಮಾಡುವುದಕ್ಕೇ ಇಂತವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತದೆ. ಉದ್ಯಾನವನಗಳ ನಿರ್ಮಿಸಿ ಕೈ ತೊಳೆದುಕೊಳ್ಳುವ ಬದಲು ಅದರ ನಿರ್ವಹಣೆಗೂ ಮುತುವರ್ಜಿ ವಹಿಸಬೇಕು ಎನ್ನುವ ಮಾತು ಕೇಳಿಬರುತ್ತಿದೆ.

Leave a Comment