ಕುಮಟಾ: ತಾಲೂಕಾಸ್ಪತ್ರೆ ಎಕ್ಸರೇ ಘಟಕದ ಪೂರಕ ವ್ಯವಸ್ಥೆಗಾಗಿ ೧.೭೫ಲಕ್ಷರೂ ದೇಣಿಗೆಯನ್ನು ಉದ್ಯಮಿ ರಾಮನಾಥ(ಧಿರು) ಶಾನಭಾಗ ಅವರು ಬುಧವಾರ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ನೀಡಿದರು.

ಬಳಿಕ ಮಾತನಾಡಿದ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಎಕ್ಸರೇ ಯಂತ್ರದ ಕೊರತೆ ಇತ್ತು. ಶಾಸಕರ ಸಹಕಾರದಿಂದ ೩೦೦ ಎಂಎ ಹಾಗೂ ೫೦೦ ಎಂಎ ನ ಎರಡು ಹೊಸ ಎಕ್ಸರೇ ಯಂತ್ರಗಳು ಬಂದಿವೆ. ೫೦೦ ಎಂಎ ಯಂತ್ರದಿಂದ ಹೆಚ್ಚು ಸ್ಪಷ್ಟ ಚಿತ್ರಣಗಳು ದೊರೆಯಲಿದ್ದು ಕೆಲವೊಂದು ಪ್ರಕರಣಗಳಲ್ಲಿ ವೈದ್ಯರು ನಿಖರವಾಗಿ ಸಮಸ್ಯೆ ಪತ್ತೆ ಹಚ್ಚಬಹುದಾಗಿದೆ. ಈ ಯಂತ್ರಗಳ ಕೊಠಡಿಯಿಂದ ವಿಕಿರಣಗಳು ಹೊರ ಸೂಸದಂತೆ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ.ಹಾಗೆಯೇ ಇಲ್ಲಿನ ಡಯಾಲಿಸಿಸ್ ಘಟಕದಿಂದ ಹೊರ ಬರುವ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆಯನ್ನು ಕೂಡಾ ಅಳವಡಿಸಲಾಗಿದೆ. ಈ ಎಲ್ಲ ಹೊಸ ಸೌಲಭ್ಯಗಳನ್ನು ಸದ್ಯದಲ್ಲೇ ಶಾಸಕ ದಿನಕರ ಶೆಟ್ಟಿ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ರಾಮನಾಥ ಶಾನಭಾಗ ಮಾತನಾಡಿ, ನಮ್ಮ ತಂದೆ ಶ್ರೀಧರ ಹಾಗೂ ತಾಯಿ ಶಾಂತಾಬಾಯಿ ಶಾನಭಾಗ ಸ್ಮರಣಾರ್ಥ ತಾಲೂಕಾಸ್ಪತ್ರೆಯ ಅತ್ಯಗತ್ಯ ವ್ಯವಸ್ಥೆಗಾಗಿ ೧.೭೫ ಲಕ್ಷರೂ ದೇಣಿಗೆ ನೀಡಿದ್ದು ಇದರಿಂದ ಇಲ್ಲಿ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬುದು ನಮ್ಮ ಉದ್ದೇಶ ಎಂದರು. ಈ ವೇಳೆ ಶಾಸಕ ದಿನಕರ ಶೆಟ್ಟಿ, ಡಾ. ಶ್ರೀನಿವಾಸ ನಾಯಕ ಇದ್ದರು.
Leave a Comment