ಹೊನ್ನಾವರ: ಉತ್ತಮ ಪುಸ್ತಕದ ಓದು ಹಾಗೂ ಬರವಣಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ.ಶಾಲಾ-ಕಾಲೇಜುಗಳು ಮುಚ್ಚಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಥ ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಸಲಹೆ ನೀಡಿದರು.

ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಶನಿವಾರ ಸಂಘಟಿಸಿದ್ದ ಆನ್ ಲೈನ್ ನೇರ ಪ್ರಸಾರ ಹಾಗೂ ವೀಡಿಯೋ ಮುದ್ರಣ ಪ್ರಸಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈ ಬರಹ ಪತ್ರಿಕೆ ‘ಬ್ಲೂಮ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಹೆಗಡೆ ಮಾತನಾಡಿ,’ಭಾಷೆ ಶುದ್ಧೀಕರಣ ಹಾಗೂ ವಿಚಾರ ಸ್ಪಷ್ಟನೆಗೆ ಬರವಣಿಗೆ ನೆರವಾಗುತ್ತದೆ.ಕೋವಿಡ್ ನ ಸಂಕಷ್ಟ ಪರಿಸ್ಥಿಯಲ್ಲೂ ಕೈಬರಹ ಪತ್ರಿಕೆಯನ್ನು ಹೊರತರುವಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.
ಕನ್ನಡ ಉಪನ್ಯಾಸಕಿ ಶಾರದಾ ಭಟ್ಟ ಸ್ವಾಗತಿಸಿ ಇಂಗ್ಲಿಷ್ ಉಪನ್ಯಾಸಕಿ ಕೆ.ಆರ್.ಶ್ರೀಲತಾ ವಂದಿಸಿದರು.

Leave a Comment