ಹೊನ್ನಾವರ: ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳೆ ಬಂದಿರುದರಿoದ ಬಹುಮತ ಪಡೆದಿರುವ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ.
ಹೊನ್ನಾವರ ಪಟ್ಟಣ ಪಂಚಾಯತಿ ಅಧ್ಯಕ್ಷಗಾದಿ ಯಾರಿಗೆ ಒಲಿಯಲಿದೆ ಎನ್ನುವ ಮಾತು ಪಟ್ಟಣದಾದ್ಯಂತ ಎಲ್ಲರಿಗೂ ಕುತೂಹಲ ಮೂಡಿಸಿದ್ದು ನೂತನ ಆದೇಶ ಹಲವರಲ್ಲಿ ದಿಗ್ಬಮೆ ಮೂಡಿಸಿದೆ. ಬಹುಮತಗಳಿಸಿದ ಬಿಜೆಪಿ ಆಕಾಂಕ್ಷಿಗಳಿoದ ಅಧ್ಯಕ್ಷಗಾದಿಯ ಕಸರತ್ತು ತೆರೆಮರೆಯಲ್ಲಿ ತುಸು ಜೋರಾಗಿಯೇ ಸಾಗಿದ್ದು ಉಪಾಧ್ಯಕ್ಷ ಸಾಮನ್ಯ ಮಹಿಳೆ ಬಂದಿರುವುದರಿoದ ಮಹಿಳೆಯರಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಹೊನ್ನಾವರ ಪಟ್ಟಣ ಪಂಚಾಯತಿಯನ್ನು ಶಾಸಕ ದಿನಕರ ಶೆಟ್ಟಿ ಪ್ರತಿಷ್ಟೆಯಾಗಿ ಸ್ವೀಕರಿಸಿ ಪಟ್ಟಣದ ಎಲ್ಲಾ ವಾರ್ಡಗಳಲ್ಲಿಯೂ ಸಂಚರಿಸಿ ೧೨ ವಾರ್ಡಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಮಲ ಅರಳಿಸುವಲ್ಲಿ ಯಶ್ವಸಿಯಾಗಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದಲೆ ಅಧ್ಯಕ್ಷಗಾದಿಯ ಕೂತೂಹಲ ಎಲ್ಲಡೆ ಮನೆ ಮಾಡಿತ್ತು



. ಬಿಜೆಪಿ ಅಲೆ ಹಾಗೂ ವರ್ಷದ ಹಿಂದಿನ ಪ್ರಕರಣದ ಕಿಚ್ಚು ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಿ ೨೦ ವಾರ್ಡಗಳಲ್ಲಿ ೧೨ ಸ್ಥಾನ ಬಿಜೆಪಿ ತೆಕ್ಕೆಗೆ ಒಲಿದಿತ್ತು. ಇದೀಗ ಮೀಸಲಾತಿ ಪ್ರಕಟವಾಗಿದ್ದು ಹಿಂದುಳಿದ ವರ್ಗ ಬಂದಿರುದರಿoದ ಪ್ರಮುಖ ಮೂವರಲ್ಲಿ ತುರುಸಿನ ಪೈಪೋಟಿ ಇದೆ ಎಂದು ಚರ್ಚೆಯಾಗುತ್ತಿದೆ. ಅಂದು ಕಾಂಗ್ರೇಸ್ ಬಿಜೆಪಿ ನಡುವೆ ಪೈಪೋಟಿ ಇದ್ದರೆ ಇಂದು ಪಕ್ಷದೊಳಗೆ ಪೈಪೋಟಿಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂದು ಪಕ್ಷದ ಆತಂರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೀನುಗಾರ ಸಮುದಾಯದವರೇ ಮೂವರಲ್ಲಿ ಪೈಪೋಟಿ ಇದ್ದು ಶಿವರಾಜ್ಮೇಸ್ತ ಮಹೇಶ, ವಿನೋದ ನಡುವೆ ಭಿರುಸಿನ ಪೈಪೋಟಿ ಇದೆ.
ಅಧ್ಯಕ್ಷ ಗಾದಿಯಲ್ಲಿ ಪೈಪೋಟಿಯಲ್ಲಿರುವ ಮೂವರು, ಮೀನುಗಾರ ಸಮುದಾಯದವರಾಗಿದ್ದು, ಪ್ರಥಮವಾಗಿ ಆಯ್ಕೆಯಾದವರೆ ಆಗಿರುವುದು ಯಾರಿಗೆ ದೊರೆಯಲಿದೆ
ಶಿವರಾಜ ಮೇಸ್ತ ಹೆಸರು ಈ ಹಿಂದಿನಿoದಲೂ ಕೇಳಿಬರುತ್ತಿದ್ದು, ಅನೇಕ ವರ್ಷದ ಪಕ್ಷ ಹಾಗೂ ಹಿಂದೂಪರ ಸಂಘಟನೆಯ ನೇತ್ರತ್ವ ವಹಿಸಿದ್ದರು. ಅಲ್ಲದೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಜೊತೆ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರಾಗಿರುದರಿಂದ ಶಿವರಾಜ ಮೇಸ್ತ ಹೆಸರು ಕೂಡಾ ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ. ಆಟೋ ಯೂನಿಯನ್ ಅಧ್ಯಕ್ಷರಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದು ಅತಿ ಹೆಚ್ಚು ಮತದ ಅಂತರದಿoದ ಗೆಲುವು ಸಾಧಿಸಿದ ಹಿರಿಮೆ ಇದೆ.
ಮಹೇಶ ಮೇಸ್ತ ವೃತ್ತಿಯಲ್ಲಿ ಆಟೋ ಚಾಲಕರು ಆಗಿದ್ದು ಬಿಜೆಪಿಯಿಂದ ಸ್ಪರ್ಧೆ ನಡೆಸಿ ಆಯ್ಕೆಯಾಗಿದ್ದರು. ಪಕ್ಷದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಜೊತೆ ಸಂಘ ಪರಿವಾರದ ಹಿನ್ನಲೆಯೆ ಇರುವುದರಿಂದ ಇವರು ಕೂಡಾ ಪೈಪೋಟಿಯಲ್ಲಿದ್ದಾರೆ.
ಇನ್ನೂರ್ವರಾದ ವಿನೋದ ಮೇಸ್ತ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ೨೩ದಿನಗಳ ಕಾಲ ಪರೇಶ ಮೇಸ್ತ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಿರುವದರಿಂದ ಇವರಿಗೆ ಒಲಿದರು ಅಚ್ಚರಿ ಇಲ್ಲ.
ಮೂವರು ಮಹಿಳೆಯರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ಇನ್ನು ಉಪಾಧ್ಯಕ್ಷ ಸ್ಥಾನ ಸಾಮನ್ಯ ಮಹಿಳೆಗೆ ಮೀಸಲಾಗಿರುದರಿಂದ ಬಿಜೆಪಿಯಿಂದ ಆಯ್ಕೆಯಾದ ನಾಲ್ವರು ಆಕಾಂಕ್ಷಿಗಳಾಗಿದ್ದು, ಮೇಧಾ ನಾಯ್ಕ, ನಿಶಾ ಶೇಟ್, ಸುಜಾತ ಮೇಸ್ತ, ಭಾಗ್ಯ ಮೇಸ್ತ ಪೈಪೋಟಿಯಲ್ಲಿದ್ದಾರೆ.




ಇದರಲ್ಲಿ ಹಿಂದಿನ ಅಧ್ಯಕ್ಷರನ್ನು ಸೋಲಿಸಿ ವಾರ್ಡನಿಂದ ಜಯಗಳಿಸಿದ್ದ ಮೇಧಾ ನಾಯ್ಕ ರಾಮಕ್ಷತ್ರೀಯ ಸಮಾಜದವರಾಗಿದ್ದು, ಮಾಜಿ ಶಾಸಕ ಎಂ.ಪಿ.ಕರ್ಕಿ ಅವಧಿಯಿಂದಲೂ ಬಿಜೆಪಿ ಒಡನಾಡಿಗಳಾಗಿದ್ದಾರೆ.
ಇನ್ನು ನಿಶಾ ಶೇಟ್ ಬಿಜೆಪಿ ಟಿಕೇಟ್ ಅಚ್ಚರಿಯಲ್ಲಿ ರೀತಿಯಲ್ಲಿ ಪಡೆದಿದ್ದರೂ ಪ್ರಥಮ ಬಾರಿಗೆ ಆಯ್ಕೆಯಾಗಿದ್ದರು. ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ದೈವಜ್ಞ ಬ್ರಾಹ್ಮಣ ಸಮಾಜದವರಾಗಿದ್ದಾರೆ.
ಇನ್ನು ಸುಜಾತ ಮೇಸ್ತ ಚಾರೋಡಿ ಸಮಾಜದವರಾಗಿದ್ದು ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ. ಪತಿ ಯೋಗಿಶ ಮೇಸ್ತ ಮೂಲಕ ಈ ಹಿಂದಿನಿoದಲೂ ಹಲವು ಸಮಾಜಮುಖಿ ಕಾರ್ಯದಲ್ಲಿರುದರಿಂದ ಸಹಜವಾಗಿಯೇ ಪೈಪೋಟಿಯಲ್ಲಿದ್ದಾರೆ.
ಇವರನ್ನು ಹೊರತುಪಡಿಸಿ ಭಾಗ್ಯ ಲೋಕೇಶ ಮೇಸ್ತ ಮೀನುಗಾರ ಸಮುದಾಯದವರಾಗಿರುವ ಜೊತೆ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸ್ಥಾನದಲ್ಲಿದ್ದಾರೆ. ಪೈಪೋಟಿಯಲ್ಲಿದ್ದರೂ ಒಂದೇ ಹುದ್ದೆ ಎಂದು ಬಿಜೆಪಿಯಲ್ಲಿರದರಿಂದ ಇವರಿಗೆ ಸಿಗುವುದು ಅನುಮಾನ ಎನ್ನಲಾಗುತ್ತಿದ್ದರೂ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಫೈನಲೂ ಮಾಡಿದರೂ ಅಚ್ಚರಿ ಇಲ್ಲ.
ಎಲ್ಲವು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಸಂಸದರು ಸೇರಿದಂತೆ ಪಕ್ಷದ ತಿರ್ಮಾಣವಾದರೂ ಶಾಸಕ ದಿನಕರ ಶೆಟ್ಟಿ ಮಣೆ ಹಾಕಿದವರಿಗೆ ಮಾನ್ಯತೆ ದೊರಕುವ ಸಂಭವ ದಟ್ಟವಾಗಿದೆ. ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ಬಳಿಕ ಪಕ್ಷದೊಳಗೆ ಬಣ ರಾಜಕೀಯ ಆರಂಭವಾಗುತ್ತದೆಯೋ ಅಥವಾ ವರಿಷ್ಟರ ನಿರ್ಧಾರಕ್ಕೆ ಜೈ ಎನ್ನುತ್ತಾರಾ ಎನ್ನುವುದು ಕಾದು ನೋಡಬೇಕಾಗಿದೆ.
Leave a Comment