“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅನುಷ್ಠಾನದಲ್ಲಿ ರಾಜ್ಯಮಟ್ಟದ ಸಾಧನೆ ತೋರಿದ್ದ ಆಸ್ಪತ್ರೆಯ ಮುಡಿಗೆ ಮತ್ತೊಂದು ಸಾಧನೆಯ ಗರಿ”
ಹೊನ್ನಾವರ – ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಗೂಡಾಗಿರುವ ಅವ್ಯವಸ್ಥೆಗಳ ಆಗರ ಎನ್ನುವ ಆರೋಪ ಮಾಮೂಲಿ ಆದರೆ ಹೊನ್ನಾವರ ತಾಲೂಕಾಸ್ಪತ್ರೆ ಈ ಅಪವಾದವನ್ನೆಲ್ಲಾ ಕಳೆದುಕೊಂಡು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಉತ್ತಮ ದಾಖಲಾತಿ ನಿರ್ವಹಣೆಯ ಜೊತೆ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ 2019 -20 ನೇ ಸಾಲಿನಲ್ಲಿ ಕಾಯಕಲ್ಪದಲ್ಲಿ 90 ಅಂಕ ಗಳಿಸಿ ತಾಲೂಕಾಸ್ಪತ್ರೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಅವರ ನೇತೃತ್ವದಲ್ಲಿ ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆಯಿಲ್ಲದಂತ ಉತ್ತಮ ಸೇವೆ ನೀಡುತ್ತಿದ್ದಾರೆ. ಆಸ್ಪತ್ರೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದ್ದು,ವಾಹನಗಳಿಗೆ ಪಾರ್ಕಿಂಗ ವ್ಯವಸ್ಥೆಕಲ್ಪಿಸಲಾಗಿದೆ. ಆಸ್ಪತ್ರೆಯ ಹಿಂಭಾಗದಲ್ಲಿಗಾರ್ಡನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.


ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದ ಸಂಗತಿಯನ್ನು ಸಂತಸದಿಂದಲೇ ಹಂಚಿಕೊಂಡ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶಕಿಣಿ ಅವರು ಈ ಸ್ಥಾನಕ್ಕೆ ಬರಲು ನಮ್ಮ ಆಸ್ಪತ್ರೆಯ ನಾನ್ಕ್ಲಿನಿಕಲ್ ಸಿಬ್ಬಂದಿಗಳ ಪರಿಶ್ರಮವನ್ನು ಮರೆಯುವಂತಿಲ್ಲ. ಅಂತೆಯೇಆಸ್ಪತ್ರೆಯಎಲ್ಲ ಸಿಬ್ಬಂಧಿಗಳು ಮತ್ತು ಸಹದ್ಯೋಗಿ ವೈದ್ಯಾಧಿಕಾರಿಗಳ ಕರ್ತವ್ಯ ಬದ್ದತೆ ನಾವು ಇವತ್ತು ಈ ಸ್ಥಾನದಲ್ಲಿಇರಲುಕಾರಣವಾಗಿದೆ.ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವುಅಗತ್ಯಎಂದುಅಭಿಪ್ರಾಯಪಟ್ಟರು.


ತಾಲೂಕಾಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳು
ಆಸ್ಪತ್ರೆಯಲ್ಲಿಗರ್ಭೀಣಿ, ಮಕ್ಕಳ, ಕಿವಿ ಮತ್ತುಗಂಟಲು ಮೂಗು, ಚರ್ಮ, ಎಲಬು ಮತ್ತು ಕೀಲು, ಶಸ್ತ್ರಚಿಕಿತ್ಸೆ, ದಂತ, ಹೃದಯ ಮತ್ತು ಸಾಮನ್ಯ ಖಾಯಿಲೆ,ಅರವಳಿಕೆ ವಿಭಾಗಳಲ್ಲಿ ತಜ್ಞ ವೈದ್ಯರುಗಳು ಸೇವೆ ನೀಡುತ್ತಿದ್ದಾರೆ. ಆಯ್ಯುಷ ವಿಭಾಗದಲ್ಲಿಇಬ್ಬರು ವೈದ್ಯರುಗಳು ಸೇವೆಗೆ ಲಭ್ಯರಿದ್ದಾರೆ.ಎಕ್ಸ್ರೇ, ರಕ್ತ ಪರೀಕ್ಷೆ, ಐ.ಸಿ,ಟಿ.ಸಿ/ಲಿಂಕ್ಎ.ಆರ್.ಟಿ ವಿಭಾಗ,ಇಸಿಜಿ ಪರೀಕ್ಷೆ, ರಕ್ತ ಸಂಗ್ರಹಣಾ ಕೇಂದ್ರಗಳು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಿದೆ. ಕ್ಷಯರೋಗ ಪತ್ತೆ ಮಾಡುವಉನ್ನತತಂತ್ರಜ್ಞಾನದ ಸಿ.ಬಿ.ನ್ಯಾಟ್ಯಂತ್ರ ಸಹ ಹೊಸದಾಗಿಕ್ಷಯ ವಿಭಾಗಕ್ಕೆ ಬಂದಿದ್ದುಇ ಮುಂದಿನ ದಿನಗಳಲ್ಲಿ ಕ್ಷಯರೋಗ ಪತ್ತೆಗಾಗಿಕಪ್ ಮಾದರಿಗಳನ್ನು ಕಾರವಾರಕ್ಕೆ ಕಳುಹಿಸಿಕೊಡುವ ತೊಂದರೆ ತಪ್ಪಲಿದೆ.ಡಯಾಲಿಸಿಸ್ ವಿಭಾಗವಿದ್ದು ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ.


ಆಯಷ್ಮಾನ್ ಭಾರತ ಮತ್ತುಆರೋಗ್ಯಕರ್ನಾಟಕಯೋಜನೆ ಅನುಷ್ಠಾನದಲ್ಲಿಯೂ ಮುಂಚುಣಿಯಲ್ಲಿದೆ.
ಮಾರ್ಚ 20018 ರಿಂದಆಸ್ಪತ್ರೆಯಲ್ಲಿಆಯುಷ್ಮಾನ್ ಭಾರತ ಮತ್ತುಆರೋಗ್ಯಕರ್ನಾಟಕಯೋಜನೆ ಪ್ರಾರಂಭವಾಗಿದ್ದುಇಲ್ಲಿಯವರೆಗೆ ಸುಮಾರೂ ಮೂರು ಸಾವಿರಕ್ಕೂ ಹೆಚ್ಚಿನ ರೋಗಿಗಳು ಇದರ ಅಡಿಯಲ್ಲಿ ಪಲಾನುಭವಿಗಳಾಗಿವಿವಿಧರೀತಿಯಚಿಕಿತ್ಸೆಗಳನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ.ಕರ್ನಾಟಕದ ತಾಲೂಕಾ ಆಸ್ಪತ್ರೆಗಳ ವಿಭಾಗದಲ್ಲಿ ಹೊನ್ನಾವರಆಸ್ಪತ್ರೆಯುಆಯುಷ್ಮಾನ್ ಭಾರತ ಮತ್ತುಆರೋಗ್ಯಕರ್ನಾಟಕಯೋಜನೆಯ ಯಶಸ್ವಿ ಅನುಷ್ಟಾನದಲ್ಲಿ ಮೂರನೆ ಸ್ಥಾನದಲ್ಲಿದೆ.


ನಮ್ಮ ತಾಲೂಕಾಸ್ಪತ್ರೆ ಕಾಯಕಲ್ಪದಲ್ಲಿ ಉತ್ತಮ ಸಾಧನೆ ಮಾಡಿರುವುದು ಖುಷಿ ನೀಡಿದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಜಾಗದಕೊರತೆಇದ್ದು ಪ್ರತ್ಯೇಕ ಓ.ಪಿ.ಡಿ ಬ್ಲಾಕ್ ನ ಅವಶ್ಯಕತೆಎದ್ದುಕಾಣುತ್ತಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅದೇರೀತಿ ಶಿಥಿಲಾವಸ್ತೆಗೆ ತಲುಪಿರುವ ಸಿಬ್ಬಂದಿಗಳ ವಸತಿಗೃಹ, ಆಸ್ಪತ್ರೆಯ ಹಂಚಿನ ಮೆಲ್ಚಾವಣಿಗೆ ತಗಡಿನ ಹೊದಿಕೆ ಮಾಡುವಕುರಿತು ಸರಕಾರಕ್ಕೆ ಪ್ರಸ್ತವಾನೆ ಸಲ್ಲಿಸಲಾಗಿದೆ.ಕೊಲ್ಡ ಸ್ಟೋರೆಜ್ಆಗುವದರ ಮೂಲಕ ಶವಗಾರವನ್ನು ಉನ್ನತೀಕರಿಸುವ ಕೆಲಸವೂ ಆಗಬೇಕಿದೆ – ಡಾ.ರಾಜೇಶ ಕಿಣಿ, ಆಡಳಿತ ವೈದ್ಯಾಧಿಕಾರಿ]
Leave a Comment