ಸಾಲ್ಕೋಡ್ ಭಾಗದ ಕೃಷಿಕರ ಅನುಕೂಲಕ್ಕಾಗಿ ಹಳ್ಳಕ್ಕೆ ನಿರ್ಮಿಸಿದ ಚೆಕ್ಡ್ಯಾಂನ ಕಂಬಗಳಿಗೆ ಕಾಡಿನ ಮರ ಮಟ್ಟುಗಳು ಕಸ ಕಡ್ಡಿಗಳು ಬಂದು ತಾಡಿದ್ದು ಕಸದ ದೊಡ್ಡ ರಾಶಿಯೇ ಶೇಖರಣೆಯಾಗಿದೆ. ಚಿಕ್ಕೊಳ್ಳಿ, ತೊಳಸಾಣಿ ಮುಂತಾದ ಕಡೆಯ ಕಾಡುಗಳಿಂದ ಹರಿದುಬರುವ ಮಳೆಯ ನೀರು ತನ್ನೊಂದಿಗೆ ಕಾಡಿನ ಕಟ್ಟಿಗೆ ಮರದ ದಿಮ್ಮೆಗಳನ್ನೂ ಕೊಚ್ಚಿಕೊಂಡು ಬಂದಿದೆ, ಇದು ಹಳ್ಳದಲ್ಲಿರುವ ಕಾಂಕ್ರೀಟ್ ಕಂಬಗಳ ನಡುವೆ ಮರದ ತುಂಡುಗಳು ಸಿಕ್ಕಿಹಾಕಿಕೊಂಡು ಕಸದ ರಾಶಿ ಸಂಗ್ರಹವಾಗಿದೆ

ಲೋಡ್ಗಟ್ಟಲೆ ಕಸ ಸಂಗ್ರಹವಾಗಿ ನೀರು ಹರಿಯುವುದಕ್ಕೆ ತೊಡಕಾಗಿದ್ದರೂ ಇದುವರೆಗೂ ಸ್ಥಳೀಯ ಪಂಚಾಯತದವರು ಕಸದ ತೆರವಿಗೆ ಮುಂದಾಗಿಲ್ಲ. ಮಳೆಗಾಲ ಮುಗಿಯುತ್ತಾ ಬಂತು ಇದರಿಂದ ತೊಂದರೆಯಾಗಲಿಕ್ಕಿಲ್ಲ ಎನ್ನುವ ನಿರೀಕ್ಷೆ ಪಂಚಾಯತದಾಗಿರಬಹುದಾದರೂ ಸ್ಥಳಿಯರು ಹೇಳುವ ಪ್ರಕಾರ ಈ ಕಸದ ರಾಶಿಯನ್ನು ಯಾರೂ ತೆಗೆಯಲು ಮುಂದಾಗದಿದ್ದರೆ ಮುಂದಿನ ವರ್ಷ ಮಳೆಗಾಲ ಬರುವವರೆಗೂ ಹಾಗೇ ಇರಲಿದೆ. ಆಗ ಇದರ ಜೊತೆ ಮತ್ತಷ್ಟು ಕಸ ಕಡ್ಡಿಗಳು ಬಂದು ನೀರು ಸಂಗ್ರಹವಾಗಿ ಹಳ್ಳಕ್ಕೆ ಇರುವ ಸೇತುವೆ ಸಮೇತ ಕೊಚ್ಚಿಕೊಡು ಹೋಗಬಹುದು ಎನ್ನುತ್ತಿದ್ದಾರೆ. ಈ ಹಿಂದೆಯೂ ಇದೇ ಹಳ್ಳದ ಇನ್ನೊಂದು ಕಡೆ ಕಸ ಸಂಗ್ರಹವಾಗಿ ಸೇತುವೆಗೆ ಅಪಾಯ ಎದುರಾಗುವ ಸಂದರ್ಭ ಬಂದಾಗ ಸ್ಥಳೀಯ ಯುವಕರೇ ಒಟ್ಟಾಗಿ ಕಸವನ್ನು ತೆರವು ಮಾಡಿದ್ದರು. ಈಗ ಮತ್ತೊಮ್ಮೆ ಅಂತಹುದೇ ಸಂದರ್ಭ ಎದುರಾಗಿದ್ದು ಈಗಲಾದರೂ ಸ್ಥಳಿಯಾಡಳಿತ ಕಸದ ತೆರವಿಗೆ ಮುಂದಾಗುತ್ತದಾ ಎಂದು ಸ್ಥಳಿಯರು ಎದುರು ನೋಡುತ್ತಿದ್ದಾರೆ.
Leave a Comment