• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ

October 14, 2020 by Lakshmikant Gowda Leave a Comment

ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.

The bridge that is being built ,the dream of the Kurvepeople,Kurve honavar

ಹೋಮ್‍ಸ್ಟೇಗಳನ್ನು, ರೆಸಾರ್ಟ್‍ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ ದ್ವೀಪದ ಜನರಿಗೆ ಮಳೆಗಾಲ ಬಂತೆಂದರೆ ಸಾಕು ಶತ್ರು ರಾಷ್ಟ್ರದವರು ದಂಡೆತ್ತಿ ಬಂದು ತಮ್ಮ ಕೋಟೆಗೆ ಮುತ್ತಿಗೆ ಹಾಕಿದಂತ ಅನುಭವವಾಗುತ್ತದೆ ಎನ್ನುತ್ತಾರೆ.
ಮಳೆಯ ನೀರಿನ ಜೊತೆ ಜಲಾಶಯದ ನೀರನ್ನೂ ಬಿಟ್ಟಾಗ ಮಂದಗಮನೆಯಾಗಿದ್ದ ಶರಾವತಿಯ ಓಟದ ಓಘ ಬಿರುಸಾಗುತ್ತದೆ. ನೋಡ ನೋಡುತ್ತಲೇ ಎಲ್ಲಾದಿಕ್ಕಿನಿಂದಲೂ ಉಕ್ಕಿ ಬರುವ ನೀರು ಮನೆಯ ಅಂಗಳವನ್ನು ಮುಳುಗಿಸಿ ಒಳಗೆ ಇಣುಕಿತೋ ಅಟ್ಟ ಏರುವುದೇ ಇವರಿಗಿರುವ ಗತಿಯಾಗುತ್ತದೆ. ಇನ್ನು ಬೇಸಿಗೆಯ ದಿನಗಳಲ್ಲೂ ಹೊರಗಿನಿಂದ ಬಂದವರಿಗೆ ಇಲ್ಲಿನ ಸೌಂದರ್ಯ ಕಾಣಿಸುತ್ತದೆಯಾದರೂ ವಯಸ್ಸಾದವರನ್ನು ಚಿಕ್ಕ ಮಕ್ಕಳನ್ನು ಪುಟ್ಟ ದೋಣಿಯಲ್ಲಿ ಆಚೆ ದಡಕ್ಕೆ ಸಾಗಿಸುವ ಕಷ್ಟ, ವಿದ್ಯಾರ್ಥಿಗಳಿಗೆ, ಕೂಲಿಗೆ ಹೋಗುವವರಿಗೆ ದೋಣಿಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯ ಜೊತೆಗೆ ದಿನಸಿ ಸಾಮಾನಿನಿಂದ ಹಿಡಿದು ಮನೆ ಕಟ್ಟುವ ಕಲ್ಲು ಸಿಮೆಂಟ್ ಜಲ್ಲಿಯನ್ನು ಸಹಿತ ದೋಣಿಯಲ್ಲಿಯೇ ತರಬೇಕಾದ ಸವಾಲುಗಳ ದರ್ಶನವಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

The bridge that is being built ,the dream of the Kurvepeople,Kurve honavar


ಎನೇ ಆದರೂ ಕುರ್ವೆಯ ಜನರ ಕಷ್ಟದ ದಿನಗಳು ಮರೆಯಾಗುವ ಸಮಯ ಸಮೀಪಿಸುತ್ತಿದ್ದು ಅಂದಾಜು 16 ಕೋಟಿ 56 ಲಕ್ಷ ಅನುದಾನ ಮಂಜೂರಾಗಿ ಸೇತುವೆ ಕಾಮಗಾರಿ ಆರಂಭವಾಗಿದ್ದು ಈಗಾಗಲೇ ಎರಡುವರೆ ವರ್ಷ ಸಂದಿದೆ. ಅರ್ಧಕ್ಕಿಂತ ಹೆಚ್ಚು ಕೆಲಸವಾಗಿದ್ದು ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಇಲ್ಲಿನ ಜನರ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ. ಇದೇ ಖಷಿಯಲ್ಲಿ ಹಿಂದೆ ಶಾಸಕರಾಗಿದ್ದ ಮಂಕಾಳ ವೈದ್ಯ ಪ್ರಯತ್ನದ ಫಲವಾಗಿ ಈ ಸೇತುವೆ ಮಂಜೂರಿಯಾಗಿದೆ ಎನ್ನುವುದನ್ನು ಮರೆಯದೇ ಸ್ಮರಿಸುತ್ತಾರೆ ಈ ಭಾಗದ ಜನರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು Tagged With: enemy country Wind, homestays, Kurve honavar, pet, resort, the boat for the students, The bridge that is being built, the dream of the Kurvepeople, The hard days of the people of Kuruvia, the hikers, the overflowing water, the people of the island, the rainy season, the sinking of the courtyard of the house, ಉಕ್ಕಿ ಬರುವ ನೀರು, ಎಲ್ಲಾದಿಕ್ಕಿನಿಂದಲೂ, ಕುರ್ವೆಯ ಜನರ ಕಷ್ಟದ ದಿನಗಳು, ಕೂಲಿಗೆ ಹೋಗುವವರಿಗೆ ದೋಣಿ, ಕೋಟೆಗೆ ಮುತ್ತಿಗೆ ಹಾಕಿದಂತ ಅನುಭವ, ದ್ವೀಪದ ಜನರಿಗೆ, ಬೇಸಿಗೆಯ ದಿನಗಳಲ್ಲಿ, ಮನೆಯ ಅಂಗಳವನ್ನು ಮುಳುಗಿಸಿ, ಮಳೆಗಾಲ ಬಂತೆಂದರೆ, ರೆಸಾರ್ಟ್‍, ವಿದ್ಯಾರ್ಥಿಗಳಿಗೆ, ಶತ್ರು ರಾಷ್ಟ್ರದವರು ದಂಡೆತ್ತಿ ಬಂದು, ಸಾಕು, ಸುತ್ತಲೂ ಹರಿಯವ ಸಲಿಲದ, ಸ್ನಿಗ್ದ ಸೌಂದರ್ಯ, ಹಿತವಾಗಿ ಬೀಸುವ ಗಾಳಿ, ಹೋಮ್‍ಸ್ಟೇಗಳನ್ನು

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...