ಹೊನ್ನಾವರ: ತಾಲೂಕಿನ ಹೊಸಪಟ್ಟಣದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಎರಡು ಲೋಡ್ ಮರಳನ್ನು ಮಂಕಿ ಪೊಲೀಸರು ಜಪ್ತು ಮಾಡಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಶರಾವತಿ ನದಿಯಲ್ಲಿ ಅಧಿಕೃತ ಮರಳುಗಾರಿಕೆ ಆರಂಭವಾಗಿ ತಿಂಗಳು ಸಮೀಪಿಸುತ್ತಾ ಬಂದಿದ್ದರೂ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬಿದ್ದಿಲ್ಲ ಎನ್ನುವ ಆರೋಪ ಕೇಳಿಬರುತ್ತಲೇ ಇದೆ. ಹೊಸಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ ಮಂಕಿ ಪೊಲೀಸರು ನದಿ ದಡದಲ್ಲಿ ದಾಸ್ತಾನು ಮಾಡಿದ್ದ ಮರಳನ್ನು ಜಪ್ತು ಮಾಡಿದ್ದಾರೆ. ಪಿ.ಎಸ್.ಐ ಪರಮಾನಂದ ಕೊಣ್ಣೂರ, ಹೆಡ್ಕಾನ್ಸ್ಟೇಬಲ್ ಗಿರೀಶ ನಾಯ್ಕ, ಕಾನ್ಸ್ಟೇಬಲ್ಗಳಾದ ಪ್ರಶಾಂತ ದೇಸಾಯಿ, ಹರ್ಷವರ್ಧನ ನಾಯ್ಕ, ಜೀಪ್ ಚಾಲಕ ಬಸನಗೌಡ ಬಿರಾದಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.


Leave a Comment