• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೀರ್ತನೆ..ಯಕ್ಷಗಾನ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ನಿರಾಸಕ್ತಿ – ಕೆಲವೆಡೆ ಭಕ್ತರ ಸೇವೆ ಪ್ರಸಾದ ಬೋಜನಕ್ಕೂ ಇಲ್ಲ ಅವಕಾಶ ಶರನ್ನವರಾತ್ರಿಯ ಸಂಭ್ರಮ ಕಸಿದ ಕೊರೊನಾ

October 16, 2020 by Lakshmikant Gowda Leave a Comment

ಹೊನ್ನಾವರ – ಆದಿ ಶಕ್ತಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ನವರಾತ್ರಿಗಳ ಕಾಲ ಪೂಜಿಸಿ ಆರಾಧಿಸುವ ಶರನ್ನವರಾತ್ರಿ ಸಭ್ರಮಕ್ಕೂ ಕೊರೊನಾ ಅಡ್ಡಿಯಾಗುವ ಸಾಧ್ಯತೆಯಿದೆ. ಶನಿವಾರದಿಂದ ಆರಂಭವಾಗುವ ಈ ವರ್ಷದ ನವರಾತ್ರಿಯಲ್ಲಿ ಹಿಂದಿನ ವರ್ಷಗಳ ಸಡಗರ ಕಾಣಲು ಸಿಗುವುದು ಕಷ್ಟ ಎನ್ನಲಾಗುತ್ತಿದೆ.

Marykambha Haladipura
Jinnodamma


ನವರಾತ್ರಿ ಉತ್ಸವದ ಆಚರಣೆಗೆ ದೇವಿಯ ದೇವಾಲಯಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಎಲ್ಲಿಯೂ ಮೊದಲಿನ ಉತ್ಸಾಹ ಕಾಣಿಸುತ್ತಿಲ್ಲ. ಕೊರೊನಾ ಕಾರಣಕ್ಕೆ ಸೇವೆಗಳನ್ನು ಸ್ಥಗಿತಗೊಳಿಸಿದ್ದ ದೇವಾಲಯಗಳು ಇತ್ತೀಚೆಗೆ ಭಕ್ತರ ದರ್ಶನದ ಜೊತೆ ಸೇವೆಗೂ ಅವಕಾಶ ನೀಡಿವೆಯಾದರೂ ನವರಾತ್ರಿಯ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದೇವಾಲಯಗಳಿಗೆ ಆಗಮಿಸುವ ನಿರೀಕ್ಷೆ ಇರುವ ಹಿನ್ನಲೆಯಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗಬಹುದೆನ್ನುವ ಆತಂಕವೂ ದೇವಾಲಯದ ಆಡಳಿತ ಮಂಡಳಿಗಳನ್ನು ಕಾಡುತ್ತಿದೆ. ಇದೇ ಹಿನ್ನಲೆಯಲ್ಲಿ ಸ್ಥಳಾವಕಾಶದ ಕೊರತೆಯಿರುವ ಕಾರಣ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಒಳಗೆ ಭಕ್ತರ ಪ್ರವೇಶ ಮತ್ತು ಸೇವೆಗಳನ್ನು ನಿರಾಕರಿಸಲಾಗಿದೆ.

Navadurga Mavinkurve
Karikanamma Parameshvari

ತಾಲೂಕಿನ ಜಲವಳಕರ್ಕಿಯ ಶ್ರೀ ಶಿವಮ್ಮಾ ಯಾನೆ ದುರ್ಗಾದೇವಿ ಹಾಗೂ ಮಾವಿನಕುರ್ವಾದ ಶ್ರೀ ನವದುರ್ಗಾ ದೇವಾಲಯದಲ್ಲಿ ಶರನ್ನವರಾತ್ರಿಯ ಮೊದಲ ದಿನದಿಂದ ಮುಂದಿನ ಪೌರ್ಣಿಮೆಯವರೆಗೂ ಕೀರ್ತನೆ ಹರಿಕಥೆಗಳು ನಡೆಯುತ್ತಿದ್ದವು. ಗೇರಸೊಪ್ಪಾ ನಗರ ದೇವಿ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಯಕ್ಷಗಾನ ಸೇವೆ, ಹೊನ್ನಾವರ ಪಟ್ಟಣದ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ದಾಂಡಿಯಾ ನೃತ್ಯಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಜನರು ಕಾತರರಾಗಿದ್ದರು. ಆದರೆ ಕೊರೊನಾ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಪಟ್ಟಿಯೂ ಕಿರಿದಾಗುತ್ತಿರುವ ಜೊತೆಗೆ ಒಂದೊಮ್ಮೆ ಕಾರ್ಯಕ್ರಮಗಳು ಆಯೋಜನೆಯಾದರೂ ಎಷ್ಟರಮಟ್ಟಿಗೆ ಜನರು ಭಯ ಬಿಟ್ಟು ಕಾರ್ಯಕ್ರಮ ನೋಡಲು ಬರುತ್ತಾರೆನ್ನುವ ಪ್ರಶ್ನೆ ಉದ್ಭವಿಸಿದೆ.

shri jnaneswari karki
Neelagod Choudeshwari

ಕರ್ಕಿಯ ಶ್ರೀ ಜ್ಞಾನೇಶ್ವರಿ, ಹಳದಿಪುರದ ಶ್ರೀ ಮಾರಿಕಾಂಬೆ, ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಶ್ರೀಕರಿಕಾನ ಪರಮೇಶ್ವರಿ, ಹೈಗುಂದದ ಶ್ರೀ ದುರ್ಗಾಂಬಿಕಾ ದೇವಿ, ಪಟ್ಟಣದ ರಥಬೀದಿಯ ಶ್ರೀ ಶಾರದಾಂಬೆ, ಶ್ರೀ ಮಹಾಕಾಳಮ್ಮ, ಮುಗ್ವಾ ಶ್ರೀ ಶ್ವೇತಾಂಬಿಕಾ ದೇವಿ, ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದ ಶ್ರೀ ನೀಲಗೋಡ ಯಕ್ಷಿ ಚೌಡೇಶ್ವರಿ, ಜಿನ್ನೋಡ ಶ್ರೀ ಶಿವಮ್ಮಾ ದುರ್ಗಾದೇವಿ, ಮಂಕಿಯ ಶ್ರೀ ದೇವಿಕಾನ ಅಮ್ಮನ ದೇವಾಲಯ ಸೇರಿದಂತೆ ತಾಲೂಕಿನ 50 ಕ್ಕೂ ಹೆಚ್ಚು ದೇವಿಯ ದೇವಾಲಯಗಳು ಸರಳ ನವರಾತ್ರಿ ಆಚರಣೆಗೆ ಸಜ್ಜಾಗುತ್ತಿದ್ದು ಕೊರೊನಾ ಕಂಟಕ ಕಳೆಯಲಿ ಎನ್ನುವುದೇ ಭಕ್ತರ ಮೊದಲ ಕೋರಿಕೆಯಾಗಿದೆ.

shri mahakalamma
shri mahakalamma


ಯಕ್ಷಗಾನ, ಕೀರ್ತನೆ, ಭಜನೆ, ತಾಳಮದ್ದಲೆ ಸೇರಿದಂತೆ ಸಾಂಸ್ಕøತಿ ಕಾರ್ಯಕ್ರಮಗಳು ಹಾಗೂ ನವರಾತ್ರಿ ನಿಮಿತ್ತ ನಡೆಯುತ್ತಿದ್ದ ಕ್ರೀಡಾ ಚಟುವಟಿಕೆಗಳ ಸಂಖ್ಯೆಯಲ್ಲಿ ಕಡಿತವಾಗುವ ಸಾಧ್ಯತೆ ಅಧಿಕವಾಗಿದೆಯಾದರೂ ಧಾರ್ಮಿಕ ಕಾರ್ಯಕ್ರಮಗಳಾದ, ಚಂಡಿಕಾ ಹೋಮ, ಸಪ್ತಶತಿ ಪಾರಾಯಣ, ಕಲಾಭಿಷೇಕ, ಸುಮಂಗಲೆಯರ ಉಡಿ ತುಂಬಿಸವ ಕಾರ್ಯಗಳು ಬಹುತೇಕ ಎಲ್ಲಾ ದೇವಾಲಯಗಳು ನಡೆಯಲಿದೆ.

shri gutti kannika parameshwari
shri dandina durgadevi

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಸಂಸ್ಕೃತಿ-ಕಲೆ Tagged With: 50 ಕ್ಕೂ ಹೆಚ್ಚು ದೇವಿಯ ದೇವಾಲಯಗಳು, Devi Temple, devotees entry into Parameshwari temple of Karikana, Jinnodamma, Karikanamma Parameshvari, Marykambha Haladipura, Mavinakurva, More than 50 temples, Navadurga Mavinkurve, Neelagod Choudeshwari, previous year of Navratri, Sharanavavratri at Sri Navadurga Temple, shri dandina durgadevi, shri gutti kannika parameshwari, shri jnaneswari karki, shri mahakalamma, simple Navaratri ritual, Sri Shivamma Yane Durga Devi of Jalavalkariki, years of Navratra, ಕರಿಕಾನ ಪರಮೇಶ್ವರಿ ದೇವಾಲಯದ ಒಳಗೆ ಭಕ್ತರ ಪ್ರವೇಶ, ಜಲವಳಕರ್ಕಿಯ ಶ್ರೀ ಶಿವಮ್ಮಾ ಯಾನೆ ದುರ್ಗಾದೇವಿ, ದೇವಿಯ ದೇವಾಲ, ನವರಾತ್ರಿ ಉತ್ಸವದ ಆಚರಣೆ, ನವರಾತ್ರಿಯಲ್ಲಿ ಹಿಂದಿನ ವರ್ಷ, ಮಾವಿನಕುರ್ವಾದ ಶ್ರೀ ನವದುರ್ಗಾ ದೇವಾಲಯದಲ್ಲಿ ಶರನ್ನವರಾತ್ರಿ, ವರ್ಷಗಳ ಸಡಗರ ಕಾಣಲು, ಸರಳ ನವರಾತ್ರಿ ಆಚರಣೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...