ಹೊನ್ನಾವರ: ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ೬೬ರಲ್ಲಿ ರಸ್ತೆ ಅಫಘಾತ ತಡೆಯುವ ಜೊತೆಗೆ ನಿಧಾನವಾಗಿ ವಾಹನ ಸಂಚಾರ ಮಾಡಲು ಹೆದ್ದಾರಿಯ ಆಯ್ದ ಭಾಗದಲ್ಲಿ ಫೈಬರ್ ಬ್ಯಾರಿಕೇಡ್ ಹಾಕಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತವಲಯವಾದ ಗುಣಮಂತೆ, ಮಂಕಿ ಮಾವಿನಕಟ್ಟೆ, ಅರೆ, ಇಡಗುಂಜಿ ಕ್ರಾಸ್, ಅಪ್ಸರಕೋಂಡ ಭಾಗದಲ್ಲಿ ಈ ರೀತಿಯ ಬ್ಯಾರಿಕೇಡ್ ಅಳವಡಿಸಲಾಗಿದೆ. ಇತ್ತೀಚಿನ ದಿನದಲ್ಲಿ ಅತಿವೇಗದ ಕಾರಣದಿಂದ ವಾಹನ ಅಫಘಾತಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಲು ಇಂತಹ ಕ್ರಮಕ್ಕೆ ಮುಂದಾಗಿದೆ. ಈ ರೀತಿ ಅಳವಡಿಕೆಯಿಂದ ಪ್ರಯಾಣಿಕರಿಗೆ ಕಿರಿಕಿರಿ ಎನಿಸಿದರೂ ಹೆದ್ದಾರಿಯಲ್ಲಿ ಅತಿವೇಗದ ಸಂಚಾರಕ್ಕೆ ಕಡಿವಾಣ ಬೀಳಿಲಿದೆ. ಇದರಿಂದ ವಾಹನ ಅಫಘಾತ ಕಡಿಮೆಯಾಗಲಿದೆ. ಇದರ ಹೊರತಾಗಿಯೂ ಹೆದ್ದಾರಿಯಲ್ಲಿ ಅತಿ ವೇಗದ ವಾಹನ ಚಲಾವಣೆಗೆ ಓವರ್ ಸ್ಪೀಡ್ ದಂಡ ವಿಧಿಸಲಾಗುವುದು. ಈಗಾಗಲೇ ಐ.ಆರ್.ಬಿ ಕಂಪನಿಯು ಅಲ್ಲಲ್ಲಿ ಸೂಚನಾಫಲಕ ಜೊತೆ ರಿವೈಡರ್ ಅಳವಡಿಕೆ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. ಎ.ಎಸ್.ಪಿ ನಿಖಿಲ್ ಬುಳ್ಳಾವರ ಮಾರ್ಗದರ್ಶನದ ಮೇರೆಗೆ ಸಿಪಿ.ಐ ಶ್ರೀಧರ್ ಎಸ್. ಪಿಎಸೈ ಪರಮಾನಂದ ಕೊಣ್ಣೂರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
Leave a Comment