• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಾಹನ ಚಾಲನೆಮಾಡುತ್ತಿರುವಾಗ ಮೊಬೈಲ್ ಬಳಸಿದರೆ ಕ್ರಿಮಿನಲ್ ಕೇಸ್ – ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ; ಎಸ್ಪಿ ಶಿವಪ್ರಕಾಶ ದೇವರಾಜು

October 24, 2020 by Lakshmikant Gowda Leave a Comment

ಹೊನ್ನಾವರ – ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತೆ ವಹಿಸಬೇಕು. ಕಾನೂನು ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮನವಿ ಮಾಡಿದರು.

IMG 20201023 132309


ಅವರು ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆಯ ಸಹಕಾರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು. ಹೆದ್ದಾರಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಸಾವಿನ ಪ್ರಮಾಣವೂ ಹೆಚ್ಚಿದೆ. ಇಲಾಖೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಹೆಚ್ಚುಕಡಿಮೆ ಜಿಲ್ಲೆಯಲ್ಲಿ ದಿನಕ್ಕೊಂದು ಸಾವು ರಸ್ತೆ ಅಪಘಾತದಲ್ಲಿ ಸಂಭವಿಸುತ್ತಿದೆ. ಹೀಗೆ ಸಂಭವಿಸುವ 60 ಪ್ರತಿಶತ: ಸಾವಿಗೆ ಸವಾರರು ಹೆಲ್ಮೆಟ್ ಧರಿಸದಿರುವುದೇ ಕಾರಣವಾಗುತ್ತಿದೆ. ರಸ್ತೆ ಅಪಘಾತವಾದಾಗ ಸಾವಿನ ಸಾಧ್ಯತೆಯನ್ನು ತಡೆಯಲು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದನ್ನು ಎಲ್ಲರೂ ಪಾಲಿಸಬೇಕು ಎಂದು ಕರೆನೀಡಿದರು.
ಬೀಡಾಡಿ ದನಗಳಿಗೆ ದೊಡ್ಡಿ ನಿರ್ಮಿಸುವಂತೆ ಒತ್ತಾಯ
ಕರ್ನಾಟಕ ಕ್ರಾಂತಿ ರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಹುಸೇನ್ ಖಾದ್ರಿ ಮುಂತಾದವರು ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಬೀಡಾಡಿ ದನಗಳು ಕಾರಣವಾಗುತ್ತಿದೆ. ಬೀಡಾಡಿ ದನಗಳಿಗೆ ರಿಪ್ಲೆಕ್ಟರ್ ಬೆಲ್ಟ್‍ಗಳನ್ನು ಅಳವಡಿಸುವ ಜೊತೆಗೆ ಪುರಸಭೆ, ಗ್ರಾಮಪಂಚಾಯತಗಳಲ್ಲಿ ದನದ ದೊಡ್ಡಿಗಳನ್ನು ನಿರ್ಮಿಸಿ ಬೀಡಾಡಿ ದನಗಳನ್ನು ಅಲ್ಲಿ ಕಟ್ಟಿ ಮಾಲಕರಿಂದ ದಂಡ ವಸೂಲಿ ಮಾಡಿಕೊಂಡು ದನಕರುಗಳನ್ನು ಅವರಿಗೆ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಸ್ಥಳೀಯಾಡಳಿತಗಳಿಗೆ ನಿರ್ದೇಶನ ಮಾಡುವಂತೆ ಒತ್ತಾಯಿಸಿದರು.
ಮಾದಕ ಲೋಕದ ವಿರುದ್ಧದ ಹೋರಾಟ ನಿರಂತರ.. ಆತ್ಮೀಯರೆಂದು ಮಾಹಿತಿ ಮುಚ್ಚಿಡದಿರಿ
ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವ ಮಾದಕ ದ್ರವ್ಯ ಸೇವನೆ, ಸಾಗಾಟ ಮತ್ತು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾದಕ ಲೋಕದ ವಿರುದ್ಧದ ಪೊಲೀಸರ ಹೋರಾಟ ಒಂದೆರಡು ದಿನಕ್ಕೆ ಸೀಮಿತವಾಗಲಾರದು ಅದು ನಿರಂತರ ಪ್ರಕ್ರಿಯೆಯಾಗಲಿದೆ. ಮಾದಕ ದ್ರವ್ಯ ಸಮಾಜದ ದೊಡ್ಡ ಪಿಡುಗಾಗಿದ್ದು ಇದರಲ್ಲಿ ಭಾಗಿಯಾದವರು ಎಷ್ಟೇ ಆತ್ಮೀಯರಾಗಿರಲಿ, ಹತ್ತಿರದ ಸಂಬಂಧಿಕರಾಗಿರಲಿ ಮಾಹಿತಿಯನ್ನು ಮುಚ್ಚಿಡುವ ಕೆಲಸವನ್ನು ಯಾರೂ ಮಾಡಬಾರದು. ಇಂದು ಬೇರೆಯವರ ಮನೆಯ ಮಕ್ಕಳು ಹಾಳಾದರೆ ನಾಳೆ ನಮ್ಮ ಮನೆ ಮಕ್ಕಳು ಇದಕ್ಕೆ ಬಲಿಯಾಗುತ್ತಾರೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಎಸ್ಪಿ ಬುದ್ಧಿಮಾತು ಹೇಳಿದರು.
ಸಭೆಯಲ್ಲಿ ಭಟ್ಕಳ ಉಪ ವಿಭಾಗದ ಎ.ಎಸ್ಪಿ ನಿಖಿಲ್ ಬಿ, ಹೊನ್ನಾವರ ವೃತ್ತ ನಿರೀಕ್ಷಕ ಶ್ರೀಧರ ಎಸ್.ಆರ್, ಪಿ.ಎಸ್.ಐ ಶಶಿಕುಮಾರ್ ಸಿ.ಆರ್, ಹೊನ್ನಾವರ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು.

ಘಟನೆ ಸಂಭವಿಸುವ ಮೊದಲೇ ಮಾಹಿತಿ ನೀಡಿ – ಎರಡು ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿಗಳಿಗಿಂತಲೂ ಹೆಚ್ಚಿನ ಮಾಹಿತಿ ಮತ್ತು ಸಂಪರ್ಕ ಇಲ್ಲಿಯೇ ಹುಟ್ಟಿ ಬೆಳೆದಿರುವ ಬದುಕು ಕಟ್ಟಿಕೊಂಡಿರುವ ಸ್ಥಳೀಯರಿಗಿರುತ್ತದೆ. ಹೆಚ್ಚಿನ ಘಟನೆಗಳು ನಡೆಯುವ ಪೂರ್ವದಲ್ಲಿ ಸಾರ್ವಜನಿಕರಿಗೆ ಮಾಹಿತಿ ಇರುತ್ತದೆ. ಆ ಘಟನೆ ನಡೆಯವ ಮೊದಲೇ ಅದನ್ನು ಪೊಲೀಸರೊಂದಿಗೆ ಹಂಚಿಕೊಂಡಾಗ ಮಾತ್ರ ಮಾಹಿತಿ ಪ್ರಯೋಜನಕ್ಕೆ ಬರುತ್ತದೆ. ಇಲ್ಲವಾದರೆ ಏನೂ ಉಪಯೋಗವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಾಯವಾಗಬಲ್ಲ ಮಾಹಿತಿಗಳಿದ್ದರೆ ಪೊಲೀಸರೊಂದಿಗೆ ಹಂಚಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. – ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉ.ಕ

ಯುವಕರು ಮಾತು ಕೇಳುತ್ತಿಲ್ಲ..! – ಡ್ರಗ್ಸ್ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಯ ಯುವಕರನ್ನು ಒಟ್ಟು ಸೇರಿಸಿ ಸಂಪರ್ಕ ಸಭೆ ನಡೆಸಬೇಕು ಎನ್ನುವ ಸಾರ್ವಜನಿಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಎಸ್ಪಿ ಶಿವಪ್ರಕಾಶ ದೇವರಾಜು “ ನಮ್ಮ ಉದ್ದೇಶವೂ ಯುವ ಜನಾಂಗವನ್ನು ಮಾದಕ ಲೋಕದ ಕಬಂಧ ಬಾಹುಗಳಿಂದ ರಕ್ಷಿಸುವುದೇ ಆಗಿದೆ ಆದರೆ ಎಷ್ಟೇ ಶಿಬಿರಗಳನ್ನು ಮಾಡಿ ಕಿವಿಮಾತು ಹೇಳಿದರೂ ಯುವಕರು ಮಾತೇ ಕೇಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.”

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 60 percent, 60 ಪ್ರತಿಶತ: ಸಾವಿಗೆ ಸವಾರರು ಹೆಲ್ಮೆಟ್ ಧರಿಸದಿರುವುದೇ, Drugs, Fight Against Drugs, Replicator Belt for Drugs, Trafficking, ದನಗಳಿಗೆ ರಿಪ್ಲೆಕ್ಟರ್ ಬೆಲ್ಟ್‍, ದಿನಕ್ಕೊಂದು ಸಾವು ರಸ್ತೆ ಅಪಘಾತ, ಮಾದಕ ದ್ರವ್ಯ ಸೇವನೆ, ಮಾದಕ ಲೋಕದ ವಿರುದ್ಧದ ಪೊಲೀಸರ ಹೋರಾಟ, ಮಾದಕ ಲೋಕದ ವಿರುದ್ಧದ ಹೋರಾಟ, ಶರಾವತಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆ, ಸಾಗಾಟ, ಸೈಬರ್ ಅಪರಾಧ ಪ್ರಕರಣ, ಹೆದ್ದಾರಿ ಅಪಘಾತ ಸಂಖ್ಯೆ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,016 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...