• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಮೀಕ್ಷಾ ಕಾರ್ಯ ನಡೆಸದಂತೆ ಹೈ ಕೋರ್ಟ ತಡೆ;ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ

October 25, 2020 by Lakshmikant Gowda Leave a Comment

ಮುಖ್ಯಾಂಶಗಳು
5500 ಕೋಟಿ ವೆಚ್ಚದ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆ
ಒಂದು ಲಕ್ಷಕ್ಕೂ ಅಧಿಕ ಮರಗಳು ಸೇರಿಂದತೆ 800 ಎಕರೆ ಕಾಡು ನಾಶವಾಗುವ ಸಾಧ್ಯತೆ
ವಿದ್ಯುತ್ ಮಾರ್ಗಗಳಿಂದಾಗಿ ವನ್ಯ ಜೀವಿಗಳ ಕಾರಿಡಾರ್ ತುಂಡಾಗುವ ಅಪಾಯ
ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿಗೆ ತೊಂದರೆಯಗುವ ಸಾಧ್ಯತೆ

watermarked 13 48 20 sharavathi new

ಹೊನ್ನಾವರ;

5500 ಕೋಟಿ ಅಂದಾಜು ವೆಚ್ಚದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು ನವೆಂಬರ್ 4 ರವೆಗೆ ಯಾವುದೇ ರೀತಿಯ ಸಮೀಕ್ಷಾ ಕಾರ್ಯಗಳನ್ನು ನಡೆದಂತೆ ಹೈಕೋರ್ಟ ತಡೆಯಾಜ್ಞೆ ನೀಡಿದೆ.


ಉತ್ತರಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಗಳ ನಡುವೆ ಹಂಚಿಕೆಯಾಗಿರುವ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಗಳಿಂದಾಗಿ ಅಪಾರ ಪ್ರಮಾಣದ ವನ್ಯ ಸಂಪತ್ತನ್ನು ಕಳೆದುಕೊಂಡಿದೆ. ಮತ್ತೊಂದು ಬೃಹತ್ ಯೋಜನೆಯ ಮೂಲಕ ಇಲ್ಲಿನ ಪರಿಸರವನ್ನು ಹಾಳುಗೆಡವಲು ಸರ್ಕಾರ ಮತ್ತು ಕೆ.ಪಿ.ಸಿ.ಎಲ್ ಮುಂದಾಗಿದೆ ಎನ್ನುವ ಆರೋಪ ಪರಿಸರವಾದಿಗಳಿಂದ ಕೇಳಿಬಂದಿತ್ತು. ಪ್ರತಿರೋಧವನ್ನು ಲೆಕ್ಕಿಸದ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿ ಭೂಗರ್ಭದ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು.

watermarked IMG 20201024 134735


ಸಾಗರ ಅರಣ್ಯ ವಿಭಾಗಕ್ಕೆ ಸೇರಿದ ಜೋಗ ಭಾಗದಲ್ಲಿ 9 ಮತ್ತು ಹೊನ್ನಾವರ ಅರಣ್ಯ ವಿಭಾಗಕ್ಕೊಳಪಡುವ ಪ್ರದೇಶದಲ್ಲಿ ಮೂರು ಸುರಂಗ ಮಾರ್ಗಗಳನ್ನು ಕೊರೆದು ನೀರನ್ನು 500 ಮೀಟರ್ ಮೇಲಕ್ಕೆತ್ತಿ ಭೂಗತ ಜಲ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಹರಿಸಿ ವಿದ್ಯುತ್ ಉತ್ಪಾದಿಸುವ ಈ ಬೃಹತ್ ಯೋಜನೆಗಾಗಿ ಸಮೀಕ್ಷಾ ಕಾರ್ಯಗಳು ನಡೆಸಲು ಗುತ್ತಿಗೆ ಪಡೆದ ಕಂಪನಿ ಮುಂದಾಗಿತ್ತು. ಸಾಗರ ವಿಭಾಗಕ್ಕೊಳಪಡುವ ಜೋಗ ಭಾಗದಲ್ಲಿ ಭೂಮಿಯನ್ನು ಕೊರೆದು ಪರೀಕ್ಷಿಸುವ ಕಾರ್ಯ ನಡೆದಿತ್ತು ಆದರೆ ಹೊನ್ನಾವರ ಅರಣ್ಯವಿಭಾಗಕ್ಕೊಳಪಡುವ ಪ್ರದೇಶದಲ್ಲಿ ಯಾವುದೇ ಸರ್ವೇ ಕಾರ್ಯ ಇದುವರೆಗೂ ಆರಂಭವಾಗಿರಲಿಲ್ಲ ಎನ್ನಲಾಗಿದೆ.
ಯೋಜನೆಯ ಅನುಷ್ಠಾನದಿಂದ ಪರಿಸರದಮೇಲಾಗುವ ದುಷ್ಪರಿಣಾಮಗಳನ್ನು ಮುಂದಿಟ್ಟು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅಕ್ಟೋಬರ್ 16 ರಿಂದ ಸಮೀಕ್ಷೆ ಸ್ಥಗಿತವಾಗಿತ್ತಾದರೂ ಮುಂದಿನ ವಿಚಾರಣಾ ದಿನಾಂಕವಾದ ನವೆಂಬರ್ 4 ರ ವರೆಗೆ ಯಾವುದೇ ಸಮೀಕ್ಷಾ ಕಾರ್ಯವನ್ನು ನಡೆಸದಂತೆ ನ್ಯಾಯಾಲಯ ಸೂಚಿಸಿದೆ.
ಉದ್ದೇಶಿತ ಜಲವಿದ್ಯುತ್ ಉತ್ಪಾದನಾ ಯೋಜನೆಯ ಪ್ರಸ್ತಾವನೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ 300 ಎಕರೆ ಅರಣ್ಯ ಮಾತ್ರ ನಾಶವಾಗಲಿದೆ ಎಂದು ಕೆ.ಪಿ.ಸಿ.ಎಲ್ ಲೆಕ್ಕ ನೀಡಿದೆ ಆದರೆ ರಸ್ತೆ, ಸುರಂಗ, ವಿದ್ಯುತ್ ತಂತಿಗಳನ್ನು ಎಳೆಯುವ ಮಾರ್ಗ, ಪವರ್ ಹೌಸ್ ನಿರ್ಮಾಣಕ್ಕೆ ಸೇರಿದಂತೆ 800 ಎಕರೆ ಕಾಡು ನಾಶ ವಾಗಲಿದೆ ಎನ್ನುವುದು ಪರಿಸರವಾದಿಗಳ ಆರೋಪವಾಗಿದೆ.
ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದೇ ಕೆ.ಪಿ.ಸಿ.ಎಲ್.ನವರುಸಮೀಕ್ಷಾ ಕಾರ್ಯ ಆರಂಭಿಸಿದ್ದರು ಆದರೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನ್ಯಾಯಾಲಯ ಯಾವ ರೀತಿ ಆದೇಶ ನೀಡುತ್ತದೆಯೋ ಅದನ್ನು ಪಾಲಿಸುವುದಷ್ಟೇ ನಮ್ಮ ಪಾಲಿಗಿರುವ ಆಯ್ಕೆ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
ಶರಾವತಿ ಕಣಿವೆಯಲ್ಲಿ ಈಗಾಗಲೇ ಲಿಂಗನಮಕ್ಕಿ ಮತ್ತು ಗೇರಸೊಪ್ಪಾದಲ್ಲಿ ಜಲಾಶಯಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಭಾಗದಲ್ಲಿಯೇ ಮತ್ತೊಂದು ಯೋಜನೆಯನ್ನು ಹೇರುವುದು ಸಾಧುವಲ್ಲ. ಜಲಾಶಯದ ಕೆಳಭಾಗದಲ್ಲಿರುವ ಹೊಳೆಸಾಲಿನ ಜನ ಜೀವನದ ಮೇಲೆ ದೂರಗಾಮಿ ಪರಿಣಾಮವನ್ನು ಬೀರಲಿದೆ ಎನ್ನುವ ಚಿಂತನೆಯ ಜೊತೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಆದರೆ ಆಳುವ ವರ್ಗದ ಸಾತ್ ದೊರೆಯದ ಹಿನ್ನಲೆಯಲ್ಲಿ ಜನರ ವಿರೋಧದ ದ್ವನಿ ಹೋರಾಟವಾಗಿ ರೂಪುಗೊಂಡಿರಲಿಲ್ಲ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Trending Tagged With: 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ, 800 acres, 800 ಎಕರೆ, corridors, deforestation, disturbances in the world, endangered species in the Western Ghats, estimated cost of Rs., For marine forest section, Gerasoppa, High Court injunction, Joga portion, KPCL, sanctioned by the Wildlife Board, Sharavathi valley, the construction of reservoirs at Gerangamkki, the dredging of power and tunnels, The far-reaching impact on people's lives, the threat of wildlife, underground hydroelectricity, ಕಾಡು ನಾಶ, ಕಾರಿಡಾರ್ ತುಂಡಾಗುವ ಅಪಾಯ, ಕೆ.ಪಿ.ಸಿ.ಎಲ್.ನವರುಸಮೀಕ್ಷಾ ಕಾರ್ಯ, ಕೋಟಿ ಅಂದಾಜು ವೆಚ್ಚ, ಗೇರಸೊಪ್ಪಾದಲ್ಲಿ ಜಲಾಶಯಗಳನ್ನು ನಿರ್ಮಿಸಿ ವಿದ್ಯುತ್, ಜಗತ್ತಿನಲ್ಲಿ ಅಳಿವಿನಂಚಿನ, ಜನ ಜೀವನದ ಮೇಲೆ ದೂರಗಾಮಿ ಪರಿಣಾಮ, ಜೋಗ ಭಾಗ, ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ, ಭೂಗರ್ಭ ಜಲವಿದ್ಯುತ್, ಲಿಂಗನಮಕ್ಕಿ, ವನ್ಯ ಜೀವಿಗಳ, ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದೇ, ಶರಾವತಿ ಕಣಿವೆ, ಸಾಗರ ಅರಣ್ಯ ವಿಭಾಗಕ್ಕೆ, ಸಿಂಗಳೀಕಗಳಿಗೆ ತೊಂದರೆ, ಸುರಂಗ ಮಾರ್ಗಗಳನ್ನು ಕೊರೆದು, ಹೈಕೋರ್ಟ ತಡೆಯಾಜ್ಞೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...