ವೈದ್ಯಕೀಯ ಸಾಧನಗಳು ಮತ್ತು ಸಲಕರಣೆಗಳ ವಿಜ್ಞಾನವು ಉದಯೋನ್ಮುಖ ವೈದ್ಯಕೀಯ ಕ್ಷೇತ್ರವಾಗಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ವೈದ್ಯಕೀಯ ಸಾಧನಗಳು ಮತ್ತು ಉಪಕರಣ ಆಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಹೊಸ ತಂತ್ರಜ್ಞಾನಗಳ ಅಭವೃದ್ಧಿ, ಸ್ಥಿರ ಅಗತ್ಯ ಮತ್ತು ಸುಧಾರಣೆಗಳನ್ನತ ತರಲು ಈ ಕ್ಷೇತ್ರದಲ್ಲಿ ತರಬೇತಾದ ಕೌಶಲಯುತ ನೌಕರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ತರಬೇತಾದ ಕೌಶಲ್ಯಯುತ ವೃತ್ತಿಪರರನ್ನು ತಯಾರು ಮಾಡಲು ಗುವಾಹತಿ, ಹೈದರಾಬಾದ್ ಮತ್ತು ಮೊಹಾಲಿಯ ಎಸ್.ಎ.ಎಸ್. ನಗರದಲ್ಲಿರುವ ರಾಷ್ಟ್ರೀಯ ಔಷಧ ಮತ್ತು ಸಂಶೋಧನಾ ಸಂಸ್ಥೆ’ಗಳಲ್ಲಿ ಹೊಸ
ಎಂ.ಟೆಕ್ ಇನ್ ಮೆಡಿಕಲ್ ದಿವೈಸಸ್’ ಅಥವಾ ವೈದ್ಯಕೀಯ ಸಾಧನಗಳಲ್ಲಿ ಎಂ.ಟೆಕ್ ಕೋರ್ಸ್ ಆರಂಭಿಸಲಾಗಿದೆ.
ಕೋರ್ಸ್ ನಲ್ಲಿ ಜೀವಶಾಸ್ತ್ರ, ರಸಾಯನಿಕ ಶಾಸ್ತ್ರ, ಗಣಿತ ಶಾಸ್ತ್ರ, ಕ್ಲಿನಿಕಲ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳು ಒಳಗೊಂಡಿದ್ದು, ಇವು ವೈದ್ಯಕೀಯ ಸಾಧನಗಳ ಅಭಿವೃದ್ಧಿಗೆ ಅಗತ್ಯ ಪಠ್ಯ ವಸ್ತುಗಳಾಗಿವೆ. ಈ ಕೊರ್ಸ್ ನಲ್ಲಿ ಒಂದು ವರ್ಷದ ಪ್ರಾಜೆಕ್ಟ್ ವರ್ಕ್ ಇರಲಿದ್ದು, ವೈದ್ಯಕೀಯ ಉಪಕರಣಗಳ ಮೂಲ ಮಾದರಿ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತದೆ.
ಎಂ.ಟೆಕ್ ಇನ್ ಮೆಡಿಕಲ್ ಡಿವೈಸಸ್ ಕೋರ್ಸ್ ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತಾ ಮಾನದಂಡ ನಿಗದಿಪಡಿಸಲಾಗಿದ್ದು, ಬಿ. ಫಾರ್ಮ, ಡಿ. ಫಾರ್ಮ, ಎಂ.ಎಸ್ಸಿ, ಬಿ.ಟೆಕ್, ಬಿಇ, ಎಂಬಿಬಿಎಸ್, ಬಿಡಿಎಸ್, ಬಿವಿಎಸ್ ಸಿ ಪದವಿ ಹೊಂದಿರಬೇಕು.
ಪ್ರತಿ ವರ್ಷಕ್ಕೆ 10 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ನಿಪರ್-ಹೈದರಾಬಾದ್ ನಲ್ಲಿ 10 ಸೀಟುಗಳು, ನಿಪರ್-ಗುವಾಹತಿಯಲ್ಲಿ 10 ಸೀಟು ಮತ್ತು ನಿಪರ್-ಎಸ್.ಎ.ಎಸ್. ನಗರದಲ್ಲಿ 10 ಸೀಟುಗಳು ಲಭ್ಯವಿರುತ್ತವೆ.
ಈ ಕೋರ್ಸ್ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗೆ ಅವಕಾಶ ಕಲ್ಪಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ, ಆರೋಗ್ಯ ಸಂರಕ್ಷಣೆ, ಔಷಧ, ಜೈವಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆ ಉದ್ಯಮದಲ್ಲಿ ಸಿಬ್ಬಂದಿಯಾಗಿ ಮತ್ತು ವೈದ್ಯಕೀಯ ಸಾಧನಗಳ ನವೋದ್ಯಮಗಳನ್ನು ಸ್ಥಾಪಿಸಲು ಇಲ್ಲಿ ಅವಕಾಶಗಳಿವೆ.
ಮಹತ್ವದ ದಿನಾಂಕಗಳು:
ಆನ್ ಲೈನ್ ನೋಂದಣಿ ಆರಂಭ: 22 ಅಕ್ಟೋಬರ್ 2020
ಆನ್ ಲೈನ್ ನೋಂದಣಿಗೆ ಕಡೆ ದಿನ: 15 ನವೆಂಬರ್ 2020
ಆನ್ ಲೈನ್ ನಿಪರ್ ಜಂಟಿ ಪ್ರವೇಶ ಪರೀಕ್ಷೆ: 4 ಡಿಸೆಂಬರ್ 2020
ಸಂಪೂರ್ಣ ವಿವರಗಳಿಗಾಗಿ, ಕೆಳಗಿನ ವೆಬ್ ಸೈಟ್ ಸಂಪರ್ಕಿಸಬಹುದು.
Website: http://www.niperhyd.ac.in
Leave a Comment