ಹೊನ್ನಾವರ – ಸಾಲ್ಕೋಡ್ ಗ್ರಾಮದ ಕಾನಕ್ಕಿಯ ಕುಚನಕೇರಿ ವಿದ್ಯಾರ್ಥಿ ಗೆಳೆಯರ ಬಳಗದ ನವರಾತ್ರಿಯ ಶಾರದಾ ಪೂಜೆ ಹಾಗೂ ದಸರಾ ಉತ್ಸವದಲ್ಲಿ ಊರಿನ ಮನೆಗಳಿಕೆ ವರ್ಷವಿಡೀ ಶ್ರಮಿಸುವ ಲೈನ್ಮ್ಯಾನ್ ವೀರಪ್ಪ ಅಂಗುರ ಅವರನ್ನು , ಎಸ್.ಎಸ್.ಎಲ್.ಸಿಯಲ್ಲಿ ಸಾಧನೆ ಮಾಡಿದ ಶಿವಕುಮಾರ ಹೆಗಡೆ ಮತ್ತು ಪಿ.ಯು.ಸಿ ದ್ವಿತೀಯ ವಿದ್ಯಾರ್ಥಿನಿ ಪೂಜಾ ಭಂಡಾರಿಯನ್ನು ಸನ್ಮಾನಿಸಿ ಗೌರವಿಸಿದರು. ಅತಿಥಿಗಳಾಗಿ ಸುರೇಶ ಹೆಗಡೆ ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶಾರದಾ ಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಗ್ರಾಮಸ್ಥರು, ವಿದ್ಯಾರ್ಥಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

Leave a Comment