• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಳಕೂರಿನ ಪಾಂಡವರ ಗುಹೆ – ನಿಸರ್ಗ ನಿರ್ಮಿತವೋ..? ಪೂರ್ವಜರ ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿಯೋ..?

October 28, 2020 by Lakshmikant Gowda Leave a Comment


ತಾಲೂಕು ಕೇಂದ್ರ ಹೊನ್ನಾವರದಿಂದ ಸುಮಾರು ೧೨ ಕಿಲೋ ಮೀಟರ್ ದೂರದಲ್ಲಿರುವ ಬಳಕೂರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಯ ಕಡಲ ಒಡಲನ್ನು ಸೇರುವ ಶರವಾತಿಯ ಎಡದಂಡೆ ಪ್ರದೇಶವಾಗಿದೆ. ಬಹುಸಂಖ್ಯಾತರು ಕೃಷಿಯನ್ನೇ ಮೂಲ ಕಸುಬನ್ನಾಗಿ ಹೊಂದಿರುವ ಇಲ್ಲಿನ ಗುಡ್ಡದಲ್ಲಿನ ಗುಹೆಯೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ಬಳಕೂರು, ಗುಡೇಮಕ್ಕಿ ಮತ್ತು ಮಣ್ಣಿಗೆ ಗ್ರಾಮಗಳ ಮಧ್ಯವರ್ತಿ ಸ್ಥಳವಾಗಿರುವ ಗುಡ್ಡದಮೇಲೆ ಪಾಂಡವರ ಅರೆ ಎನ್ನುವ ಪ್ರದೇಶವಿದೆ. ಜಾನಪದ ಕಥೆಗಳ ಪ್ರಕಾರ ದ್ವಾಪರ ಯುಗದಲ್ಲಿ ಈ ಪ್ರದೇಶದಲ್ಲಿರುವ ಗುಹೆಯಲ್ಲಿ ಪಾಂಡವರು ವಾಸವಾಗಿದ್ದರು ಶ್ರೀಕೃಷ್ಣ ಕಲ್ಲಿನ ಕೋಳಿಯಾಗಿ ಕೂಗಿದ ನಂತರ ಗುಹೆಯ ಮಾರ್ಗವಾಗಿ ಅಲ್ಲಿಂದ ಹೊರಟು ಹೋದರು ಎನ್ನುವ ಯಾರಿಂದಲೋ ಕೇಳಿದ್ದ ಸಂಗತಿಯನ್ನು ಹಿರಿಯರು ತಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದಾರೆ.

01 27


ಅಲ್ಲಿ ಪಾಂಡವರು ನೆಲೆಸಿದ್ದರು ಎನ್ನುವುದು ಕಲ್ಪನೆಯಾಗಿರಬಹುದಾದರೂ ಇಲ್ಲಿ ಗುಹೆ ಇರುವುದು ಮಾತ್ರ ಇಂದಿಗೂ ವಾಸ್ತವ. ( ಬ್ರಿಟಿಷರ್ ದಾಳಿಯಿಂದ ರಕ್ಷಿಸಿಕೊಳ್ಳಲು ಪೂರ್ವಿಕರು ಹಲವು ಕಡೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು ಎನ್ನುವ ಮಾತಿದೆ. ಅದನ್ನು ಪುಷ್ಠೀಕರಿಸುವಂತೆ ಹಳೆಯ ಮನೆಗಳನ್ನು ಮುರಿದಾಗ, ಗುಡ್ಡದಲ್ಲಿ ಮಣ್ಣು ಅಗೆಯುವಾಗ ರಸ್ತೆ ಕಾಮಗಾರಿಗಳನ್ನು ನಡೆಸುವಾಗ ಹಲವು ಕಡೆ ಗುಹೆಯ ರಚನೆ ಕಂಡುಬAದಿರುವುದನ್ನು ಗಮನಿಸಬಹುದಾಗಿದೆ.) ಈ ಗುಹೆಯ ವಿಶಿಷ್ಠತೆ ಏನಪ್ಪಾ ಅಂದರೆ ಮಳೆಗಾಲದಲ್ಲಿ ಅದೆಷ್ಟೇ ಮಳೆ ಸುರಿದರೂ ಬಳಕೂರು ಗುಡ್ಡದಲ್ಲಿನ ಮಳೆ ನೀರು ಊರಿಗೆ ಹರಿದು ಬರುವುದಿಲ್ಲ. ಎಲ್ಲಾ ಕಡೆಯ ನೀರು ಈ ಗುಹೆಯ ಮೂಲಕ ಅಂತರ್ಗತವಾಗಿಯೇ ಸಾಗಿ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶರಾವತಿಯನ್ನು ಸೇರುತ್ತದೆ.
ಇಡಗುಂಜಿಯಿAದ ಬಳಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಮ್ಯಾನ್ ಹೋಲ್ ರೀತಿಯಲ್ಲಿ ಗುಹೆ ತೆರೆದುಕೊಂಡಿದೆಯಾದರೂ ಮಳೆ ಸುರಿಯುತ್ತಿರುವಾಗ ಇಲ್ಲಿ ನೀರಿನ ಬೋರ್ಗರೆತದ ಶಬ್ಧ ಮಾತ್ರ ಕೇಳಿಸುತ್ತದೆ ಬಿಟ್ಟರೆ ನೀರು ಹರಿಯುವ ದೃಶ್ಯ ಕಾಣಿಸುವುದಿಲ್ಲ. ಗುಡ್ಡದಲ್ಲಿನ ಮಳೆಯ ನೀರನ್ನು ಭೂಗರ್ಭದೊಳಗಿಂದಲೇ ನದಿಗೆ ಸೇರಿಸುವ ಗುಹೆ ಆಧುನಿಕ ಒಳಚರಂಡಿಯ ಮಾದರಿಯನ್ನು ಹೋಲುತ್ತಿದ್ದು ಇದು ಹಿಂದಿನವರ ತಾಂತ್ರಿಕ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯೋ ಅಥವಾ ನಿಸರ್ಗ ನಿರ್ಮಿತವೋ ಎನ್ನುವುದು ಮಾತ್ರ ಪ್ರಶ್ನೆಯಾಗುಳಿದಿದೆ.

01 27 1

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು Tagged With: cave in the hill, folklore, old house to be enriched, road work, the Arabian sea, the left bank of Sharavati, When digging mud in the hill, ಅರಬ್ಬಿಯ ಕಡಲ ಒಡಲ, ಗುಡ್ಡದಲ್ಲಿ ಮಣ್ಣು ಅಗೆಯುವಾಗ ರಸ್ತೆ ಕಾಮಗಾರಿ, ಗುಡ್ಡದಲ್ಲಿನ ಗುಹೆ, ಜಾನಪದ ಕಥೆಗಳ ಪ್ರಕಾರ ದ್ವಾಪರ ಯುಗ, ಪಾಂಡವರ ಗುಹೆ, ಪುಷ್ಠೀಕರಿಸುವಂತೆ ಹಳೆಯ ಮನೆ, ಶರವಾತಿಯ ಎಡದಂಡೆ ಪ್ರದೇಶ, ಸೇರುವ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,016 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...