ಹೊನ್ನಾವರ – 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲೋನಿಯನ್ನು ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ದಿನಕರ ಶೆಟ್ಟಿ ಪರಿಶೀಲಿಸಿದರು.

ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದ ರಸ್ತೆಯ ದುರಸ್ಥಿಗೆ ವಾರ್ಡ್ ನಂ 14 ರ ಸದಸ್ಯ ನಾಗಾರಾಜ ಭಟ್ಟ ವಿಶೇಷ ಮುತುವರ್ಜಿ ವಹಿಸಿ ಅನುದಾನ ಪಡೆದುಕೊಂಡಿದ್ದರು. ಕೊರೊನಾ ಕಾರಣದಿಂದ ಭೂಮಿ ಪೂಜೆಯನ್ನೂ ನಡೆಸದೇ ಕಾಮಗಾರಿ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಸ್ಥಳಕ್ಕೆ ಬೇಟಿ ನೀಡಿದ ಶಾಸಕರು ಕಾಂಕ್ರೀಟ್ ರಸ್ತೆ ಮಾಡಿದಾಗ ಕೆಲ ದಿನದ ಮಟ್ಟಿಗಾದರೂ ಬಿಡದೇ ವಾಹನ ಸಂಚರಿಸಿದರೆ ಒಂದೇ ವರ್ಷದಲ್ಲಿ ರಸ್ತೆ ಹಾಳಾಗುತ್ತದೆ. ಈ ವಿಷಯ ತಿಳಿದಿದ್ದರೂ ರಸ್ತೆ ಮೇಲೆ ನನ್ನ ಕಣ್ಣ ಮುಂದೆಯೆ ದ್ವಿಚಕ್ರ ಸೇರಿದಂತೆ ಹಲವು ವಾಹನಗಳು ಸಂಚಾರ ನಡೆಸುತ್ತಿದೆ. ಈ ಬಗ್ಗೆ ಗುತ್ತಿಗಾದರ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದ್ದು, ಮಣ್ಣು ಹಾಗೂ ಮರದ ಟೊಂಗೆ ಅಳವಡಿಸುವಂತೆ ಹೇಳಿದ್ದೇನೆ. ಸಾರ್ವಜನಿಕರು ತಮ್ಮ ಮನೆಯ ಸಮೀಪದ ರಸ್ತೆ ಒಳ್ಳೆಯದಾಗಬೇಕಾದರೆ ಕೆಲ ದಿನ ಸಂಚಾರಕ್ಕೆ ಸಮಸ್ಯೆಯಾದರೂ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಾರ್ಡ ಸದಸ್ಯ ನಾಗಾರಜ ಭಟ್ ಮಾತನಾಡಿ ಶಾಸಕರ ಸಹಕಾರದಿಂದ ವಾರ್ಡಿನ ರಸ್ತೆ ಅಭಿವೃದ್ಧಿಯಾಗಿದೆ. ಸಾರ್ವಜನಿಕರ ಪರವಾಗಿ ಶಾಸಕರಿಗೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ವಿಜಯ ಕಾಮತ್, ಮಹೇಶ ಮೇಸ್ತ, ಮೇಧಾ ನಾಯ್ಕ, ಬಿಜೆಪಿ ಮುಖಂಡರಾದ ಎಂ.ಜಿ.ನಾಯ್ಕ, ಎಂ.ಎಸ್.ಹೆಗಡೆ, ದತ್ತಾತ್ರೇಯ ಮೇಸ್ತ, ಬಾಲಚಂದ್ರ ನಾಯ್ಕ, ಶಾರದಾ ನಾಯ್ಕ, ಸಂತೋಷ ನಾಯ್ಕ ಹಾಜರಿದ್ದರು.
Leave a Comment