ಕೊರೊನಾ ನಿಯಂತ್ರಣದಲ್ಲಿ ಉತ್ತರಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎನ್ನುವ ಹೊಗಳಿಕೆಯ ಮಾತು ಸರ್ಕಾರದಿಂದ ಸಿಕ್ಕರೂ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮಾತ್ರ ಗುರುವಾರ ಒಂದೇ ದಿನ 19 ಕೆಸ್ಗಳು ಪತ್ತೆಯಾಗುವ ಮೂಲಕ ತಾಲೂಕು ಕೊರೊನಾ ಹಾಟ್ಸ್ಪಾಟ್ನಿಂದ ಹೊರಬಂದಿಲ್ಲವೇ ಎನ್ನುವ ಅನುಮಾನ ಜನರನ್ನು ಕಾಡುವುದಕ್ಕೆ ಶುರುವಾಗಿದೆ.
ಗುರುವಾರ ತಾಲೂಕಿನಲ್ಲಿ 19 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಡಿನಬಾಳದ 24 ವರ್ಷದ ಯುವಕ, 42 ವರ್ಷದ ಪುರುಷ, 52 ವರ್ಷದ ಮಹಿಳೆ, 37 ವರ್ಷದ ಮಹಿಳೆ. ಮಾಳಕೋಡದ 28 ವರ್ಷದ ಮಹಿಳೆ, 70 ವರ್ಷದ ಪುರುಷ. ಹಳದಿಪುರದ 18 ವರ್ಷದ ಯುವಕ, 50 ವರ್ಷದ ಪುರುಷ, 60 ವರ್ಷದ ಮಹಿಳೆ. ಮುಗ್ವಾ ಸುಬ್ರಹ್ಮಣ್ಯದ 48 ವರ್ಷದ ಮಹಿಳೆ ಮತ್ತು 19 ವರ್ಷದ ಯುವತಿ.
ಮಂಕಿಯ 27 ವರ್ಷದ ಯುವಕ, ಕೋರೆ ಖರ್ವಾದ 43 ವರ್ಷದ ಪುರುಷ, ಚಿತ್ತಾರ ವಡಗೇರಿಯ 61 ವರ್ಷದ ಪುರುಷ ಹಾಗೂ 56 ವರ್ಷದ ಮಹಿಳೆ, ಅನಂತವಾಡಿಯ 48 ವರ್ಷದ ಪುರುಷ. ಮಂಕಿ ದೇವರಗದ್ದೆಯ 46 ವರ್ಷದ ಪುರುಷ, ಗೇರಸೊಪ್ಪ ಬಂಗಾರಮಕ್ಕಿಯ 36 ವರ್ಷದ ಪುರುಷ, 33 ವರ್ಷದ ಯುವಕ ಸೇರಿದಂತೆ ಒಟ್ಟೂ 19 ಮಂದಿಯಲ್ಲಿ ಸೋಂಕಿರುವುದು ದೃಢವಾಗಿದೆ. ಇಂದು ಎರಡು ಮಂದಿ ಗುಣಮುಖರಾಗಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಇಬ್ಬರು ಹಾಗೂ ಉಳಿದ ಆಸ್ಪತ್ರೆಗಳಲ್ಲಿ 10 ಮಂದಿ ಮತ್ತು ಮನೆಯಲ್ಲಿ 34 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Leave a Comment