ಕುಮಟಾ: ಅಕ್ರಮವಾಗಿ ಮರಳು ತೆಗೆಯುತ್ತಿರುವ ಸಂದರ್ಭದಲ್ಲಿ ಕುಮಟಾ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮರಳು ಹಾಗೂ ಜೆ.ಸಿ.ಬಿ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಶುಕ್ರವಾರ ಸಂಭವಿಸಿದೆ.

ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಸದಾನಂದ ಹರಿಕಂತ್ರ ಎಂಬುವವರು ಸಮುದ್ರ ತೀರದ ಸರ್ಕಾರದ ಜಮೀನಿನಲ್ಲಿದ್ದ ಮರಳನ್ನು ತೆಗೆದು, ನಮ್ಮ ಖಾಸಗಿ ಜಮೀನಿನಲ್ಲಿ ದಾಸ್ತಾನು ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ತಹಸೀಲ್ದಾರರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ ಮೇಘರಾಜ ನಾಯ್ಕ ಸಿ.ಪಿ.ಐ ಪರಮೇಸ್ವರ ಗುನಗಾ ಹಾಗೂ ಪಿ.ಎಸ್.ಐ ರವಿ ಗುಡ್ಡಿ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ನಂತರ ಪಿ.ಎಸ್.ಐ ರವಿಗುಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಗೂ ಕಂದಾಐ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಮರಳು ತೆಗೆಯದಂತೆ ಸೂಚನೆ ನೀಡಿ, ಅಗತ್ಯ ದಾಖಲೆ ಪತ್ರಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.

Leave a Comment