ಹಳಿಯಾಳ :- ಕೊಪ್ಪಳ ಜಿಲ್ಲೆ ಗಂಗಾವತಿಯ ನಗರಸಭೆಯ ಕಾಂಗ್ರೇಸ್ ಸದಸ್ಯ ಮನೋಹರಸ್ವಾಮೀ ಅವರನ್ನು ಅಪಹರಿಸಿದ್ದ ಮೂವರು ಅಪಹರಣಗಾರರನ್ನು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪೋಲಿಸರು ಶುಕ್ರವಾರ ಬಂಧಿಸಿದ್ದು ನಗರಸಭೆ ಸದಸ್ಯನನ್ನು ಕಿಡ್ನಾಪರ್ಸ್ಗಳಿಂದ ರಕ್ಷಿಸಿದ ಘಟನೆ ನಡೆದಿದೆ.

ಚುನಾವಣೆ ಹಿನ್ನೆಲೆ ಕಿಡ್ನಾಪ್:- ನವೆಂಬರ್ 2 ರಂದು ಗಂಗಾವತಿಯ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೇಸ್ ಸದಸ್ಯ ಮನೋಹರಸ್ವಾಮೀ ಹಿರೇಮಠ ಅವರನ್ನು ಗುರುವಾರ ಸಾಯಂಕಾಲ ಗಂಗಾವತಿಯ ಬಾರ್ ಎಂಡ ರೆಸ್ಟೋರೆಂಟ್ ಒಂದರಿಂದ ಅಪಹರಿಸಿದ್ದಾರೆ ಎಂದು ಹೆಚ್ ಸುರೇಶ್ ಹಣವಾಳ ಅವರು ಈ ಬಗ್ಗೆ 8 ಜನರ ಮೇಲೆ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿತ್ತು.
ಈ ನಡುವೆ ಶುಕ್ರವಾರ ಅಪಹರಣಕಾರರು ಸಿನಿಮಿಯ ರೀತಿಯಲ್ಲಿ ಹಳಿಯಾಳ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದು ಮೂವರನ್ನು ಬಂಧಿಸಲಾಗಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಅಪಹರಣಕ್ಕೊಳಗಾಗಿದ್ದ ನಗರಸಭಾ ಸದಸ್ಯ ಮನೋಹರಸ್ವಾಮೀಯನ್ನು ರಕ್ಷಿಸಲಾಗಿದೆ.

ಕಿಡ್ನಾಪರ್ಸ್ ಅರೇಸ್ಟ್ ಆಗಿದ್ದೇಗೆ ?:- ಹಳಿಯಾಳ ಪೋಲಿಸರೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ ಶುಕ್ರವಾರ ಬೆಳಿಗ್ಗೆ 4.30ರ ಸುಮಾರಿಗೆ ಕಾಂಗ್ರೇಸ್ ಕಾರ್ಪೊರೇಟರ್ ಮನೋಹರಸ್ವಾಮೀ ಹಳಿಯಾಳ ಪಟ್ಟಣದ ಪೋಲಿಸ್ ಠಾಣೆ ಎದುರಿನ ಶಿವಾಜಿ ವೃತ್ತದಲ್ಲಿ “ಪೋಲಿಸ್ ಪೋಲಿಸ್ ಹೆಲ್ಪ್ ಹೆಲ್ಪ್” ಎಂದು ಕೂಗುತ್ತಿದ್ದಾಗ ತಕ್ಷಣ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೋಲಿಸರು ಅವರ ಬಳಿಗೆ ಧಾವಿಸಿ ವಿಚಾರಿಸಿದಾಗ ತನ್ನನ್ನು ನಾಲ್ಕೂ ಜನರು ಗಂಗಾವತಿಯಿಂದ ಮುಖಕ್ಕೆ ಮಬ್ಬು ಬರುವ ಔಷಧಿ ಸಿಂಪಡಿಸಿ ಇನ್ನೋವಾ ಕಾರ್ ನಂ-ಕೆಎ04/ 6187 ನಲ್ಲಿ ಅಪಹರಿಸಿಕೊಂಡು ಬಂದಿದ್ದಾರೆ. ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಅಪಹರಣಗಾರರಿಂದ ತಪ್ಪಿಸಿಕೊಂಡು ಬಂದು ಶಿವಾಜಿ ವೃತ್ತದಲ್ಲಿ ಸಹಾಯಕ್ಕಾಗಿ ಚಿರಾಡುತ್ತಿದ್ದಾಗ ಮನೋಹರಸ್ವಾಮೀಯನ್ನು ವಿಚಾರಿಸಿ ಮಾಹಿತಿ ಪಡೆದು ತಕ್ಷಣ ಹಳಿಯಾಳ ಪಟ್ಟಣದಲ್ಲಿ ಗಸ್ತು ತಿರುಗಿದಾಗ ನಾಲ್ವರೂ ಅಪಹರಣಗಾರರ ಪೈಕಿ ಮೂವರು ಪೋಲಿಸರ ವಶಕ್ಕೆ ಸಿಕ್ಕಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆಂದು ವಿವರಿಸಲಾಗಿದೆ.

ಬಂಧಿತರು :- ಗಂಗಾವತಿಯ ರಾಕೇಶ್ ಅಡಿವೆಪ್ಪ ನಾಯಕ(24), ಬಸವರಾಜ ಮಲ್ಲಪ್ಪ ಉಪ್ಪಾರ(22) ಹಾಗೂ ಶರಣಬಸು ಬಸವರಾಜ ವಂಕಲಕುಂಟೆ(24) ಮೂವರನ್ನು ಬಂಧಿಸಲಾಗಿದ್ದರೇ ಇನ್ನೋರ್ವ ಆರೋಪಿ ಗಂಗಾವತಿಯ ಲಿಂಗರಾಜ ಕ್ಯಾಂಪ್ ನಿವಾಸಿ ಒಮ್ಮೆ ಗಡಿಪಾರು ಆಗಿದ್ದ ಎನ್ನಲಾದ ರವಿ ಕುರುಬರ(25) ಪರಾರಿಯಾಗಿದ್ದು ಇತನ ಬಂಧನಕ್ಕೆ ಪೋಲಿಸರು ಜಾಲ ಬಿಸಿದ್ದಾರೆ.
ಈಗಾಗಲೇ ನಗರಸಭಾ ಸದಸ್ಯನ ಅಪಹರಣದ ಬಗ್ಗೆ ಕೊಪ್ಪಳದ ಗಂಗಾವತಿಯಲ್ಲಿ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು. ಹಳಿಯಾಳ ಪೋಲಿಸರು ಅಪಹರಣಗಾರರನ್ನು ಬಂಧಿಸಿದ ವಿಷಯ ತಿಳಿಸಿ ಬಳಿಕ ಹಳಿಯಾಳಕ್ಕೆ ಆಗಮಿಸಿದ ಗಂಗಾವತಿ ಪೋಲಿಸರಿಗೆ ದಾಖಲಾತಿಗಳೊಂದಿಗೆ ಸದ್ರಿ ಆರೋಪಿಗಳನ್ನು ಹಾಗೂ ರಕ್ಷಿಸಲಾದ ಕಾರ್ಪೊರೇಟರ್ ಅವರನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಸಿಸ್ಟ್ಂಟ್ ಎಸ್ಪಿ ಕುಶಾಲ್ ಚೌಕ್ಸಿ, ಸಿಪಿಐ ಮೋತಿಲಾಲ್ ಪವಾರ, ಕ್ರೈಂ ಪಿಎಸ್ಐ ರಾಜಕುಮಾರ್, ಪ್ರೊಬೆಷನರಿ ಪಿಎಸ್ಐ ಸಿದ್ದು ಗುಡಿ ಹಾಗೂ ಸಿಬ್ಬಂದಿಗಳು ಇದ್ದರು.
Leave a Comment