ಹೊನ್ನಾವರ : ತಾಲೂಕಿನ ಶಕ್ತಿ ದೇವತೆ ಶ್ರೀ ಆದಿಶಕ್ತಿ ಜಗದಂಬಾ ಟ್ರಸ್ಟ್ನ ಆಶ್ರಯದಲ್ಲಿಶ್ರೀ ಆದಿಶಕ್ತಿ ಸಿಂಗಿಂಗ್ ಸ್ಟಾರ್ 2020 ಭಕ್ತಿಗೀತೆ ಸ್ಪರ್ಧೆಯು ಹಮ್ಮಿಕೊಳ್ಳಲಾಗಿತ್ತು.

ಕೊರೋನಾ ಹಿನ್ನಲೆಯಲ್ಲಿ ಆನಲೈನ್ ಸ್ಪರ್ಧೆ ಫೆಸ್ಬುಕ್ ಅತಿ ಹೆಚ್ಚು ಲೈಕ್ ಪಡೆದವರನ್ನು ಆಯ್ಕೆಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸೇರಿ 1378 ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ ಪ್ರಾರಂಭಿಕ ಹಂತವಾಗಿ ನಿರ್ಣಾಯಕರ ನಿರ್ಣಯದ ಮೇರೆಗೆ 130 ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಅಂತಿಮ ಸುತ್ತಿನಲ್ಲಿ ಫೇಸ್ಬುಕ್ನಲ್ಲಿ ಪಡೆದ ಜನಮತಗಳ ಆಧಾರದ ಮೇಲೆ ಪ್ರಥಮ ಸ್ಥಾನ ಮಂಕಿಪುರದ ನಾಗರಾಜ ನಾಯ್ಕ, ದ್ವೀತಿಯ ಹೊನ್ನಾವರದ ರಂಜಿತಾ ನಾಯ್ಕ ಬೆಳ್ತಂಗಡಿಯ ಚಿತ್ತಾರ ಇವರು ಪಡೆದುಕೊಂಡಿದ್ದಾರೆ
ಟ್ರಸ್ಟ್ನ ವತಿಯಿಂದ ಆನ್ಲೈನ್ ಮೂಲಕ ಆಯೋಜಿಸಿದ ಸ್ಪರ್ಧಾ ವಿಜೇತರಿಗೂ, ಸ್ಪರ್ಧಿಸಿದ ಸ್ಪರ್ಧಾಳುಗಳಿಗೂ ಹಿನ್ನೆಲೆಯಾಗಿ ಸಹಕರಸಿದ ತಾಂತ್ರಿಕ ವರ್ಗದವರಿಗೂ ಟ್ರಸ್ಟ್ನ ಅಧ್ಯಕ್ಷೆ ಜಯಶ್ರೀ ನಾಯ್ಕ, ಹಾಗೂ ಪದಾಧಿಕಾರಿಗಳಿಗೂ ಅಭಿನಂದಿಸಿದ್ದಾರೆ.
Leave a Comment