ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ಶಸ್ತ್ರಚಿಕಿತ್ಸಕರಾದ ಡಾ.ಮಂಜುನಾಥ್ ಶೆಟ್ಟಿ ಮಹಿಳೆ ಗರ್ಭಾಶಯದಿಂದ ಸುಮಾರು 5 ಕಿ.ಗ್ರಾಂ ಗೆಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ.
ಶಾರದಾ ನಸಿರ್ಂಗ್ ಹೋಮ್ ಕರ್ಕಿಯಲ್ಲಿ ಡಾ.ಭಾಸ್ಕರ್ ಶೆಟ್ಟಿ ಮತ್ತು ಅರಿವಳಿಕೆ ತಜ್ಞೆ ಡಾ.ಚಾಂದಿನಿ ರಾಯ್ಕರ್ ಅವರ ಮಾರ್ಗದರ್ಶನದಲ್ಲಿ ಮದ್ರಾಸ್ನ ರೋಗಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಸುರಕ್ಷಿತ ಮತ್ತು ಉತ್ತಮ ಆರೋಗ್ಯದಲ್ಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದುವೆರೆಗೂ 800ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸೆಗೆ ಡಾ.ಮಂಜುನಾಥ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.


Leave a Comment