ಲಯನ್ಸ್ ಕ್ಲಬ್ ಹೊನ್ನಾವರ ಇವರ ವತಿಯಿಂದ ಹಸಿವು ನಿವಾರಣಾ ಕಾರ್ಯಕ್ರಮ ಪ್ರಯುಕ್ತ ತಾಲೂಕಿನ ಹಳದೀಪುರ ಕುದಬೈಲ್ನಲ್ಲಿ ವಲಸೆ ಬಂದ ಗೋಸಾವಿ ಬುಡಕಟ್ಟು ಜನಾಂಗದ 30 ಕುಟುಂಬಗಳಿಗೆ 40ಸಾವಿರ ರೂ. ಮೌಲ್ಯದ ಜೀವನಾವಶ್ಯಕÀ ಆಹಾರ ಸಾಮಗ್ರಿಗಳು ಹಾಗೂ ಮಾಸ್ಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಕುರಿತು ಮಾತನಾಡಿದ ಲಯನ್ಸ್ ಡಿಸ್ಟ್ರಿಕ್ಟ್ ಕೊ-ಆರ್ಡಿನೇಟರ್ ಲಾಯನ್ ಎಮ್.ಜೆ.ಎಫ್. ಎಸ್.ಜೆ ಕೈರನ್ ಮಾತನಾಡಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜದ ನಿಮಾರ್ಣದ ಗುರಿ ಹೊಂದಿದ್ದು ಅತೀ ಬಡಕುಟುಂಬದ ಜನರಿಗೆ ಈ ಕಾರ್ಯಕ್ರಮ ಮಾಡುತ್ತಿದೆ. ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತಿರುತ್ತದೆ. ಹಾಗಾಗೀ ಇವತ್ತಿನ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಅನೇಕ ಕುಟುಂಬಗಳು ಉದ್ಯೋಗದಿಂದ ವಂಚಿತವಾಗಿದೆ. ಕೆಲಸವಿಲ್ಲ, ಹೊಟ್ಟೆ ತುಂಬುವುದೇ ಕಷ್ಟ ಕರವಾಗಿದೆ. ಇಲ್ಲಿರುವ ಗೋಸಾವಿ ಬುಡಕಟ್ಟು ಜನರು ಉದ್ಯೋಗಕ್ಕಾಗಿ ವಲಸೆ ಬಂದವರು, ಆದರೆ ಈಗ ಯಾವುದೇ ಕೆಲಸವಿಲ್ಲ. ಕೆಲಸವಿಲ್ಲದಂತಹÀ ಕುಟುಂಬವನ್ನು ಗುರುತಿಸಿ ಲಯನ್ಸ್ ಕ್ಲಬ್ ಅವರನ್ನು ಸಂತೈಸುವÀ ಕೆಲಸ ಮಾಡುತ್ತಿದೆ ಎಂದರು.
ಸಾಮಾಜಿಕ ಸೇವಾಕಾರ್ಯಕರ್ತ ನಿಕಟಪೂರ್ವ ಪಂಚಾಯತದ ಅಧ್ಯಕ್ಷರು ಆದ ದಾಮೋದರ ನಾಯ್ಕ ಮಾತನಾಡಿ ಲಯನ್ಸ್ ಕ್ಲಬ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ತಾವು ಗಳಿಸಿದುದರಲ್ಲಿ ಇಲ್ಲದವರಿಗೆ ನೀಡುವುದೇ ತುಂಬಾ ದೊಡ್ಡ ಕೆಲಸ ಹಾಗೂ ಪುಣ್ಯದ ಕೆಲಸ, ಲಯನ್ಸ್ ಕ್ಲಬ್ ವಿವಿಧ ಕಷ್ಟಕರ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ಮುಂದಿರುತ್ತದೆ. ಇದು ಯಾವುದೇ ಸ್ವಾರ್ಥವಿಲ್ಲದ ಸಂಸ್ಥೆ ಲಯನ್ಸ್ ಕ್ಲಬ್ ಸಂಸ್ಥೆ ಎಂದು ಶ್ಲಾಘಿಸಿದರು.
ಲಯನ್ಸ್ ಅಧ್ಯಕ್ಷ ಪ್ರದಿಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲಯನ್ ಕಾರ್ಯದರ್ಶಿ ಎಂ.ಜಿ ನಾಯ್ಕ, ಸ್ವಾಗತಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು, ಲಯನ್ಸ್ ಸದಸ್ಯರಾದ ಮಹೇಶ್ ನಾಯ್ಕ, ಜನಾರ್ಧನ್ ನಾಯ್ಕ, ಡಿಸ್ಟ್ರಿಕ್ಟ್ ಗವರರ್ನರ್ ಗಿರೀಶ್ ಕುಚಿನಾಡ್, ಮಂಗಲಾ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಶೇಖರ್ ನಾಯ್ಕ, ರಾಜೇಶ ಸಾಳೆಹಿತ್ತಲ, ಹಾಗೂ ಲಯನ್ಸ್ ಸದಸ್ಯರು ಹಾಜರಿದ್ದರು.
Leave a Comment