• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಶಾಂತ ಪಾಯ್ದೆ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ

November 4, 2020 by Lakshmikant Gowda Leave a Comment

ಪ್ರಶಾಂತ ಪಾಯ್ದೆ ಕನ್ನಡ ಕಿರುತೆರೆಯಲ್ಲಿ ಅವಕಾಶದ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸ್ಪುರದ್ರೂಪಿ ಯುವಕ ಹುಟ್ಟಿದ್ದು ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕಾರವಾರದಲ್ಲಿ. ಬಾಲ್ಯದ ಜೀವನ ಓದು ಬರಹ ಎಲ್ಲಾ ಹೊನ್ನಾವರದಲ್ಲಿ. ಆರ್ಥಿಕವಾಗಿ ಸಾಕಷ್ಟು ಏರಿಳಿತಗಳನ್ನು ಕಂಡ ಕುಟುಂಬದಲ್ಲಿ ಜನಿಸಿ ಎಳವೆಯಲ್ಲಿಯೇ ಓದಿನ ಜೊತೆ ಮನೆ ಮನೆಗೆ ಹಾಲು ಹಾಕುವ ಜೊತೆಗೆ ಕೋರಿಯರ್ ಬಾಯ್ ಆಗಿಯೂ ದುಡಿದ ಈತ ಗೆಳೆಯರ ಜೊತೆ ನಾಟಕದ ಗೀಳನ್ನು ಅಂಟಿಸಿಕೊಂಡಿದ್ದ.

watermarked 04 03 2


ಓದಿನ ನಂತರ ಮುಂದೇನು ಎನ್ನುವ ಪ್ರಶ್ನೆ ಎದುರಾದಾಗ ಹೆಚ್ಚಿನೆಲ್ಲಾ ಹುಡುಗರ ಹಾದಿಯನ್ನೇ ಪ್ರಶಾಂತನೂ ತುಳಿದ. 2002 ರಲ್ಲಿ ಉದ್ಯೋಗವನ್ನರಸಿ ಬೆಂಗಳೂರಿನ ಬಸ್ಸು ಹತ್ತಿದವನು ಕೆಲಸದ ಒತ್ತಡದ ನಡುವೆಯೂ ಕಲೆಯಬಗೆಗಿನ ಸೆಳೆತ ಹೆಚ್ಚಿ ಮುಕ್ತ ಪೌಂಡೇಶನ್‍ನವರ ಒಡನಾಟ ಸಿಕ್ಕು ಬೀದಿ ನಾಟಕಗಳಲ್ಲಿ ಅಭಿನಯಿಸತೊಡಗಿದ. ನಂತರ ಗುರು ರಾಘವೇಂದ್ರ ಸೀರಿಯಲ್ ನಿರ್ದೇಶಕ ಬ.ಲ ಸುರೇಶ ಅವರ ಕಣ್ಣಿಗೆ ಬಿದ್ದು ಗುರುರಾಘವೇಂದ್ರ ದಾರವಾಹಿಯಲ್ಲಿ ಗುರುಗಳ ಬಾಲ್ಯ ಸ್ನೇಹಿತ ನಾಣಿಯ ಪಾತ್ರದಲ್ಲಿ ಅಭಿನಯಿಸಿದ ಈತ ನಂತರ ಒಂದರ ಬೆನ್ನಿಗೆ ಒಂದರಂತೆ ಸುಮಾರು 18 ದಾರವಾಹಿಗಳಲ್ಲಿ ಅಭಿನಯಿಸಿದ್ದಾನೆ.


ಧಾರವಾಹಿಯ ಅಭಿನಯದಲ್ಲಿ ಸಿಕ್ಕ ಯಶಸ್ಸನ್ನೇ ಬೆಳ್ಳಿ ತೆರೆಗೂ ಮುಂದುರಿಸಿದ ಪ್ರಶಾಂತ ಗೀತಾ ಬ್ಯಾಂಗಲ್ ಸ್ಟೋರ್ ಸಿನೆಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾನೆ. ಸದ್ಯ ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಹ್ಯಾಂಡ್ಸ್‍ಮ್ ಬಾಯ್ ಪ್ರಶಾಂತ ಅಭಿನಯ ಜಗತ್ತಿನಲ್ಲಿ ಬಹುದೂರ ಸಾಗುವ ಭರವಸೆಯನ್ನಂತೂ ಹುಟ್ಟು ಹಾಕಿದ್ದಾನೆ. ಸ್ಯಾಂಡಲ್‍ವುಡ್‍ನಲ್ಲಿ ಮಿಂಚುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವಕನಿಗೆ ಆಲ್ ದಿ ಬೆಸ್ಟ್ ಹೇಳೋಣ.

watermarked 04 03

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು Tagged With: artistic craft and milking. Born into a family, B.L. Suresha has come to grips with the stress of work, Geeta Bangal Store Cinema, Guru Raghavendra's Serial Director, Serenity act, television, ಕಂಡ ಕುಟುಂಬದಲ್ಲಿ ಜನಿಸಿ, ಕರ್ನಾಟಕದ ಕಾಶ್ಮೀರ ಎಂದೇ, ಕಲೆಯಬಗೆಗಿನ ಸೆಳೆತ ಹೆಚ್ಚಿ, ಕೆಲಸದ ಒತ್ತಡದ ನಡುವೆಯೂ, ಕೋರಿಯರ್ ಬಾಯ್, ಗೀತಾ ಬ್ಯಾಂಗಲ್ ಸ್ಟೋರ್ ಸಿನೆಮಾ, ಗುರು ರಾಘವೇಂದ್ರ ಸೀರಿಯಲ್ ನಿರ್ದೇಶಕ, ಬ.ಲ ಸುರೇಶ ಅವರ ಕಣ್ಣಿಗೆ ಬಿದ್ದು, ಬಾಲ್ಯದ ಜೀವನ ಓದು ಬರಹ, ಹಾಲು ಹಾಕುವ ಜೊತೆಗೆ, ಹೊನ್ನಾವರದಲ್ಲಿ. ಆರ್ಥಿಕವಾಗಿ ಸಾಕಷ್ಟು ಏರಿಳಿತ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...