• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾವಿನಕುರ್ವಾ ಸೇತುವೆ ನಿರ್ಮಾಣವಾಗಲಿರುವ ಸ್ಥಳ ವೀಕ್ಷಿಸಿದ ಶಾಸಕ ಸುನೀಲ ನಾಯ್ಕ

November 4, 2020 by Lakshmikant Gowda Leave a Comment

ಹೊನ್ನಾವರ – ಮಾವಿನಕುರ್ವಾ ಮತ್ತು ಹೊನ್ನಾವರ ಪಟ್ಟಣವನ್ನು ಸಂಪರ್ಕಿಸುವ ಸೇತುವೆ ನಿರ್ಮಾಣವಾಗಲಿರುವ ಬಿಕಾಸಿ ತಾರಿ ಬಳಿಯ ಜಾಗಕ್ಕೆ ಶಾಸಕ ಸುನೀಲ ನಾಯ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದೊಂದು ದಸಕದಿಂದ ಸೇತುವೆಯ ನಿರ್ಮಾಣದ ಕನಸು ಕಾಣುತ್ತಿದ್ದ ಮಾವಿನಕುರ್ವಾ ಜನತೆಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದ್ದು 45 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿದ್ದು ಶಾಸಕ ಸುನಿಲ ನಾಯ್ಕ ಮಾವಿನಕುರ್ವಾಕ್ಕೆ ಬೇಟಿ ನೀಡಿ ಸ್ಥಳ ಪರಿಶಿಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು.

mavinkurva 1

ಹಿಂದಿನ ಅವಧಿಯಲ್ಲಿಯೇ ಸೇತುವೆ ಮಂಜೂರಿಯಾಗಿತ್ತಾದರೂ ಸೇತುವೆ ನಿರ್ಮಾಣವಾಗಲಿರುವ ಸ್ಥಳದ ಬಗ್ಗೆ ಸ್ಥಳೀಯರಲ್ಲಿ ಒಮ್ಮತ ಸಾಧ್ಯವಾಗದ ಹಿನ್ನಲೆಯಲ್ಲಿ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಹಿಂದಿನ ಶಾಸಕರಾಗಿದ್ದ ಮಂಕಾಳ ವೈದ್ಯ ಶಿಫಾರಸ್ಸು ಮಾಡಿದ್ದಾಗಿ ಸುದ್ದಿಯಾಗಿತ್ತು. ಸೇತುವೆ ಸ್ಥಳಾಂತರ ವಿಷಯ ಚುನಾವಣಾ ವಿಷಯವಾಗಿಯೂ ಸಾಕಷ್ಟು ಸದ್ದುಮಾಡಿತ್ತು. ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೇತುವೆ ಮಂಜೂರಿಯಾಗಿದೆ ಎನ್ನುವ ಬಗ್ಗೆ ತಾಲೂಕಿನ ಹಲವೆಡೆ ದೊಡ್ಡ ದೊಡ್ಡ ಫ್ಲೆಕ್ಸ್‍ಗಳನ್ನು ಅಳವಡಿಸಿ ಸಮ್ಮಿಶ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತಾದರೂ ಸಮ್ಮಿಶ್ರ ಸರ್ಕಾರದ ಪತನವಾಗುವುದರೊಂದಿಗೆ ಸೇತುವೆಯ ಸುದ್ದಿಯೂ ತೆರೆಮರೆಗೆ ಸರಿದಿತ್ತು. ಇದೀಗ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಳ ಮತ್ತೊಮ್ಮೆ ಹಸಿರು ನಿಶಾನೆ ತೋರಿಸಿದೆ ಎನ್ನಲಾಗುತ್ತಿದ್ದು ಸ್ಥಳ ಸಮೀಕ್ಷಾ ಕಾರ್ಯಗಳು ನಡೆಯುತ್ತಿದೆ.

ಇದೇ ಹಿನ್ನಲೆಯಲ್ಲಿ ಮಂಗಳವಾರ ಮಾವಿನಕುರ್ವಾಕ್ಕೆ ಬೇಟಿ ನೀಡಿದ ಶಾಸಕರು ಶಾಸಕನಾಗುವ ಪೂರ್ವದಲ್ಲಿಯೇ ಇಲ್ಲಿನ ಜನರು ಸೇತುವೆ ನಿರ್ಮಾಣದ ಬೇಡಿಕೆಯನ್ನಿಟ್ಟಿದ್ದರು. ಇಲ್ಲಿ ಮಂಜೂರಿಯಾಗಿದ್ದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಶಿಫಾರಸ್ಸಾಗಿದ್ದನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ಇಲ್ಲಯೇ ಸೇತುವೆ ನಿರ್ಮಾಣಕ್ಕೆ ಅವಕಾಶ ಪಡೆದುಕೊಂಡಿದ್ದೇನೆ. ಮಾವಿನಕುರ್ವಾದ ಜನತೆ ಚುನಾವಣಾ ಸಮಯದಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ಖರ್ವಾ ಕ್ರಾಸ್ ದಿಂದ ಮಾವಿನಕುರ್ವಾರ್ವಾ ವರೆಗಿನ 9 ಕಿ.ಮೀ ರಸ್ತೆಯನ್ನು ಮರುಡಾಂಬರೀಕರಣ ಮಾಡಬೇಕು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಬಿಜೆಪಿಯ ಪ್ರಮುಖರಾದ ಗಣಪತಿ ನಾಯ್ಕ ಬಿ.ಟಿ, ವಿಘ್ನೇಶ್ವರ ಹೆಗಡೆ, ಮುಖಂಡರಾದ ಹರಿಶ್ಚಂದ್ರ ನಾಯ್ಕ, ಪೀಟರ್‍ಮೆಂಡೀಸ್, ಮಾದೇವ ಗೌಡ, ಮಂಜುನಾಥ ಗೌಡ, ರವಿ ಮೇಸ್ತ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Other Tagged With: construction of bridge worth crores, dream of bridge construction, land near Bikasi Tari, Mawankurwa people electoral time, Yeddyurappa government cabinet is once again green, ಕೋಟಿ ವೆಚ್ಚದ ಸೇತುವೆ ನಿರ್ಮಾಣ, ಬಿಕಾಸಿ ತಾರಿ ಬಳಿಯ ಜಾಗ, ಮಾವಿನಕುರ್ವಾದ ಜನತೆ ಚುನಾವಣಾ ಸಮಯ, ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಳ ಮತ್ತೊಮ್ಮೆ ಹಸಿರು ನಿಶಾನೆ, ಸೇತುವೆಯ ನಿರ್ಮಾಣದ ಕನಸು

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,013 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...