ಹಳಿಯಾಳ:- ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಇದನ್ನು ಇಬ್ಬಾಗ ಮಾಡಲು ಹೊರಟವರ ಪರಿಸ್ಥಿತಿ ಇಂದು ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಶ್ರೀ ಕ್ಷೇತ್ರ ಶ್ರೀಶೈಲ್ದ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಹಳಿಯಾಳಕ್ಕೆ ಭೇಟಿ ನೀಡಿದ ಅವರು ಇಲ್ಲಿಯ ವೀರಕ್ತ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ವೀರಶೈವ-ಲಿಂಗಾಯತ ಎಂಬುದನ್ನು ತಮ್ಮ ಸ್ವಾರ್ಥಕ್ಕಾಗಿ ಇಬ್ಬಾಗ ಮಾಡಲು ಹೊರಟರು ಆದರೇ ಧರ್ಮ ಒಡೆಯುವ ಪಾಪದ ಕೆಲಸಕ್ಕೆ ಕೈ ಹಾಕಿದವರ ಸ್ಥಿತಿ ಇಂದು ಏನಾಗಿದೆ ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಎಂದಿಗೂ ಧರ್ಮ ಒಡೆಯುವ ಅನಾಚಾರಕ್ಕೆ ಆಸ್ಪದ ಕೊಡಬಾರದು ಎಂದರು.

ಧರ್ಮಾಚರಣೆಯ ಕೇಂದ್ರಗಳು ಇಂದು ವೃದ್ದರಿಂದ ತುಂಬಿ ತುಳುಕುತ್ತಿವೆ. ಅದೇ ಯುವ ಪಿಳಿಗೆ ಬೇರೆಯೇ ಉದ್ದೇಶಗಳ ಕಡೆ ವಾಲುತ್ತಿದೆ. ಇದರಿಂದಲೇ ಇಂದು ಧರ್ಮಕ್ಕೆ ಕುತ್ತು ಬರುತ್ತಿದೆ ಎಂದು ಅಭಿಪ್ರಾಯಪಟ್ಟ ಶಿವಾಚಾರ್ಯ ಸ್ವಾಮೀಜಿಗಳು ಯುವಕರಿಗೆ ಧರ್ಮಪ್ರಭೋದನೆ ಮಾಡುವ ಅವಶ್ಯಕತೆ ಇದೆ ಅಲ್ಲದೇ ಇದು ದೇಶಕ್ಕೆ ಕೂಡ ಅಗತ್ಯವಿದೆ ಎಂದರು.
ಧರ್ಮ ಇದೆ ಎನ್ನುವುದನ್ನು ತೊರಿಸಿಕೊಡಬೇಕಿದೆ. ಅಸ್ತಿತ್ವ, ಅರಿವು, ಪ್ರಯೋಜನ ಈ ಮೂರು ವಾಕ್ಯಗಳ ಅಡಿ ಕೆಲಸ ಮಾಡುವಂತೆ ಕರೆ ನೀಡಿದ ಸ್ವಾಮೀಜಿಗಳು ಅಸ್ತಿತ್ವ ಇರುವುದು ಅರಿವಿಗೆ ಬರದೆ ಇದ್ದರೇ ಪ್ರಯೋಜನಕ್ಕೆ ಬರುವುದಿಲ್ಲ ಯಾವುದೇ ಸಂಗತಿ ಇರುವುದು ಮುಖ್ಯವಲ್ಲ ಅದನ್ನು ಗೊತ್ತು ಮಾಡಿಕೊಳ್ಳುವುದು ಮುಖ್ಯ ಗೊತ್ತು ಮಾಡಿಕೊಳ್ಳುವುದೇ ಶ್ರೀಮಂತಿಕೆ ಎಂದು ಪ್ರತಿಪಾದಿಸಿದರು.
ಮನುಷ್ಯ ಧರ್ಮ ಆಚರಣೆಯನ್ನು ಆರೋಗ್ಯಯುತವಾಗಿದ್ದಾಗ, ಸಶಕ್ತವಾಗಿದ್ದಾಗಲೇ ಮಾಡಬೇಕು ಹೊರತು ಕೊನೆಗಳಿಗೆಯ ಸಮಯದಲ್ಲಿ ಅಲ್ಲ ಎಂದ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ಧರ್ಮದ ಅರಿವು ಪ್ರತಿಯೊಬ್ಬರಿಗೆ ಆಗಬೇಕು, ಲಿಂಗ ಧರಿಸುವವರು ಆಚಾರ ವಿಚಾರಗಳಿಂದ ನಡೆಯಬೇಕು ಎಂದರು.

ದಾರ್ಶನಿಕ, ಧಾರ್ಮಿಕ ಮತ್ತು ಸಾಮಾಜಿಕ ಪರಿಭಾಷೆಗಳ ಬಗ್ಗೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಒಗ್ಟಟ್ಟಿನಿಂದ ಸಮಾಜ ಸಂಘಟಿಸುವಂತೆ ಕರೆ ನೀಡಿದರು.
ಅಂಬಿಕಾನಗರ ಶ್ರೀಶೈಲ್ ಶಾಖಾ ಮಠದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ಮಾತನಾಡಿ ಗ್ರಾಮೀಣ ಭಾಗದಿಂದ ಸಂಸ್ಕøತಿ ಬೆಳೆಯಬೇಕು, ತಾಯಿಯೇ ಮೊದಲ ಗುರು, ಮಹಿಳೆಯರಿಂದಲೇ ಇಂದು ಸಂಸ್ಕøತಿ ಉಳಿದಿದೆ ಎಂದ ಸ್ವಾಮಿಜಿಗಳು ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೇ ಧರ್ಮವನ್ನು ನಾವು ರಕ್ಷಿಸಬೇಕು, ಧರ್ಮಾಚರಣೆಗಳು ನಿಲ್ಲಬಾರದು, ಕಣ್ಣಿದ್ದು ಕುರುಡು ಬಾಯಿದ್ದು ಮುಖರಾಗಬಾರದು ಎಂದು ಧರ್ಮ, ಸಂಸ್ಕøತಿ ರಕ್ಷಣೆಯ ಬಗ್ಗೆ ಆಶೀರ್ವಚನ ನೀಡಿದರು.
ಲಿಂಗಾಯತ ಸಮಾಜದ ಪ್ರಮುಖರಾದ ಡಾ.ಟಿಸಿ ಮಲ್ಲಾಪುರಮಠ ಮಾತನಾಡಿ ಭಾರತದಲ್ಲಿ ಪಂಚಪೀಠಗಳು ಪ್ರಮುಖವಾಗಿದ್ದು ಇವುಗಳು ಸಮಗ್ರ ಭಾರತದ ರಕ್ಷಣಾ ಕೇಂದ್ರಗಳಾಗಿವೆ ಎಂದ ಅವರು ಬಾಲ್ಯದಿಂದಲೇ ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ದೊರೆಯಬೇಕು, ಗ್ರಾಮೀಣ ಮಟ್ಟದ ಜನರಿಗೆ ಸಂಸ್ಕøತಿ, ಧರ್ಮ, ಪಿಠಗಳ ಬಗ್ಗೆ ಪರಂಪರೆಗಳ ಬಗ್ಗೆ ಶಿಕ್ಷಣ ದೊರೆಯಬೇಕು ಜೊತೆಗೆ ಗ್ರಾಮ ಗ್ರಾಮಕ್ಕೆ ಶಿವಾಚಾರ್ಯರ ನೇಮಕ ಆಗಬೇಕೆಂದು ಶ್ರೀಶೈಲ್ ಸ್ವಾಮಿಗಳಲ್ಲಿ ವಿನಂತಿಸಿದರು.
ಪ್ರಮುಖರಾದ ಎಂ.ಸಿ.ಹಿರೇಮಠ, ಎಂಬಿ ತೊರಣಗಟ್ಟಿ, ಶೀವುದೇವ ದೇಸಾಯಿಸ್ವಾಮಿ, ಪುರಸಭೆ ಸದಸ್ಯೆ ರಾಜೇಶ್ವರಿ ಲಿಂಗರಾಜ ಹಿರೇಮಠ, ಉದಯ ಹೂಲಿ, ಶಿವು ಶೆಟ್ಟರ್, ಬಸವರಾಜ ಬೆಂಡಿಗೇರಿಮಠ, ಅಪ್ಪು ಚರಂತಿಮಠ ಇತರರು ಇದ್ದರು.
Leave a Comment