ಹೊನ್ನಾವರ ತಾಲೂಕಿನ ಉಪ್ಪೂಣಿ ಗ್ರಾಮದ ಹೆಬ್ಬಾಳದ ರವಿ ಗೋವಿಂದ ನಾಯ್ಕ ಇವರಿಗೆ ಸೇರಿದ ತೋಟದಲ್ಲಿ ಕಳ್ಳಭಟ್ಟಿ ಸಾರಾಯಿ ಹಾಗೂ ತಯಾರಿಕೆ ಬಳಸಿದ ವಸ್ತುಗಳನ್ನು ಹೊನ್ನಾವರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಜಪ್ತು ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.೧೦ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ತೋಟದಲ್ಲಿ ಸಂಗ್ರಹಿಸಿಟ್ಟ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದು ದಾಳಿ ವೇಳೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಹೊನ್ನಾವರ ವಲಯದ ಅಬಕಾರಿ ನಿರಿಕ್ಷಕರಾದ ದಾಮೋದರ ನಾಯ್ಕ, ಸಿಬ್ಬಂದಿಗಳಾದ ಡಿ.ಬಿ.ತಳೆಕರ್, ಸಯ್ಯದ್ ಹಮೀದ್, ರಮೇಶ ರಾಕೋಡ್,ಮುತ್ತೆಪ್ಪ ಜಗಡಿಕಟ್ಟಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Comment