ಬಿಕ್ಕೆಗಿಡ ಕಾಡು ಬಿಕ್ಕೆ ಗಿಡ gardenia gummifera BIKKE GIDA ಔಷಧೀಯ ಗುಣಗಳು
ಸಣ್ಣ ಪೊದೆ ಬಲವಾದ ಶಾಖೆಗಳಿರುವುವು. ತಿರುಳು ನುಣುಪು ಮತ್ತು ಹಸಿರು-ಹಳದಿ ಮಿಶ್ರಿತ ವರ್ಣದ್ದು. ಹಸಿರು ಒರಟಾದ ಎಲೆಗಳು ಮತ್ತು ಎಲೆಗಳ ಕೆಳಗಡೆ ನಯವಾದ ರೋಮಗಳಿರುತ್ತವೆ.
ಕಾಯಿಗಳು ಹಸಿರಾಗಿದ್ದು ಗಿಡ್ಡದಾಗಿರುವುವು. ಹಣ್ಣಾದಾಗ ಹಸಿರು-ಹಳದಿ ವರ್ಣದಲ್ಲಿರುವುದು. ಒಳಗಡೆ ಗಟ್ಟಿಯಾದ ಬೀಜಗಳು ಮತ್ತು ಸಿಹಿಯಾದ ತಿರುಳಿರುವುದು.
ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಹಳ್ಳಿಯವರು ಕುಕ್ಕೆಗಳಲ್ಲಿ ತಂದು ಮಾರುತ್ತಾರೆ.ಈ ಗಿಡದಿಂದ ಸುರಿಯುವ ಹಾಲಿಗೆ ಅಹಿತಕರ ವಾಸನೆಯಿರುತ್ತದೆ.ಇದಕ್ಕೆ ಬಿಕ್ಕೆಬಂಕೆಯೆನ್ನುತ್ತಾರೆ.ಇದರಲ್ಲಿ ಗಾರ್ಡಿಸಿನ್ ಮತ್ತು ಡಿಕಾನೆಲಿ ಎಂಬ ಎರಡು ಬಗೆಯ ಅಂಟಿರುವುದು.
ಹೆಚ್ಚಿನ ವಿವರಗಳಿಗೆ;
https://kn.wikipedia.org/s/1m87
Leave a Comment