ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗಿನ ಜಾವ ಸಂಭವಿಸಿದೆ.

ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್ ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ. ವಾಹನದಲ್ಲಿ ಚಾಲಕನು ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಕಾರ್‍ನಲ್ಲಿದ್ದ ಪ್ರಯಾಣಿಕ ರಾಹುಲ್(32) ಎನ್ನುವವರು ತಾಲೂಕ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನುಳಿದ ಪ್ರಯಾಣಿಕರಾದ ವಂದನಾ ಹಾಗೂ ನೇಹಾ ಮತ್ತು ಕಾರು ಚಾಲಕ ಶರತಕುಮಾರ್ ಎನ್ನುವವರು ಗಾಯಗೊಂಡಿದ್ದಾರೆ. ಇದರಲ್ಲಿ ನೇಹಾ ಎನ್ನುವ ಯುವತಿ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದೆ. ಘಟನೆಯ ತಿವ್ರತೆಗೆ ಕಾರು ಸಂಪೂರ್ಣ ಜಖಂ ಆಗಿದೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment