• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ

November 20, 2020 by Lakshmikant Gowda Leave a Comment

ಕಡಲಿನಲೆಗಳ ನಿರಂತರ ಹೊಯ್ದಾಟಕ್ಕೆ ಸಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಅಳಿವೆಯ ಸಂರಚನೆ. ದೀಪಾವಳಿಯ ಸಮಯದಲ್ಲಿ ಕಾಸರಕೋಡ ಟೊಂಕ ಅಳಿವೆಯಂತೂ ನೋಡುಗರ ಮನಸೂರೆಗೊಳ್ಳುವಂತ ಸೌಂದರ್ಯ ಸೃಷ್ಠಿಯಿಂದ ಗಮನ ಸೆಳೆಯಿತು.

02 17 3


ಮೀನುಗಾರರ ಪಾಲಿಗೆ ಅಪಾಯಕಾರಿ ಅಳಿವೆ ಎಂದೇ ಕುಖ್ಯಾತಿಯಾಗಿರುವ ಟೊಂಕ ಅಳಿವೆಯಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ಕಂಬಗಳನ್ನು ನಿರ್ಮಿಸಲು ಅಳಿವೆಯ ಒಡಲನ್ನು ಕೊರೆದ ಪರಿಣಾಮ ರಾಶಿ ರಾಶಿ ಮರಳು ಅಳಿವೆಯಲ್ಲಿ ಶೇಖರಣೆಯಾಗಿದೆ. ದೊಡ್ಡ ದೊಡ್ಡ ದಿಬ್ಬಗಳಾಗಿ ಗೋಚರಿಸುತ್ತಿದ್ದ ಮರಳಿನ ರಾಶಿ ದೀಪಾವಳಿ ಅಮವಾಸ್ಯೆಯ ಭರತದ ಬೃಹತ್ ಅಲೆಗಳ ಹೊಡೆತಕ್ಕೆ ಕರಗಿ ಹೋಗಿವೆ. ಎಂದಿಗಿಂತ ರಭಸವಾಗಿ ಮುನ್ನುಗ್ಗಿಬಂದ ಅಲೆಗಳು ಮರಳಿ ಹೋಗುವಾಗ ದಡದಲ್ಲಿದ್ದ ಮರಳನ್ನೂ ಕೊಚ್ಚಿಕೊಂಡುಹೋಗಿ ಅಳಿವೆಯಲ್ಲಿ ಮರಳಿನ ಪದರುಗಳು ನಿರ್ಮಾಣವಾಗಿವೆ.
ಸುಂದರ ಕಡಲ ತೀರಗಳನ್ನು ಹುಡುಕುತ್ತಾ ವಿದೇಶಗಳಿಗೆ ಅಲೆಯವ ಸಿನೆಮಾ ಮಂದಿ ಉತ್ತರಕನ್ನಡದ ಕರಾವಳಿಯತ್ತ ಕಣ್ಣು ಹಾಯಿಸಿದರೆ ನೈಜತೆಯ ಸೌಂದರ್ಯ ತುಂಬಿ ತುಳುಕುತ್ತಿರುವ ಹತ್ತಾರು ತಾಣಗಳು ಕಣ್ಣಿಗೆ ಬೀಳುತ್ತವೆ. ಕಡಿಮೆ ವೆಚ್ಚದ ಜೊತೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಹೊರ ಜಗತ್ತಿಗೆ ತೆರೆದಿಡುವ ಸದುದ್ದೇಶವನ್ನೂ ಈಡೇರಿಸಿಕೊಳ್ಳಬಹುದು. ಆದರೆ ಎಷ್ಟು ಮಂದಿಯಲ್ಲಿ ಈ ಇಚ್ಛಾಶಕ್ತಿ ಇದೆ ಎನ್ನುವುದೇ ಕಾಡುತ್ತಿರುವ ಪ್ರಶ್ನೆ.

02 17
02 17 2


ಬ್ರೇಕ್‍ವಾಟರ್ ನಿರ್ಮಾಣವಾದರೆ ಮರೆಯಾಗುವ ಅಳಿವೆಯ ಈ ಸೌಂದರ್ಯವನ್ನು ಅಷ್ಟರೊಳಗೆ ಮಾತ್ರ ಸವಿಯಬೇಕಿದೆ. ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ಪಡೆದ ಕಾಸರಕೋಡ ಇಕೋ ಬೀಚ್, ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಆಗಿ ಸಿಲೆಕ್ಟ್ ಆಗಿರುವ ಅಪ್ಸರಕೊಂಡ, ಮನಸ್ಸಿಗೆ ಮುದ ನೀಡುವ ಕಾಂಡ್ಲಾ ಬೋರ್ಡ ವಾಕ್ ಇವೆಲ್ಲವೂ ಕೇವಲ ಮೂರ್ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿಯೇ ನಿರ್ಮಾಣವಾಗಿದ್ದು ಕಾಸರಕೋಡ ಹಾಗೂ ಕೆಳಗಿನೂರು ಪಂಚಾಯತ ಪ್ರವಾಸೋದ್ಯಮದಲ್ಲಿ ಹೆಸರುಮಾಡುವ ದಿನ ದೂರವಿಲ್ಲ ಎನಿಸುತ್ತಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...