ಹೊನ್ನಾವರ: ತಾಲೂಕಿನ ಹೆಮ್ಮೆಯ ಚೆಸ್ ಪ್ರತಿಭೆ ಅಂತರಾಷ್ಟ್ರೀಯ ಚೆಸ್ ಪಟು ಸಮರ್ಥ ಜೆ ರಾವ್ ಚೆಸ್ ಒಲಂಪಿಯಾಡ್ನಲ್ಲಿ ಭಾಗವಹಿಸುವ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾನೆ.
40 ರಾಷ್ಟ್ರಗಳಿಂದ 61 ತಂಡಗಳು ಭಾಗವಹಿಸಲಿರುವ ಚೆಸ್ ಓಲಂಪಿಯಾಡ್ ಇದೇ ಬರುವ ನವೆಂಬರ್ 21 ರಿಂದ ಡಿಸೆಂಬರ್ 3ರವರೆಗೆ ನಡೆಯಲಿದೆ. ವಿಶೇಷಚೇತನದವರಿಗಾಗಿ ನಡೆಯುವ ಆನ್ಲೈನ್ ಚೆಸ್ ಒಲಂಪಿಯಾಡ್ನಲ್ಲಿ ಸಮರ್ಥ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾನೆ. ಹೆತ್ತವರು, ಶಿಕ್ಷಕರು, ಸಹಪಾಠಿಗಳು ಹಿತೈಷಿಗಳು ಸಮರ್ಥನಿಗೆ ಶುಭ ಹಾರೈಸಿದ್ದಾರೆ.
Leave a Comment