• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂವಿಧಾನದ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ: ಶ್ರೀ ಪ್ರಭುಲಿಂಗ ನಾವದಗಿ

November 23, 2020 by Sachin Hegde Leave a Comment

ನಮ್ಮ ಸಂವಿಧಾನ ಅತ್ಯಂತ ಮಹತ್ವದ ದಾಖಲೆಯಾಗಿದ್ದು ಅದರಲ್ಲಿನ ತತ್ವ, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಾಗು ಆದರ್ಶಗಳನ್ನು ಪಾಲಿಸುವ ಅಗತ್ಯ ಪ್ರತಿಯೊಬ್ಬ ಪ್ರಜೆಯದು ಎಂದು ಕರ್ನಾಟಕ ರಾಜ್ಯ ಅಡ್ವೊಕೇಟ್‌ ಜನರಲ್‌ ಶ್ರೀ ಪ್ರಭುಲಿಂಗ ನಾವದಗಿ ಹೇಳಿದರು.

untitled 1

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆ-ಪ್ರೆಸ್‌ ಇನ್ಫರ್ಮೇಶನ್‌ ಬ್ಯೂರೋ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ “ಸಂವಿಧಾನ: ಪ್ರಜಾಪ್ರಭುತ್ವದ ಅಡಿಪಾಯ” ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಿಖಿತಗ್ರಂಥ. ಅದನ್ನು ಅಂಗೀಕರಿಸಲಾದ ೧೯೪೯ ರ ನವೆಂಬರ್‌ ೨೬ ಅತ್ಯಂತ ಮಹತ್ವದ ದಿನ. ಗಣರಾಜ್ಯ ಉದಯವಾದ ಆ ದಿನದ ಆಚರಣೆ ಮಹತ್ವಪೂರ್ಣ ಎಂದರು.
“ಸಂವಿಧಾನ ರಚನೆ” ಕುರಿತು ವಿಷಯ ಮಂಡಿಸಿದ ಹಿರಿಯ ವಕೀಲ ಶ್ರೀ ವಿವೇಕ್‌ ರೆಡ್ಡಿ ಸಂವಿಧಾನ ಭಾರತದ ಸಮಾಜದಲ್ಲಿ ಬದಲಾವಣೆ ತಂದಿದೆ. ಅದು ಎರಡು ವಿಶಿಷ್ಟ ಆಯಾಮವನ್ನು ನೀಡುತ್ತದೆ. ಸಮಾಜವನ್ನು ಹೇಗೆ ರೂಪಿಸಬೇಕು ಹಾಗು ರಾಷ್ಟ್ರವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಉತ್ತಮ ಒಳನೋಟವನ್ನು ನೀಡುತ್ತದೆ ಎಂದರು. ಸಮಾನತೆಯ ಆಧಾರದ ಮೇಲೆ ಸಮಾಜದ ನಿರ್ಮಾಣಕ್ಕೆ ಒತ್ತು ನೀಡುವ ನಮ್ಮ ಸಂವಿಧಾನ ಆರ್ಥಿಕವಾಗಿ ದುರ್ಬಲರಿಗೂ ಪರಿಹಾರ ನೀಡಿದೆ. ಜತೆಗೆ ಜಾತಿ ಆಧಾರಿತ ಶೋಷಣೆ ತೊಡೆಯಲು ವಿಶೇಷ ಸವಲತ್ತು ಕಲ್ಪಿಸಿದೆ ಎಂದರು. ಬಲಿಷ್ಟ ಬಾರತವನ್ನು ನಿರ್ಮಿಸಲು ಸಂವಿಧಾನ ಪೂರಕವಾಗಿದ್ದು ಸಾಂಸ್ಕೃತಿಕ ಶಕ್ತಿಯನ್ನು ಉಳಿಸಿಕೊಂಡು ಮುಂದುವರಿಯಲು ಪೂರಕವಾಗಿದೆ ಎಂದು ಹೇಳಿದರು.
ಗದಗ್‌ ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವ ವಿದ್ಯಾಲಯದ ಗೌರವ ಪ್ರಾಧ್ಯಾಪಕರಾದ ಪ್ರೊ. ಜೀವನ್‌ ಕುಮಾರ್‌, ಶಿಕ್ಷಣದಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸಂವಿಧಾನದ ತಿಳಿವಳಿಕೆ ಅತ್ಯಗತ್ಯ ಎಂದು ಹೇಳಿದ ಅವರು ಸಾಮಾಜಿಕ, ಸೈದ್ಧಾಂತಿಕ ಹಾಗು ನೈತಿಕ ಮೌಲ್ಯಗಳನ್ನು ಸಂವಿಧಾನ ಒಳಗೊಂಡಿದ್ದು ಸಂವಿಧಾನದ ತಾತ್ವಿಕ ಅಡಿಪಾಯವನ್ನು ಸಮರ್ಥವಾಗಿ ಅರಿಯಬೇಕಾಗಿದೆ ಎಂದರು. ಭಾರತದ ಸಂವಿಧಾನ ನೈತಿಕ ಮೌಲ್ಯಗಳ ಒಂದು ದಾಖಲೆಯಾಗಿದ್ದು ಪ್ರಜಾಪ್ರಭುತ್ವದ ಅಡಿಪಾಯ ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending Tagged With: broadcasting ministry, celebration of the emergence of the republic, central news, Constitution, foundation of democracy, news bulletin press in Bengaluru., participating in webinar, ಕರ್ನಾಟಕ ರಾಜ್ಯ ಅಡ್ವೊಕೇಟ್‌ ಜನರಲ್‌ ಶ್ರೀ, ಕೇಂದ್ರ ವಾರ್ತಾ, ಗಣರಾಜ್ಯ ಉದಯವಾದ ಆ ದಿನದ ಆಚರಣೆ, ತತ್ವ, ಪ್ರಜಾಪ್ರಭುತ್ವದ ಅಡಿಪಾಯ, ಪ್ರಸಾರ ಸಚಿವಾಲಯ, ಬೆಂಗಳೂರಿನ ವಾರ್ತಾ ಶಾಖೆ-ಪ್ರೆಸ್‌, ಮೌಲ್ಯಗಳನ್ನು ಅಳವಡಿಸಿ, ವೆಬಿನಾರ್ ನಲ್ಲಿ ಪಾಲ್ಗೊಂಡು, ಸಂವಿಧಾನ ಅತ್ಯಂತ ಮಹತ್ವದ ದಾಖಲೆ, ಸಂವಿಧಾನ ರಚನೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...