ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ಪಂಚಾಯತ ಚಿಕ್ಕೊಳ್ಳಿ, ಹಿರೇಬೈಲ್ ಗ್ರಾಮದ ಮೇಲಿನಕೇರಿ ೨೦ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಹಡಿನಬಾಳ ಪಂಚಾಯತ ಹಂದಿಮೂಲೆಯಿoದ ಹಾಡಗೇರಿ ಹಾಗೂ ಹುಡಗೋಡನಿಂದ ಮಾಸ್ತಿಮನೆಗೆ ತಲಾ ೫ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಗ್ರಾಮೀಣ ಭಾಗಗಳಿಗೆ ಮುಲಭೂತ ಸೌಕರ್ಯ ಒದಗಿಸಲು ಹಲವು ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ೨೦ ಕೋಟಿ ವೆಚ್ಚದ ಹಿರೂಬೈಲ್ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ೩೦ ಲಕ್ಷ ವೆಚ್ಚದ ಎರಡು ಕಾಲುಸಂಕ ನಿರ್ಮಾಣಕ್ಕೂ ಅನುಮೋದನೆ ದೊರೆತಿದ್ದು, ಕೆಲವೇ ದಿನದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಕ್ಷೇತ್ರದ ಜನತೆ ಶಾಸಕನಾಗಿ ಆಯ್ಕೆ ಮಾಡಿದ್ದು, ಅವರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇನೆ. ಕ್ಷೇತ್ರದ ಸರ್ವತೋಮಕ ಅಭಿವೃದ್ದಿಗೆ ಪಣ ತೊಟ್ಟಿದ್ದು, ಹಂತಹoತವಾಗಿ ರಸ್ತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯ ಆರ್.ಪಿ.ನಾಯ್ಕ, ಮುಖಂಡರಾದ ಹರಿಯಪ್ಪ ನಾಯ್ಕ, ಮಂಜುನಾಥ ನಾಯ್ಕ ಗೇರುಸೊಪ್ಪಾ, ಗಣಪತಿ ನಾಯ್ಕ ಬಿಟಿ, ವಿಘ್ನೇಶ್ವರ ಹೆಗಡೆ, ಪ್ರದೀಪ ಹುಡಗೋಡ, ಸಚೀನ ಶೇಟ್, ರವಿ ರಾಯಲಕೇರಿ, ನೂತನ ನಾಯ್ಕ, ಪ್ರಕಾಶ ನಾಯ್ಕ ಅನಿಲಗೋಡ, ತಿಮ್ಮಪ್ಪ ನಾಯ್ಕ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
Leave a Comment