ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ ಜಾನುವಾರುಗಳಿಗೆ ತಂದೊಡ್ಡಿ ಅವುಗಳ ಪ್ರಾಣಕ್ಕೇ ಸಂಚಕಾರ ತರುತ್ತದೆ.
ಪ್ರತಿದಿನ ಒಂದು ಹೆಣ್ಣು ಉಣ್ಣೆ 1 ಮಿಲಿ ರಕ್ತ ಮೆಲ್ಲುತ್ತದೆಯಂತೆ. ನೂರು ಉಣ್ಣೆ ಇದ್ದರೆ 100 ಮಿಲಿ ರಕ್ತ. ಜಾನುವಾರು ಹದಿನೈದು ದಿನಕ್ಕೆಲ್ಲಾ ಶಿವನ ಪಾದ ಸೇರಲು ಇಷ್ಟು ಸಾಕು. ಗಂಡು ಉಣ್ಣೆಗಳು ರಕ್ತ ಕುಡಿಯಲ್ಲ. ಈ ಉಣ್ಣೆ ಅಥವಾ ಉಣುಗು ಅಥವಾ ಉಗಣಗಳು ಮಂಗನ ಕಾಯಿಲೆಯನ್ನು ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಣ್ಣೆಗಳು ಮನುಷ್ಯನಿಗೆ ಮಾರಣಾಂತಕವಾದ ಬೊರಿಲಿಯೋಸಿಸ್, ಎರ್ಲಿಚಿಯೋಸಿಸ್ ಇತ್ಯಾದಿಗಳನ್ನು ಹರಡಿದರೆ, ಜಾನುವಾರುಗಳಿಗೆ ಅನಾಪ್ಲಾಸ್ಮೊಸಿಸ್, ಬೆಬೆಸಿಯೋಸಿಸ್, ಥ್ಯೆಲೇರಿಯಾಸಿಸ್ ಇತ್ಯಾದಿ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಅಲ್ಲದೇ ಅವುಗಳು ಕಚ್ಚುವಾಗ ಅವುಗಳ ಜೊಲ್ಲುಗ್ರಂಥಿಯಿAದ ಸ್ರವಿಸುವ ವಿಷವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪಾರ್ಶ್ವವಾಯು ಪೀಡೆಯನ್ನುಂಟು ಮಾಡಿ ಜೀವ ತಿನ್ನುತ್ತದೆ. ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಂದು ಹಲವಾರು ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.
ಇದೊಂದು ಪ್ರಾಣಿಗಳಿಂದ (ಮಂಗನಿAದ) ಮನುಜನಿಗೆ ಉಣ್ಣೆಗಳ ಮೂಲಕ ಹರಡುವ ಕಾಯಿಲೆ. ಇತ್ತಿಚೆಗೆಂತೂ ಈ ಕಾಯಿಲೆ ಮಲೆನಾಡಿನಲ್ಲಿ ಅದರಲ್ಲೂ, ಸಾಗರ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜನರು ಮನೆಯಿಂದ ಹೊರ ಬರಲು ಅಂಜುವ ಹಾಗೇ ಮಾಡಿತ್ತು.ಈ ಉಣ್ಣೆ ಎಂಬ ದುಷ್ಟ ಜೀವಿಯ ಅದ್ಭುತ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯೇ? ಇದೋ ಇಲ್ಲಿದೆ .
ವಿವರ;ಉಣ್ಣೆ ಅಥವಾ ಉಣುಗುಗಳು ಅರಾಕಿನಿಡ್ಸ್ ಜಾತಿಗೆ ಸೇರಿದ ಒಂದು ಕೀಟವಾಗಿರುತ್ತದೆ. ಪ್ರಪಂಚದಾದ್ಯAತ ಇರುವ ಉಣ್ಣೆಗಳಲ್ಲಿ ಸುಮಾರು 900 ವಿಧಗಳಿದ್ದು, ಇವುಗಳನ್ನು ಗಟ್ಟಿ ಉಣ್ಣೆ ಮತ್ತು ಮೆತ್ತನೇ ಉಣ್ಣೆ ಎಂದು ವಿಭಾಗಿಸಬಹುದು. ಗಟ್ಟಿ ಉಣ್ಣೆಗಳಲ್ಲಿ ಸುಮಾರು 700 ವಿಧಗಳಿದ್ದು, ಇವುಗಳಿಗೆ 4 ಜೊತೆ ಅಂದರೆ ಎಂಟು ಕಾಲುಗಳು ಇರುತ್ತವೆ. ಅವುಗಳ ದೇಹದ ಮೇಲೆ ಒಂದು ಗÀಟ್ಟಿಯಾದ ಕವಚ ಇರುತ್ತಿದ್ದು, ಇದು ಉಣ್ಣೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ರಕ್ತ ಹೀರಲು ಅವಶ್ಯವಿರುವ ಕೊಂಡಿಯAತ ಅಂಗವು ತಲೆಯ ಭಾಗದಲ್ಲಿದ್ದು, ಇದಕ್ಕೆ ಗರಗಸದಂತ ಹಲ್ಲುಗಳಂತ ಅಂಗವಿರುತ್ತದೆ. ಈ ಅಂಗದಿAದ ಇದು ಪ್ರಾಣಿಯ ಶರೀರಕ್ಕೆ ತೂತು ಕೊರೆಯುವಾಗ ಸ್ರವಿಸಲ್ಪಡುವ ರಾಸಾಯನಿಕವೊಂದು ಆ ಭಾಗವನ್ನು ಮರಗಟ್ಟಿಸಿ, ಸ್ಥಳೀಯ ಅರವಳಿಕೆಯನ್ನುಂಟು ಮಾಡಿ ಪ್ರಾಣಿಗಳಿಗೆ ಏನೂ ನೋವು ಗೊತ್ತಾಗದ ಹಾಗೇ ರಕ್ತ ಹೀರುತ್ತದೆ.ಮೆತ್ತನೇ ಉಣ್ಣೆಗಳ ಶರೀರದ ಮೇಲೆ ಗಟ್ಟಿಯಾದ ರಕ್ಷಾ ಕವಚವಿರುವುದಿಲ್ಲ. ಅವುಗಳ ಮೈ ಕವಚ ಸುಕ್ಕು ಗಟ್ಟಿರುತ್ತದೆ. ಅವುಗಳ ಕಡಿಯುವ ಅಂಗ ಸುಲಭವಾಗಿ ಕಾಣುವುದಿಲ್ಲ.
ಗಂಡು ಮತ್ತು ಹೆಣ್ಣು ಉಣ್ಣೆಗಳನ್ನು ಸುಲಭವಾಗಿ ಗುರುತಿಸುವುದು ಕಷ್ಟ.ಮಂಗನ ಕಾಯಿಲೆಯನ್ನುಂಟು ಮಾಡುವ ಹೀಮೋಪೈಸಾಲಿಸ್ ಸ್ಪೆöÊನಿಜೆರಾ ಉಣ್ಣೆಯು ಒಂದು ಅತಿಥಿ ಪ್ರಾಣಿ ಉಣ್ಣೆಯಾಗಿದ್ದು ತನ್ನ ಜೀವಿತ ಅವಧಿಯ ವಿವಿಧ ಹಂತಗಳಾದ ಲಾರ್ವ, ನಿಂಫ್ ಮತ್ತು ವಯಸ್ಕತನವನ್ನು ಒಂದೇ ಪ್ರಬೇಧದ ಜೀವಿಗಳಾದ ಮಂಗ ಅಥವಾ ಮನುಷ್ಯ ಅಥವಾ ಜಾನುವಾರಿನ ಮೇಲೆ ಕಳೆಯುತ್ತದೆ. ಉಣ್ಣೆಗಳು, ಅವುಗಳಿಗೆ ಅವುಗಳ ಪ್ರಬೇಧಗಳಿಗೆ ಹೊರತು ಪಡಿಸಿದ ಪ್ರಾಣಿಗಳ ರಕ್ತವನ್ನು ಕುಡಿದು ಬದುಕಲು ಸಾಧ್ಯವಿರುವುದಿಲ್ಲ.ಗಂಡು ಮತ್ತು ಹೆಣ್ಣು ಉಣ್ಣೆಗಳನ್ನು ಅವುಗಳ ಗಾತ್ರದ ಮೇಲೆ ಬೇರ್ಪಡಿಸಬಹುದು. ಗಂಡು ಉಣ್ಣೆಗಳು ಗಾತ್ರದಲ್ಲಿ ಇವು ಹೆಣ್ಣು ಉಣ್ಣೆಗಳಷ್ಟು ದೊಡ್ಡದಾಗಿರುವುದಿಲ್ಲ. ಇವುಗಳಿಗೂ 8 ಕಾಲುಗಳಿರುತ್ತವೆ. ಇವು ಕಡಿಮೆ ಪ್ರಮಾಣದಲ್ಲಿ ರಕ್ತ ಕುಡಿಯುವುದರಿಂದ ಚಪ್ಪಟೆಯಾಗಿರುತ್ತವೆ. ಇವು ರೋಗವನ್ನು ಹರಡುವುದಿಲ್ಲ.
ಕೇವಲ ಸಂತಾನೋತ್ಪತ್ತಿ ಕ್ರಿಯಾಗಾಗಿ ಇವು ಇರುತ್ತಿದ್ದು, ಆ ಕ್ರಿಯೆಯ ನಂತರ ಮರಣವನ್ನಪ್ಪುತ್ತವೆ.ಅಷ್ಟಕ್ಕೂ ಈ ಉಪದ್ರಕಾರಿ ಉಣ್ಣೆ ಬದುಕಲು ಪಡುವ ಬವಣೆ ಅಷ್ಟಿಲ್ಲಲ್ಲ. ಹೆಣ್ಣು ಉಣ್ಣೆ ಜಾನುವಾರುಗಳ ರಕ್ತ ಕುಡಿದು ಸಣ್ಣ ಗಾತ್ರದಲ್ಲಿರುವ ಉಣ್ಣೆ ಸುಮಾರು 1.5 ಸೆಂ ಮೀ ವರೆಗೂ ಹಿಗ್ಗುತ್ತದೆ. ಹೊಟ್ಟೆ ತುಂಬಿದ ಮೇಲೆ ಪ್ರಾಣಿಯ ಶರೀರದ ಮೇಲೇನು ಕೆಲಸ?. ಕೆಳಗೆ ಬಿದ್ದು ಹೋಗುತ್ತದೆ. ಸಂತಾನೋತ್ಪತ್ತಿಗಾಗಿ ಹೆಣ್ಣು ಗಂಡು ಉಣ್ಣೆಗಳ ಮಿಲನ ಕ್ರಿಯೆ ಹೆಣ್ಣು ಉಣ್ಣೆ ರಕ್ತ ಕುಡಿಯಾಗುವಾಗಲೇ ಪ್ರಾಣಿಗಳ ಮೈ ಮೇಲೆ ಆಗುತ್ತದೆ. ಈ ಕ್ರಿಯೆ ನಡೆದ ನಂತರ ಬಡಪಾಯಿ ಗಂಡು ಉಣ್ಣೆಗಳು ಸತ್ತು ಹೋಗುತ್ತವೆ.ಹೆಣ್ಣು ಉಣ್ಣೆ ತಾನು ಕುಡಿದ ರಕ್ತವನ್ನೆಲ್ಲಾ ಬಳಸಿಕೊಂಡು ಮೊಟ್ಟೆ ಉತ್ಪಾದನೆಗೆ ತೊಡಗುತ್ತದೆ. ಒಂದು ಹೆಣ್ಣು ಉಣ್ಣೆ ಸುಮಾರು 4000 ಮೊಟ್ಟೆ ಇಟ್ಟು, ನಂತರ ಸತ್ತು ಹೋಗುತ್ತದೆ ಎಂದರೆ ಆಶ್ಚರ್ಯವಾಗಬಹುದು.
ತಮ್ಮ ಸಂತಾನೋತ್ಪತ್ತಿಗಾಗಿ ದೇಹವನ್ನೇ ತ್ಯಾಗ ಮಾಡುವ ಈ ಜೀವಿಗಳ ಬದುಕು ಸೋಜಿಗ. ತತ್ತಿ ಒಡೆದು ಬಂದ ಮರಿಗಳಿಗೆ ಲಾರ್ವ ಎಂದು ಕರೆಯುತ್ತಾರೆ.ಇವುಗಳಿಗೂ ಸಹ ಮುಂದಿನ ಹಂತಕ್ಕೆ ಹೋಗಲು ರಕ್ತ ಬೇಕು. ರಕ್ತ ಬಿಟ್ಟು ಅವುಗಳಿಗೆ ಬೇರೆ ಯಾವುದೂ ಅಹಾರ ಇಲ್ಲ. ಇವು ತುಂಬಾ ಚಿಕ್ಕಗಿರುವುದರಿಂದ ಬಹಳ ರಕ್ತ ಬೇಕಾಗುವುದಿಲ್ಲ. ಕಾಡು ಪ್ರಾಣಿಗಳಾದ ಜಿಂಕೆ, ಅಳಿಲು ಇತ್ಯಾದಿಗಳ ಅಲ್ಪ ರಕ್ತ ಕುಡಿದ ನಂತರ ಇವು “ನಿಂಫ್” ಹಂತಕ್ಕೆ ತೆರಳುತ್ತವೆ. ನಿಂಫ್ ಹಂತದಲ್ಲಿ ಉಣ್ಣೆಗಳಿಗೆ ಚಿಕ್ಕ 8 ಕಾಲುಗಳು ಇರುತ್ತಿದ್ದು, ರೇಡಿಯೋ ಅಂಟೆನಾದAತ ಅಂಗವಿರುತ್ತದೆ. ಈ ಅಂಗವನ್ನು ಚಾಚಿಕೊಂಡು ಈ ಉಣ್ಣೆ ಮರಿ ತನ್ನ ಆಸುಪಾಸು ಯಾವುದಾದರೂ ರಕ್ತಭರಿತ ಜಾನುವಾರು, ಮಂಗ ಅಥವಾ ಮನುಷ್ಯ ಸಿಗಬಹುದೇ ಎಂದು ಕಾತರದಿಂದ ಕಾಯುತ್ತಾ ಇರುತ್ತದೆ. ಈ ಹಂತದಲ್ಲಿ ಅವುಗಳ ಬೆಳವಣಿಗೆ ಬಹಳ ವೇಗವಾಗಿ ಇರುವುದರಿಂದ ಅವುಗಳಿಗೆ, ಜಾನುವಾರಿನಂತಹ ಉತ್ತಮ ರಕ್ತ ಹೊಂದಿದ ಪ್ರಾಣಿಗಳೇ ಬೇಕು. ಸುಮಾರು 6 ದಿನಗಳ ವರೆಗೆ ಏರಿಕೊಳ್ಳಲು ರಕ್ತ ಸಿಗದೇ ಇದ್ದರೆ ಅವುಗಳು ಸತ್ತು ಹೋಗುತ್ತವೆ. ಅಲ್ಲದೇ ಇವು ಚಿಕ್ಕ ಹಕ್ಕಿಗಳು, ಚಿಟ್ಟೆಗಳು ಅಥವಾ ಇತರ ಕೀಟಗಳ ಅಹಾರವಾಗುವ ಸಾಧ್ಯತೆ ಇರುತ್ತದೆ.
ಈ ಹಂತದಲ್ಲಿ ಕೇವಲ ಶೇ: 5 ರಷ್ಟು “ನಿಂಫ್” ಗಳಿಗೆ ಮಾತ್ರ ರಕ್ತವು ದೊರಕುವ ಸಾಧ್ಯತೆ ಇರುತ್ತದೆ.ಬದುಕಲು ಬಹಳ ಕಷ್ಟ ಪಡುವ ಇವು ಬಹಳ “ಸಹನೆ” ಯಿಂದ ತನ್ನ ಅಂಟೆನಾದ0ತ ಅಂಗವನ್ನು ಚಾಚಿಕೊಂಡು ಎಲೆಯ ಗರಿಯ ತುದಿಯಲ್ಲಿ ರಾಮನಿಗಾಗಿ ಶಬರಿ ಕಾದು ಕುಳಿತಂತೆ ಕಾಯುತ್ತಾ ಇರುತ್ತವೆ. ಈ “ನಿಂಫ್” ಗಳು ಬಿಸಿಲಿನ ಬಾಧೆಯನ್ನು ಸಹಿಸಲಾರವು. ಬಿಸಿಲು ಬಂದ ಕೂಡಲೇ, ಹುಲ್ಲಿನ ಎಲೆಯ ಬುಡಕ್ಕೆ ತೆರಳಿ ಅಲ್ಲಿ ಇರುವ ನೀರಿನ ತೇವಾಂಶ ಹೀರಿಕೊಂಡು ಪುನ: ಚುರುಕಾಗುತ್ತವೆ. ವಸಂತ ಋತುವಿನಲ್ಲಿ ಬಹಳ ಚುರುಕಾಗಿರುವ ಇವು ತುಂಬಾ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಶೀತನಿದ್ರೆಗೆ ತೆರಳುತ್ತವೆ. ಪುನ: ಅನುಕೂಲಕರ ವಾತಾವರಣ ಬಂದಾಗ, ರಕ್ತ ಕುಡಿಯಲು ಪ್ರಾಣಿಯನ್ನು ಅರಸುತ್ತಾ ಜಾತಕ ಪಕ್ಷಿಯ ಹಾಗೆ ಕಾಯ್ದುಕೊಂಡು ಕೂರುತ್ತವೆ.
ಜಾನುವಾರುಗಳಲ್ಲಿ ಕಾಯಿಲೆ ತರುವ ರಿಫಿಸೆಫಾಲಿಸ್, ಹಯಲೋಮಾ ಇವುಗಳು ಅವುಗಳ ಜೀವಿತಾವಧಿಯ ಯಾವ ಹಂತದಲ್ಲಿಯಾದರೂ ಕಾಯಿಲೆ ತರಬಹುದು. ಉಣ್ಣೆಗಳಿಂದ ಆಗುವ ನಷ್ಟ ಅಷ್ಟಿಷ್ಟಲ್ಲ. ಅವುಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.1. ಇವು ಜಾನುವಾರುಗಳ ರಕ್ತ ಕುಡಿಯುವುದರಿಂದ ಅವುಗಳ ರಕ್ತ ಹೀನತೆಯಾಗಿ ಶೇ 23% ನಷ್ಟು ಹಾಲಿನ ಇಳುವರಿ ಕಡಿಮೆಯಾಗುತ್ತದೆ.
ಸುಮಾರು 10 ಲೀಟರ್ ಪ್ರತಿದಿನ ಹಾಲು ಕೊಡುವ ಜಾನುವಾರಿನ ಹಾಲಿನ ಇಳುವರಿ 0.5-2.3 ಲೀಟರುಗಳಷ್ಟು ಕಡಿಮೆಯಾಗುತ್ತದೆ.2. ಈ ಉಣ್ಣೆಗಳು ಕಡಿದಾಗ ಆಗುವ ನಂಜು ಮತ್ತು ಮೈಕೆರೆತದಿಂದ ಹಾಲಿನ ಇಳುವರಿ ಶೆ 10 ರಷ್ಟು ಕಡಿಮೆಯಾಗುವುದು. 3. ಇವು ಪಾರ್ಶ್ವವಾಯು, ಬೆಬೆಸೆಯೋಸಿಸ್, ಅನಾಪ್ಲಾಸ್ಮೋಸಿಸ್ ಮತ್ತು ಥೈಲೇರಿಯಾಸಿಸ್ ಇತ್ಯಾದಿ ಮಾರಕ ಕಾಯಿಲೆಗಳನ್ನು ದನಗಳಿಗೆ ತಂದು ಅವುಗಳ ಪ್ರಾಣಕ್ಕೇ ಕುತ್ತು ತರುತ್ತವೆ. ಹೇಗೆ ಇವುಗಳ ಕಾಟ ತಡೆಯುವುದು ಎನ್ನುವುದು ಯಕ್ಷಪ್ರಶ್ನೆ. ಬಹುತೇಕ ರೈತರು ಅವರ ದನಗಳ ಮೈಯನ್ನು ಮಾತ್ರ ಗಮನಿಸಿ ಅವುಗಳ ಮೇಲೆ ಉಣ್ಣೆನಾಶಕ ಸಿಂಪಡಿಸುತ್ತಾರೆ. ಆದರೆ ಗೋಡೆಯ ಬಿರುಕಿನಲ್ಲಿ÷ಅಡಗಿರುವ ಕಣ್ಣಿಗೆ ಕಾಣದಷ್ಟು ಚಿಕ್ಕವಿರುವ ತತ್ತಿ, ಲಾರ್ವಾ, ನಿಂಫ್ ಇತ್ಯಾದಿ ಹಂತಗಳು ಕಣ್ಣಿಗೆ ಕಾಣಿಸದಿದ್ದರೂ, ಮತ್ತೆ ಜಾನುವಾರನ್ನೇ ಏರಿ ರಕ್ತ ಕುಡಿಯಲು ಪ್ರಾರಂಭಿಸುತ್ತವೆ.
ಕಾರಣ ಉಣ್ಣೆ ನಾಶಕವನ್ನು ಗೋಡೆಯ ಬಿರುಕುಗಳಿಗೆ, ಕೊಟ್ಟೆಗೆಯ ಪಕ್ಕದ ಗಿಡಕಂಟಿಗಳಿಗೆ ಸಿಂಪಡಿಸುವುದು ಬಹಳ ಮುಖ್ಯ.ವಿವಿಧ ರೀತಿಯಲ್ಲಿ ಉಣ್ಣೆಗಳು ಕಚ್ಚುವುದನ್ನು ತಡೆದರೆ ಈ ರೀತಿಯ ಉಣ್ಣೆಜನಿತ ರೋಗಗಳು ಬರುವುದಿಲ್ಲ. ಅವು ಇಂತಿವೆ;1. ಜಾನುವಾರುಗಳಿಗೆ ಅಂಟಿಕೊAಡಿರುವ ಉಣ್ಣೆಗಳನ್ನು ಸೂಕ್ತ ಉಣ್ಣೆನಾಶಕಗಳನ್ನು ಪಶುವೈದ್ಯರ ಸಲಹೆಯಂತೆ ಸಿಂಪಡಿಸಿ ನಾಶ ಮಾಡಬೇಕು.ಅಲ್ಲದೇ ಉಣ್ಣೆಗಳನ್ನು ನಾಶಮಾಡಲು, ಅವುಗಳ ಮೈಮೇಲೆ ರಭಸವಾಗಿ ನೀರನ್ನು ಹಾರಿಸಿ, ರಭಸ ಜಲ ಚಿಕಿತ್ಸೆಯನ್ನೂ ಸಹ ಮಾಡಬಹುದು.2. ಉಣ್ಣೆಗಳ ಅಡಗು ತಾಣಗಳನ್ನು ಗುರುತಿಸಿ ಅಲ್ಲಿಗೆ ಕೀಟನಾಶಕಗಳನ್ನು ಸಿಂಪಡಿಸಬೇಕು ಅಥವಾ ಸಣ್ಣ ಬೆಂಕಿಯಿAದ ಸುಡಬೇಕು.3. ಬಹಳ ಮುಖ್ಯವಾಗಿ, ಉಣ್ಣೆಯ ಲಾರ್ವ ಮತ್ತು ನಿಂಫ್ ಹಂತಗಳು ಕೊಟ್ಟಿಗೆಯ ಬಿರುಕು ಮತ್ತು ಹುಲ್ಲಿನ ಎಲೆಗಳ ಮೇಲೆ ಇರುವುದರಿಂದ ಅವುಗಳ ಮೇಲೆ ಹೆಚ್ಚಿನ ಸಾಂದ್ರತೆಯ ಉಣ್ಣೆನಾಶಕಗಳ್ನು÷ಸೂಕ್ತ ಎಚ್ಚರಿಕೆ ವಹಿಸಿ ಸಿಂಪಡಿಸಬೇಕು.
ಇಲ್ಲದಿದ್ದರೆ ಉಣ್ಣೆ ನಿರ್ಮೂಲನೆ ಅಸಾಧ್ಯ. 4. ನಿಯಮಿತವಾಗಿ, ಜಾನುವಾರುಗಳ ಮೈಮೇಲೆ ಬೇವಿನ ಎಣ್ಣೆ ಲೇಪಿಸಬಹುದು.5. ರಭಸ ಜಲಚಿಕಿತ್ಸೆಯಿಂದಲೂ ಸಹ ಉಣ್ಣೆಯನ್ನು ನಾಶ ಮಾಡಬಹುದು.6. ಇತ್ತೀಚೆಗೆ ಉಣ್ಣೆ ನಾಶಕ ಕಾಲರ್, ಸೋಪು, ಶಾಂಪೂ, ಪೌಡರ್, ಚುಚ್ಚುಮದ್ದು, ಗುಳಿಗೆ, ಬೆನ್ನಹುರಿಯ ಮೇಲೆ ಬಿಡುವ ಔಷಧಿಗಳು ಇತ್ಯಾದಿಗಳು ಲಭ್ಯವಿದ್ದು ಇವುಗಳನ್ನು ತಜ್ಞ ಪಶುವೈದ್ಯರ ಸಲಹೆಯ ಮಾರ್ಗದರ್ಶನದಂತೆ ಉಪಯೋಗಿಸಬೇಕು.ಬುರುಡೆ ಮಾಂತ್ರಿಕರಾರಿಗೂ ಉಣ್ಣೆ ನಾಶ ಮಾಡುವ ವಿಧಾನ ಬಗ್ಗೆ ಗೊತ್ತಿರುವುದಿಲ್ಲ. ಮೂಢನಂಬಿಕೆ ಬದಿಗೊತ್ತಿ ವೈಜ್ಞಾನಿಕವಾಗಿ ಉಣ್ಣೆಯ ಜೀವನ ಚಕ್ರ ತಿಳಿದು ಸೂಕ್ತ ಉಣ್ಣೆ ನಿವಾರಣಾ ಕ್ರಮ ಅನುಸರಿಸಿ.ಕುತೂಹಲ ಕೆರಳಿಸುವ ಉಣ್ಣೆಯ ಜೀವನ ಚಕ್ರವನ್ನು ತಿಳಿದರೆ ಅವುಗಳ ಅಮೂಲಾಗ್ರ ನಿವಾರಣೆ ಮಾಡಿದರೆ ಜಾನುವಾರುಗಳಲ್ಲಿ ಅವುಗಳ ಮೂಲಕ ಬರುವ ವಿವಿಧ ಮಾರಕ ರೋಗಗಳನ್ನು ತಡೆಗಟ್ಟುವುದು ಸುಲಭ.
Leave a Comment