ಹಳಿಯಾಳ:- ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಮುಂದಿನ 2 ದಿನಗಳ ನಂತರ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಕ ಜಿಲ್ಲೆ ಪ್ರಭಾರ (ಎಎಸ್ಪಿ) ಪೋಲಿಸ್ ಉಪ ನೀರಿಕ್ಷಕರು(ಐಪಿಎಸ್) ಕುಶಾಲ್ ಚೌಕ್ಸಿ ಎಚ್ಚರಿಕೆ ನೀಡಿದರು.

ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದಿ.23 ರಿಂದ ಆರಂಭವಾಗಿರುವ ರಸ್ತೆ ಸುರಕ್ಷತಾ ಸಪ್ತಾಹ ದಿ.30 ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರ ಆದೇಶದಂತೆ ದಿ. 25 ರವರೆಗೆ ನಮೃತೆಯಿಂದ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲಾಗುವುದು, ಸಂಚಾರಿ ನಿಯಮ ಪಾಲಿಸುವಂತೆ ತಿಳಿ ಹೇಳಲಾಗುವುದು ಬಳಿಕ 26 ರಿಂದ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೇ ಅಂತಹ ವಾಹನಗಳನ್ನು ಪೋಲಿಸರು ವಶಕ್ಕೆ ಪಡೆಯುತ್ತಾರೆಂದ ಅವರು ಕೆಲವು ನಿಯಮಗಳ ಬಗ್ಗೆ ವಿವರಿಸಿದರು. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು, ವೇಗ ಮೀತಿ ಉಲ್ಲಂಘನೆ ಮಾಡುವಂತಿಲ್ಲ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ, ನಿಲುಗಡೆ ಉಲ್ಲಂಘನೆ ಮಾಡುವಂತಿಲ್ಲ, ವಾಹನ ಚಾಲನೆಯಲ್ಲಿ ಇರುವಾಗ ಮೊಬೈಲ್ ಉಪಯೋಗಿಸುವಂತಿಲ್ಲ, ಹೆಲ್ಮೇಟ್, ಸೀಟ್ಬೆಲ್ಟ್ ಕಡ್ಡಾಯ, ಪಾದಚಾರಿ ಮಾರ್ಗ ಅತಿಕ್ರಮಿಸಬಾರದು, ಓವರ್ಲೋಡ್ ಮಾಡುವಂತಿಲ್ಲ, ಅಜಾಗರುಕತೆಯಿಂದ(ರ್ಯಾಶ್-ಡ್ರೈವಿಂಗ್)ಮಾಡುವಂತಿಲ್ಲ, ವಾಹನ ಚಾಲನಾ(ಲೈಸನ್ಸ್) ಪತ್ರ, ವಾಹನಗಳ ದಾಖಲಾತಿ, ಇನ್ಸೂರನ್ಸ್, ಹೊಗೆ(ಪೊಲುಷನ್) ಪ್ರಮಾಣ ಪತ್ರ ಇಲ್ಲದೇ ವಾಹನ ಓಡಿಸಬಾರದು, ವಾಹನಗಳಿಗೆ ಪ್ರಕಾಶಮಾನವಾದ(ಹೈಫೋಕಸ್) ಲೈಟ್ ಬಳಸಬಾರದು, ವಾಹನಗಳ ಮೇಲ್ಛಾವನಿ ಮೇಲೆ ಸಂಚರಿಸುವಂತಿಲ್ಲ, ತ್ರಿಬಲ್ ರೈಡ್, ಕುಡಿದು ವಾಹನ ಚಾಲನೆ, ವಾಹನಗಳನ್ನು ಮೊಡಿಫೈಡ್ ಮಾಡಿ ಕರ್ಕಶ ಶಬ್ದ ಬರುವ ಹಾಗೆ ಶಬ್ದ ಮಾಲಿನ್ಯ ಮಾಡಬಾರದು, ಆಟೋಗಳು ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ, ಆಟೋ ರೀಕ್ಷಾದಲ್ಲಿ ಹೆಚ್ಚಿನ ಪ್ರಯಾಣಿಕರು, ವಿದ್ಯಾರ್ಥಿಗಳನ್ನು ತುಂಬಬಾರದು, ನಿಲ್ದಾಣ ನಿಷೇಧ ಸ್ಥಳದಲ್ಲಿ ವಾಹನ ನಿಲ್ಲಿಸಬಾರದು, ವಾಹನಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸಬಾರದು, ಯಾವುದೇ ವಾಹನದಲ್ಲಿ ಮೀತಿಮಿರಿ ಜೊತೆಗೆ ಸರಕು ವಾಹನಗಲ್ಲಿಯೂ ಪ್ರಯಾಣಿಕರನ್ನು ಸಾಗಿಸಬಾರದು ಸೇರಿದಂತೆ ಇನ್ನೂ ಹಲವು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಸಿಪಿಐ ಮೋತಿಲಾಲ್ ಪವಾರ, ಪಿಎಸ್ಐ ಯಲ್ಲಾಲಿಂಗ್ ಕುನ್ನೂರ, ಇದ್ದರು.
Leave a Comment