• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಂಕ್ರೀಟ್ ರಸ್ತೆ ಮಾಡಿ ಸೈಡ್ ಸೋಲಿಂಗ್ ಮಾಡಲು ಮರೆಯುವ ಗುತ್ತಿಗೆದಾರರು – ಲಘು ವಾಹನ ಚಾಲಕರಿಗೆ ಸವಾಲು

November 27, 2020 by Lakshmikant Gowda Leave a Comment

(ಎದುರುಬದುರಾಗಿ ವಾಹನ ಬಂದರೆ ಮುಖ ಮುಖ ನೋಡಿಕೊಳ್ಳುವ ಚಾಲಕರು – ಕೆಳಗಿಳಿಸಿದರೆ ಮೇಲೆ ಹತ್ತಿಸಲು ಹರಸಾಹಸ)

ಹೊನ್ನಾವರ – ತಾಲೂಕಿನಲ್ಲಿ ಅನೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಜನರ ಬಹುದಿನದ ಬೇಡಿಕೆಗಳು ಈಡೇರುತ್ತಿರುವ ಖುಷಿ ಒಂದೆಡೆಯಾದರೆ ರಸ್ತೆ ಮಾಡುವ ಗುತ್ತಿಗೆದಾರರು ಸೈಡ್ ಸೋಲಿಂಗ್ ಮಾಡದೇ ಸತಾಯಿಸುತ್ತಿರುವುದು ಜನರ ಅಸಮದಾನಕ್ಕೆ ಕಾರಣವಾಗುತ್ತಿದೆ.

watermarked 02 1


ರಸ್ತೆ ನಿರ್ಮಿಸಿ ತಿಂಗಳುಗಳೇ ಉರುಳಿದರೂ ರಸ್ತೆಯಂಚಿಗೆ ಮಣ್ಣು ಹಾಕಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಇದರಿಂದ ಬಾರೀ ವಾಹನಗಳಿಗೆ ಅಷ್ಟೇನು ಸಮಸ್ಯೆ ಎನಿಸದಿದ್ದರೂ ಬೈಕ್, ರಿಕ್ಷಾ, ಬೊಲೆರೊದಂತ ಸಣ್ಣಪುಟ್ಟ ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತ್ತಿದೆ. ಒಂದೆ ವಾಹನ ಚಲಿಸುವಾಗ ತೊಂದರೆ ಇಲ್ಲವಾದರೂ ಎದುರಿನಿಂದ ಯಾವುದಾದರೂ ವಾಹನ ಬಂದಾಗ ಬದಿಗೆ ಸರಿದು ಆ ವಾಹನಕ್ಕೆ ಮುಂದೆ ಸಾಗಲು ಅನುವುಮಾಡಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಕೆಲವೊಮ್ಮೆ ಅಚಾನಕ್ಕಾಗಿ ಯಾರಾದರೂ ರಸ್ತೆಯಿಂದ ವಾಹನವನ್ನು ಕೆಳಗಿಳಿಸಿದರೂ ಮತ್ತೆ ರಸ್ತೆಗೆ ಹತ್ತಿಸಲು ನಾಲ್ಕೈದು ಮಂದಿ ಹಿಂಬದಿಯಿಂದ ನೂಕಬೇಕು ಇಲ್ಲವೇ ಕ್ರೇನ್ ತರಬೇಕು. ಈ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ರ್ಯ ತೋರಿದರೂ ಇಂಜನಿಯರ್‍ಗಳಾದರೂ ಅವರಿಗೆ ಬುದ್ಧಿ ಹೇಳಿ ಸೈಡ್ ಸೋಲಿಂಗ್ ಮಾಡದಿದ್ದರೆ ಬಿಲ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದರೆ ಎಲ್ಲಾ ಗುತ್ತಿಗೆದಾರರೂ ತಮ್ಮ ಕೆಲಸವನ್ನು ಸರಿಯಾಗಿಯೇ ಮಾಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎನ್ನುವ ಒತ್ತಾಯಕೇಳಿಬರುತ್ತಿದೆ.

watermarked 03 1
watermarked 04


ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜನಿಯರುಗಳನ್ನು ವಿಚಾರಿಸಿದರೆ ಕಾಂಕ್ರೀಟ್ ರಸ್ತೆಗಳು ನೆಲಮಟ್ಟದಿಂದ 8 ಇಂಚು ಎತ್ತರ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುವುದು ನಿಜ. ನಮ್ಮ ಇಲಾಖೆಯಿಂದ ನಿರ್ಮಿಸಿದ ರಸ್ತೆಗಳಿಗೆ ಸೈಡ್ ಸೋಲಿಂಗ್ ಮಾಡಿಸಿದ್ದೇವೆ. ಭೂ ಸೇನಾ ನಿಗಮ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲೂ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಲ್ಲೆಲ್ಲಿ ಈ ರೀತಿಯ ತೊಂದರೆಯಾಗಿದೆ ಎನ್ನುವ ಮಾಹಿತಿಯಿಲ್ಲ ಎನ್ನುತ್ತಿದ್ದಾರೆ.
ನೆಲಮಟ್ಟಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ತೊಡಕೇನು..?
ಎಲ್ಲಿಯೇ ನೂತನ ರಸ್ತೆ ನಿರ್ಮಾಣವಾದರೂ ಮೊದಲಿದ್ದ ರಸ್ತೆಗೆ ಕಾಂಕ್ರೀಟಿಕರಣ ಅಥವಾ ಡಾಂಬರೀಕರಣ ನಡೆಯುತ್ತದೆಯೇ ಹೊರತು ಹೊಸ ಮಾರ್ಗದ ನಿರ್ಮಾಣವೇನೂ ಆಗುತ್ತಿಲ್ಲ. ಹದಗೆಟ್ಟ ರಸ್ತೆಯನ್ನು ಆರರಿಂದ 8 ಇಂಚು ಆಳಕ್ಕೆ ಗುಂಡಿತೋಡಿ ಜಲ್ಲಿ ಕಲ್ಲುಗಳಿಂದ ಸೋಲಿಂಗ್ ಮಾಡಿ ಅದರಮೇಲೆ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಸೈಡ್ ಸೋಲಿಂಗ್ ಅವಶ್ಯಕತೆಯೇ ಇರುವುದಿಲ್ಲ ಈ ಬಗ್ಗೆ ತಾಂತ್ರಿಕ ವರ್ಗ ಯೋಚಿಸಬೇಕು ಎನ್ನುವ ಸಲಹೆ ಸಾರ್ವಜನಿಕರದ್ದಾಗಿದೆ.

watermarked 01 1


[ಎಲ್ಲಿಯೇ ಕಾಂಕ್ರೀಟ್ ರಸ್ತೆ ನಿರ್ಮಿಸಿದರೂ 21 ದಿನಗಳ ಕಾಲ ವಾಹನ ಸಂಚಾರಕ್ಕೆ ಅವಕಾಶಮಾಡಿಕೊಡುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಎಲ್ಲಾ ರಸ್ತೆಗಳಿಗೂ ಸೈಡ್ ಸೋಲಿಂಗ್ ಮಾಡಿಸಿದ್ದೇವೆ. ಲ್ಯಾಂಡ್ ಆರ್ಮಿ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲೂ ರಸ್ತೆ ನಿರ್ಮಾಣವಾಗುತ್ತಿದ್ದು ಅಲ್ಲಿ ಸೈಡ್‍ಸೋಲಿಂಗ್ ಮಾಡಿಸಿದ್ದಾರೋ ಇಲ್ಲವೋ ನಮಗೆ ಮಾಹಿತಿ ಇಲ್ಲ – ಯೋಗಾನಂದ, ಇಂಜನಿಯರ್ ಲೋಕೋಪಯೋಗಿ ಇಲಾಖೆ]
[ಗಾಣಗೇರಿ, ಕಪ್ಪೆಕೆರೆ, ಕೆಂಚಗಾರ ಮೊದಲಾದ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಹಲವು ದಿನಗಳಾದರೂ ಸೈಡ್ ಸೋಲಿಂಗ್ ಮಾಡಿಲ್ಲ. ಇದರಿಂದ ಸಣ್ಣ ಸಣ್ಣ ವಾಹನ ಚಾಲಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಾವು ಅಭಿವೃದ್ಧಿ ಕೆಲಸವನ್ನು ವಿರೋಧಿಸುವುದಿಲ್ಲ ಆದರೆ ಮಾಡಿದ ಕೆಲಸವನ್ನು ಚೊಕ್ಕವಾಗಿ ಚೆಂದವಾಗಿ ಮಾಡಿ ಎಂದು ಕೇಳುತ್ತಿದ್ದೇವೆ ಅಷ್ಟೇ – ಸುಬ್ರಾಯ ನಾಯ್ಕ ,ಕವಲಕ್ಕಿ]

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: authorities should focus on, Bike, bolero., bring crane, build a happy road, concrete roads, land municipality, mudslide on the road, prime minister's village sadak project, RICKSHAW, side vehicle, To build a concrete road to ground level, ಅಧಿಕಾರಿಗಳು ಗಮನಹರಿಸಬೇಕು, ಕಾಂಕ್ರೀಟ್ ರಸ್ತೆಗಳು ನಿರ್ಮಾಣ, ಕ್ರೇನ್ ತರಬೇಕು, ಖುಷಿ ಒಂದೆಡೆ, ನೆಲಮಟ್ಟಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಬೈಕ್, ಬೊಲೆರೊದಂತ ಸಣ್ಣಪುಟ್ಟ ವಾಹನ, ಭೂ ಸೇನಾ ನಿಗಮ, ರಸ್ತೆಯಂಚಿಗೆ ಮಣ್ಣು ಹಾಕಲು, ರಿಕ್ಷಾ, ಸೈಡ್ ಸೋಲಿಂಗ್

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...