• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮುಂದಾಲೋಚನೆಯಿಲ್ಲದ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಾರ್ವಜನಿಕರ ಆಗ್ರಹ

November 28, 2020 by bkl news Leave a Comment

ಭಟ್ಕಳ: ಜಾಲಿ ಪಟ್ಟಣಪಂಚಯತ್ ವ್ಯಾಪ್ತಿಯಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದು ಮುಂದಾಲೋಚನೆ ಇಲ್ಲದ ಕಾಮಗಾರಿಯಾಗಿದೆ, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಮುಂದಿನ 50-60 ವರ್ಷಗಳನ್ನು ಮುಂದಿಟ್ಟುಕೊಂಡು ದೀರ್ಘಾವಧಿಯ ಯೋಜನೆ ರೂಪಿಸದೆ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ಕೈಗೊಂಡಿದ್ದು ಇದರಿಂದಾಗಿ ಭವಿಷ್ಯದಲ್ಲಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಯುಜಿಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಿ ಹೊಸ ಯೋಜನೆಯೊಂದಿಗೆ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾರಗದ್ದೆ ಪ್ರದೇಶದ ನಾಗರೀಕರು ಜಲಮಂಡಳಿ ಇಂಜಿನೀಯರ್ ಶಶಿಧರ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 


ಕಾಮಗಾರಿ ನಡೆಯುವ ಸ್ಥಳದಲ್ಲಿ ಜಮಾಯಿಸಿದ ನೂರಾರು ಮಂದಿ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 
ಈ ಕುರಿತು ಸಮಜಾಯಿಸಿ ನೀಡಿದ ಜಲಮಂಡಳಿ ಇಂಜಿನೀಯರ್ ಶಶಿಧರ್ ಹೆಗಡೆ, ಯೋಜನೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಿಸಲು ಸಾಧ್ಯವಿಲ್ಲ. ನಿಮಗೆ ಕಾಮಗಾರಿ ಸ್ಥಗಿತಗೊಳಿಸುವುದಿದ್ದರೆ ಲಿಖಿತವಾಗಿ ಬರೆದುಕೊಡಿ ಎಂದು ತಿಳಿಸಿದ್ದು ಸಾರ್ವಜನಿಕರು ಈ ಕುರಿತಂತೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಾಲಿ ಪ.ಪಂ ಕಾರಗದ್ದೆ ವಾರ್ಡಿನ ಸದಸ್ಯ ಬಿಲಾಲ್ ಆಹ್ಮದ್ ಖಮರಿ, ನಾವು ಯೋಜನೆಗೆ ವಿರೋಧಿಸುತ್ತಿಲ್ಲ. ಆದರೆ ಈಗ ನಡೆಸುತ್ತಿರುವ ಕಾಮಗಾರಿಯಿಂದಾಗಿ ಮುಂದಿನ ದಿನಗಳಲ್ಲಿ ಜನರು ಭಾರಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಚೇಂಬರ್ ನಿರ್ಮಾಣ ಅವೈಜ್ಞಾನಿಕವಾಗಿದೆ. ಚಿಕ್ಕ ಚಿಕ್ಕ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಕರಾವಳಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಮಳೆ ನೀರು ಚರಂಡಿಗೆ ನುಗ್ಗಿ ರಸ್ತೆಗಳು ಹದಗೆಡುತ್ತದೆ. ಅಲ್ಲದೆ ಚರಂಡಿ ನೀರು ಕುಡಿಯುವ ನೀರಿನ ಬಾವಿಯೊಳಗೆ ಪ್ರವೇಶಿಸಿ ನೀರು ಕಲೂಷಿತಗೊಳಿಸುತ್ತದೆ. ಭಟ್ಕಳ ಪುರಸಭಾ ವ್ಯಾಪ್ತಿಯ ಗೌಸಿಯಾ ಮೊಹಲ್ಲಾದ ಜನರು ಅನುಭವಿಸುತ್ತಿರುವ ತೊಂದರೆಗಳು ಜನರ ಕಣ್ಣಮುಂದಿದ್ದು ಅದಕ್ಕಾಗಿ ಈ ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ ಎಂದರು. 
ಸಮಾಜ ಸೇವಕ ಹಾಗೂ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಮಿಸ್ಬಾವುಲ್ ಹಕ್ ಮಾತನಾಡಿ, ಯಾವುದೇಮುಂದಾಲೋಚನೆಯಿಲ್ಲದೆ ನಡೆಸುತ್ತಿರುವ ಈ ಕಾಮಗಾರಿಗೆ ಸ್ಥಳೀಯರ ಸಂಪೂರ್ಣ ವಿರೋಧವಿದೆ. ಹಾಗಾಗಿ ಇದನ್ನು ಮರು ಪರಿಷ್ಕರಿಸಿ ಹೊಸದಾಗಿ ಯೋಜನೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, Other Tagged With: Ahmad Khameri, Drainage enters the drinking water well and contaminates the water. Bhatkal Municipality, Government temporary, Long term plans, UGD drainage works, We are not opposed to the project, We need to abolish scientific and poor works, ಆಹ್ಮದ್ ಖಮರಿ, ಕಳಪೆ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು, ಚರಂಡಿ ನೀರು ಕುಡಿಯುವ ನೀರಿನ ಬಾವಿಯೊಳಗೆ ಪ್ರವೇಶಿಸಿ ನೀರು ಕಲೂಷಿತಗೊಳಿಸುತ್ತದೆ. ಭಟ್ಕಳ ಪುರಸಭಾ ವ್ಯಾಪ್ತಿ, ದೀರ್ಘಾವಧಿಯ ಯೋಜನೆ ರೂಪಿಸದೆ, ನಾವು ಯೋಜನೆಗೆ ವಿರೋಧಿಸುತ್ತಿಲ್ಲ, ಯುಜಿಡಿ ಒಳಚರಂಡಿ ಕಾಮಗಾರಿ, ವೈಜ್ಞಾನಿಕ, ಸರ್ಕಾರ ತಾತ್ಕಾಲಿಕ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar