ಭಟ್ಕಳ : ತನ್ನ ಮನೆಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮತ್ತೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಜಾಲಿಯಲ್ಲಿ ನಡೆದಿದೆ
ನಾಪತ್ತೆಯಾದ ಲಲಿತಾ ಸೊಮ್ಮಯ್ಯ ಗೊಂಡ (29) ಎಂದು ತಿಳಿದು ಬಂದಿದೆ. ಈಕೆದಿನಾಂಕ: 16-11-2020 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಾದ ಭಟ್ಕಳದ ಸಣ್ಣಮನೆ, ಜಾಲಿಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಈವರೆಗೂ ಮನೆಗೆ ವಾಪಸ್ ಬಾರದೇ, ಎಲ್ಲಿಗೋ ಹೋಗಿ ಕಾಣೆಯಾದ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ನಾಪತ್ತೆಯಾದ ಮಹಿಳೆಯ ತಂದೆ ಪ್ರಕರಣ ದಾಖಲಿಸಿದು ನಗರ ನಗರ ಠಾಣೆಯ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
Leave a Comment