ಸರ್ಕಾರಿ ಕಾರ್ಯಕ್ರಮದಲ್ಲಿ ಇವರದೇ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಡೊಂಟ್ ಕೇರ್ ಎನ್ನುವ ಮೂಲಕ ಹೊಸ ವಿವಾಧವನ್ನು ಭಟ್ಕಳ ಶಾಸಕ ಸುನೀಲ ನಾಯ್ಕ ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಉಪವಲಯ ಸಂರಕ್ಷಣಾಧಿಕಾರಿ ಕಛೇರಿ ಉದ್ಗಾಟನೆ ಸಮಯದಲ್ಲಿ ಆರಂಭದಿಂದ ಅಂತ್ಯದವರೆಗೂ ಮಾಸ್ಕ ಧರಿಸದೇ ಇರುವ ಶಾಸಕರ ಕ್ರಮವನ್ನು ಪ್ರಶ್ನಿಸಿದಾಗ ಶಾಸಕರು ನಾನು ಈಗಾಗಲೇ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದೇನೆ. 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆ ಕಾರಣದಿಂದ ಮಾಸ್ಕ ಧರಿಸುದಿಲ್ಲ ಎಂದಾಗ, ಒಮ್ಮೆ ಬಂದು ಹೋದರೆ ಮತ್ತೆ ಬರುವುದಿಲ್ಲವೇ ಎಂದು ಮರು ಪ್ರಶ್ನಿಸಿದಾಗ, ನನಗೆ ಅಚಲವಿಶ್ವಾಸವಿದೆ ನಾನು ಮಾಸ್ಕ ಧರಿಸುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದರೂ ಸಾರ್ವಜನಿಕರು ಅವರ ಇಚ್ಚೆಯಂತೆ ಮಾಡಲಿ ಎಂದರು.
ಶಾಸಕರೇ ನಮ್ಮ ನಾಯಕರು ಎನ್ನುವ ಪ್ರಧಾನಿ ಮೋದಿಯವರು ದೇಶದ ಜನತೆಗೆ ಮಸ್ಕ ಧರಿಸುವಂತೆ ಮನ್.ಕೀ ಬಾತ್ ಮುಂತಾದ ಕಾರ್ಯಕ್ರಮದ ಮೂಲಕ ಹೇಳುವಾಗ ಅದೇ ಪಕ್ಷದ ಶಾಸಕರು ಇಂತಹ ಬೇಜವಬ್ದಾರಿ ರೀತಿಯಲ್ಲಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮೂಡುವ ಜೊತೆಗೆ ಕಳೆದ ಕೆಲವು ತಿಂಗಳ ಹಿಂದೆ ಇವರೆ ಕ್ಷೇತ್ರದ ಜನತೆಗೆ ಮನೆಯಲ್ಲೆ ಇರಿ ಮಾಸ್ಕ ಧರಿಸಿ ಎಂದು ಯಾಕೆ ಬುದ್ದಿ ಹೇಳಿದರು ಎನ್ನುವುದು ಸಾರ್ವಜನಿಕರ ಮನದಲ್ಲಿ ಪ್ರಶ್ನೆ ಮೂಡಿದೆ ಪಕ್ಷದ ವರಿಷ್ಟರು ಜಿಲ್ಲಾ ಉಸ್ತುವಾರಿ ಸಚೀವರು ಇದನ್ನು ಸಮರ್ಥಿಸಿಕೊಳ್ಳುತ್ತಾರಾ? ಅಥವಾ ಖಂಡನೆ ವ್ಯಕ್ತಪಡಿಸುವರಾ ಎಂದು ಕಾದು ನೋಡಬೇಕಿದೆ.

Leave a Comment