ಹೊನ್ನಾವರ: ಹಸುವೊಂದು ಏಕಕಾಲದಲ್ಲಿ ಎರಡು ಗಂಡು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ನಡೆದಿದೆ.
ಕಡ್ನೀರಿನ ಮಾದೇವಿ ಅಣ್ಣಪ್ಪ ಗೌಡ ಎಂಬುವರ ಕೊಟ್ಟಿಗೆಯಲ್ಲಿದ್ದ ಹಸು ಎರಡು ಕರುವಿಗೆ ಜನ್ಮ ನೀಡಿದೆ. ಸಂಕಷ್ಟಿ ದಿನಂದಂದು ಕರುಗಳು ಜನನವಾಗಿದ್ದು, ಕರುಗಳ ಉತ್ಸಾಹ ಕಂಡು ಮನೆಯವರು ಸಂತಸಗೊಂಡಿದ್ದಾರೆ. ಅವಳಿ ಕರುಗಳು ಹಾಗೂ ಹಸು ಆರೋಗ್ಯವಾಗಿದೆ. ಕರುಗಳನ್ನು ನೋಡಲು ಗ್ರಾಮದ ಜನತೆ ಮುಗಿ ಬೀಳುತ್ತಿದ್ದು, ಮನೆಯವರು ಕರುಗಳ ಲಾಲನೆ-ಪಾಲನೆ ಮಾಡುವಲ್ಲಿ ನಿರತರಾಗಿದ್ದಾರೆ.
Leave a Comment