ಭಟ್ಕಳ : ಸಾರ್ವಜನಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ಆಗಬೇಕಾದ ಸಹಾಯ ಸಹಕಾರದ ದಿಶೆಯಿಂದ ಸ್ಥಳೀಯ ಶಾಸಕರೊಂದಿಗೆ ಗುರುತಿಸಿಕೊಂಡು ಆಗಾಗ ಕೆಲಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೆ ಹೊರತು ನಾನು ಬಿ.ಜೆ.ಪಿ.ಯ ಸದಸ್ಯನೂ ಅಲ್ಲ .ಬೆಂಬಲಿತನೂ ಅಲ್ಲ .ಬಿ.ಜೆ.ಪಿ.ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಯಲ್ವಡಿಕವೂರನ ಸುರೇಶ ಜೆ ನಾಯ್ಕ ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ಬಾರಿ ಯಲ್ವಡಿಕವೂರ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಇನ್ನೆರಡು ಬಾರಿ ಸದಸ್ಯನಾಗಿ ಭಟ್ಕಳ ಪಿ.ಎಲ್.ಡಿ.ಬ್ಯಾಂಕಿಗೆ 2ನೇ ಬಾರಿ ನಿರ್ದೇಶಕನಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಾಮಾಜಿಕ ಸೇವೆಗೈಯ್ಯುತ್ತಿದ್ದೇನೆ.
ದಿ. ದಾಮೋದರ ಗರ್ಡಿಕರ್ ರವರ ಅನುಯಾಯಿಯಾಗಿ ಜಾತ್ಯಾತೀತ ನಿಲುವಿನೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ನಾನು ಪ್ರಸ್ತುತ ಪಕ್ಷಾತೀತ ವ್ಯಕ್ತಿಯಾಗಿದ್ದು ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಸಂಪರ್ಕಿಸುವುದು ಸಾಮಾನ್ಯವಾಗಿದೆ. ಅದರ ಒಂದು ಭಾಗವಾಗಿ ಸ್ಥಳೀಯ ಬಿ.ಜೆ.ಪಿ.ಶಾಸಕರನ್ನು ಕೆಲ ಸಂದರ್ಭದಲ್ಲಿ ಭೇಟಿಯಾಗಿದ್ದಿರಬಹುದು. ಹಾಗಂದ ಮಾತ್ರಕ್ಕೆ ನಾನು ಬಿ.ಜೆ.ಪಿ.ಪಕ್ಷದ ಕಾರ್ಯಕರ್ತನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Leave a Comment