ಭಟ್ಕಳ: ಗ್ರಾಮ ಪಂಚಾಯತ ಚುನಾವಣೆ ಚುರುಕು ಪಡೆದುಕೊಂಡಂತೆ ಭಟ್ಕಳ ಕಾಯ್ಕಿಣಿಯಲ್ಲಿ ಕಂಡು ಕೇಳಿರಿಯದ ರೀತಿಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿದೆ. ನಾಮಪತ್ರ ವಾಪಸ್ ಪಡೆಯಲು ಪಂಚಾಯತ ಕಚೇರಿಗೆ ಬಂದ ಪರಿಶಿಷ್ಟ ಪಂಗಡ ಮಹಿಳೆ ಯನ್ನು ಗುಂಪೊಂದು ಪೊಲೀಸ ಅಧಿಕಾರಿಗಳ ಸಮ್ಮುಖದಲ್ಲಿಯೇ ಅಪಹರಿಸಿ ಪರಾರಿಯಾಗಿದ್ದು ಜನಸಾಮಾನ್ಯರಲ್ಲಿ ತಲ್ಲಣ ಸೃಷ್ಟಿಸಿದೆ.

ನಡೆದಿದ್ದೇನು : ತಾಲ್ಲೂಕಿನ ಕಾಯ್ಕಿಣಿ ಗ್ರಾಂಪಂ 26 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಕಾಯ್ಕಿಣಿ ಶಿರಾಣಿ ಮೂಲದ ಸಣ್ಣಿ ಸಣ್ಣ ಗೊಂಡ ಎನ್ನುವವರು ಕೋಟದಮಕ್ಕಿ-2 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಲಭ್ಯ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತರೇ ಮುಂದೆ ನಿಂತು ಸಣ್ಣಿಯವರನ್ನು ಕಣಕ್ಕಿಳಿಸಿದರು ಆದರೆ ನಾಮಪತ್ರ ಸಲ್ಲಿಸಿದ ನಂತರ ಸಣ್ಣಿ ಗೊಂಡ ಕಾಂಗ್ರೆಸ ಬೆಂಬಲಿತ ಪಾಳೆಯವನ್ನು ಸೇರಿಕೊಂಡು ನಾಮಪತ್ರ ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದರು .ಆದರೆ ಬಿಜೆಪಿ ಬೆಂಬಲಿತರು ತಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ ಮುಖಂಡರು ಅಪಹರಿಸಿದ್ದಾರೆ ಎಂದು ಆರೋಪಿಸಿದರು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ಮಧ್ಯಾಹ್ನ ಸುಮಾರಿಗೆ ಸಣ್ಣಿ ಗೊಂಡ ಕೆಲ ಕಾಂಗ್ರೆಸ್ ಪರ ಮುಖಂಡರೊಂದಿಗೆ ಕಾರಿನಲ್ಲಿ ಬಂದು ಪಂಚಾಯತ್ ಕಚೇರಿಯ ಮುಂದೆ ಇಳಿದರು. ಇದಕ್ಕಾಗಿಯೇ ಕಾಯುತ್ತ ಕುಳಿತಿದೆ ವಿರೋಧಿ ಗುಂಪಿನ ಸದಸ್ಯರು ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಪಂಚಾಯತ ಕಚೇರಿಯಿಂದ ಅಪರಿಸಿಕೊಂಡು ಹೋಗಿದ್ದಾರೆ. ಪೂರ್ವ ಯೋಜನೆಯಂತೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಮಹಿಳೆಯನ್ನು ಕುಳ್ಳಿರಿಸಿಕೊಂಡು ಪರಾರಿಯಾದ್ದಾರೆ.
ಈ ಬಗ್ಗೆ ಸಣ್ಣಿ ಗೊಂಡರವರ ಮಗ ಮಂಜುನಾಥ ಗೊಂಡ ಮುರುಡೇಶ್ವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಚುನಾವಣೆ ಸಮಯದಲ್ಲಿ ಅತಿ ಸೂಕ್ಷ್ಮ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ ಕಾಯ್ಕಿಣಿ ಪಂಚಾಯತ : ಇತ್ತೀಚಿನ ದಿನಗಳಲ್ಲಿ ಭಟ್ಕಳ ತಾಲ್ಲೂಕಿನ ಕಾಯ್ಕಿಣಿ ಅತಿ ಸೂಕ್ಷ್ಮ ಪ್ರದೇಶವಾಗಿ ಬದಲಾಗುತ್ತಿದೆ ವ್ಯವಸಾಯ ಸಹಕಾರಿ ಬ್ಯಾಂಕ್ ಚುನಾವಣೆ , ಗ್ರಾಮ ಪಂಚಾಯತ , ತಾಲ್ಲೂಕ ಪಂಚಾಯತ , ಜಿಲ್ಲಾ ಪಂಚಾಯತ್ ವಿಧಾನ ಸಭೆ ಯಾವುದೇ ಚುನಾವಣೆಯಾಗಿರಲಿ ಇಲ್ಲಿ 2 ಗುಂಪುಗಳ ಕದನದ ತಾರಕಕ್ಕೇರುತ್ತದೆ ಹೊಡೆದಾಟ ಬಡೆದಾಟ ಅಪಹರಣ ಎಲ್ಲವೂ ಮಾಮೂಲಿ ಎನ್ನುವಂತಾಗಿದೆ. ದುರ್ದೈವವಶಾತ್ ಪೋಲಿಸ್ ಇಲಾಖೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ.
Leave a Comment