ಭಟ್ಕಳ: ತಾಲೂಕಿನ ಮಾವಳ್ಳಿ-2 ಕೊಡ್ಸೂಳ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಮನೆಯು ದುರ್ಗಯ್ಯ ಪದ್ಮಯ್ಯ ನಾಯ್ಕ ಎಂಬುವವರಿಗೆ ಸೇರಿದ್ದಾಗಿದೆ. ವಿದ್ಯುತ್ ಶಾರ್ಟ ಸಕ್ರ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಗೆ ಮನೆಯಲ್ಲಿದ್ದ ನಗದು ಹಣ, ಮಂಚ, ಗೊದ್ರೇಜ್ ಕಪಾಟು, ಬಟ್ಟೆಬರೆ, ಆಹಾರಧಾನ್ಯಗಳು ಸುಟ್ಟು ಹೋಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಶಾಸಕ ಸುನಿಲ್ ಭೇಟಿ: ಬೆಂಕಿಗೆ ಹಾನಿಗೀಡಾದ ಮನೆಗೆ ಶಾಸಕ ಸುನಿಲ್ ನಾಯ್ಕ ಬುಧವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬದ ತುರ್ತು ನಿರ್ವಹಣೆಗಾಗಿ ಆರ್ಥಿಕ ನೆರವನ್ನು ನೀಡಿದ ಶಾಸಕರು, ಸರಕಾರದಿಂದ ಹೆಚ್ಚಿನ ಪರಿಹಾರವನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.
Leave a Comment