ಭಟ್ಕಳ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕೋಕ್ತಿ ನಗರದ 2 ನೇ ಕ್ರಾಸನಲ್ಲಿನ ಮದಿನಾಹಾಲ್ ನಲ್ಲಿ ಇಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತೆರಳಿ ವಿವಾಹವನ್ನು ತಡೆದ ಘಟನೆ ಮಂಗಳವಾರ ನಡೆದಿದೆ.
ಹನಿಪಾಬಾದನ ಖಾದಿರ್ ಬಾಷಾ ಜೂಸಿದ್ಧಿ ಮತ್ತು ಉಮ್ಮಸಲ್ಮಾ ದಂಪತಿಯ 16 ವರ್ಷದ 4 ನೇ ಮಗಳಿಗೆ ಶಿರ್ಸಿ ಮೂಲದ 26 ವರ್ಷದ ಅಬ್ರಾರ್ ಹುಲ್ಲಕ್ ಇತನೊಂದಿಗೆ ಇಂದು ಕೋಕ್ತಿ ನಗರದ 2 ನೇ ಕ್ರಾಸನಲ್ಲಿನ ಮದಿನಾಹಾಲ್ ಮದುವೆ ನಿಶ್ಚಯ ಮಾಡಿದ್ದು ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು. ಮದುವೆ ಕಾರ್ಯಕ್ರಮಕ್ಕೆ ಬಾಗಿಯಾಗುವ 250 ರಿಂದ 400 ಅತಿಥಿಗಳಿಗೆ ಊಟೋಪಚಾರ ಸಿದ್ದಪಡಿಸಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ್ವಯ ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿ ಗಂಗಾ ಗೌಡ, ಕುಸುಮಾ ಗೊಂಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಸುರೇಖಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಸ್ನೇಹಾ ,ಸುನೀಲ ಗಾವಂಕರ್ ನಗರ ಠಾಣೆಯ ಎ. ಎಸ್.ಐ ರಾಥೋಡ್ ಮಹಿಳಾ ಸಿಬ್ಬಂದಿ ಜಯಶ್ರೀ ಸ್ಥಳಕ್ಕೆ ತೆರಳಿ ನಡೆಯಬೇಕಿದ್ದ ಬಾಲ್ಯ ತಡೆದಿದ್ದಾರೆ.
ಅಧಿಕಾರಿಗಳು ಬಾಲ್ಯ ವಿವಾಹದ ಬಗ್ಗೆ ಕಾನೂನಿನ ಸಂಪೂರ್ಣ ಮಾಹಿತಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಹಾಗೂ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದ್ದು. ಯುವತಿಗೆ 18ವರ್ಷ ತುಂಬಿದ ಮೇಲೆಯೆ ನಮ್ಮ ಗಮನಕ್ಕೆ ತಂದು ಮದುವೆ ಮಾಡುವಂತೆ ಯುವತಿ ತಂದೆಯಿಂದ ಹಾಗೂ ಯುವಕನಿಂದಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡಿದ್ದಾರೆ.
ಇದರೊಂದಿಗೆ ಭಟ್ಕಳದಲ್ಲಿ ಒಂದು ವಾರದೊಳಗೆ ಅಧಿಕಾರಿಗಳು ಮೂರು ಬಾಲ್ಯ ವಿವಾಹ ತಡೆದಂತಾಗಿದೆ.
Leave a Comment