ಭಟ್ಕಳ: ಮನೆಯ ಆವರಣದಲ್ಲಿ ಆಟವಾಡುತ್ತಿರುವ ಮಗು ಆಕಸ್ಮಿಕವಾಗಿ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮೇಲಿನ ಗೊರೆಟೆಯಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ಸಾನವಿ ಮಂಜು ನಾಯ್ಕ (ಒಂದುವರೆ ವರ್ಷ) ಎಂದು ಗುರುತಿಸಲಾಗಿದೆ. ಮೇಲಿನ ಗೊರಟೆಯ ಮಂಜುನಾಥ ಹಾಗೂ ಪೂರ್ಣಿಮ ದಂಪತಿಗಳ 2 ನೇ ಮಗುವಾದ ಸಾನವಿ ಅಟವಾಡುತ್ತ ಓರ್ವಳೇ ಮನೆಯ ಎದುರಿನಲ್ಲಿರುವ ಕೃಷಿಗೆ ಸಂಭಂದಿಸಿದ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಈ ಸಂಭಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎ.ಎಸ್.ಐ. ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment